ಚಳಿಗೊಂದು ಕವಿತೆ...ಮನಸ್ಸಿಗೊಂದು ಮೋಹ..!
ಚಳಿಗಾಲವೇ ಹಾಗೆ. ಕಾಡುತ್ತದೆ. ಚೇಡಿಸುತ್ತದೆ.
ಮಳೆಗಾಲ ಹಾಗಲ್ಲ. ಒದ್ದೆ ಮಾಡಿ ಪ್ರಣಯಕ್ಕೆ ಕೊಡೆ ಹಿಡಿಯುತ್ತದೆ.
ಚಳಿಗಾದಲ್ಲಿ ಮೈ ಒಡೆದು, ಮುಖ ರೂಪಕಳೆದು ಕೊಳ್ಳುತ್ತದೆ.
ಹೊರಗಿನ ಚಳಿಗಾಳಿಗೆ ಮನಸ್ಸು ಮೌನವೂ ಆಗುತ್ತದೆ.
ಹೃದಯ ತೆರೆದುಕೊಳ್ಳುತ್ತದೆ. ಬೆಚ್ಚನೆಯ ಒಲವು
ಮಿಡಿಯುತ್ತದೆ.ನೆನಪು ಕಾಡುತ್ತವೆ.
ಮನಸ್ಸಿನ ಮೂಲೆಯಿಂದ ಕನಸ್ಸು ಚೇತರಿಸಿಕೊಳ್ಳುತ್ತದೆ.
ಚಳಿಗಾಲದ ವಿರಹವೇ ಹೀಗೋ..ಮನಸ್ಸೋ ಹಾಗೋ.
ಚಳಿ ಚಹ ಬೇಡುತ್ತದೆ. ಮೈ ಬೆಚ್ಚಗಿನ ಸಾಂಗಂತೆ ಕೇಳುತ್ತದೆ.
ಇದ್ದವರೂ ಸರಿ. ಇಲ್ಲದೇ ಇದ್ದರೂ ಕೊರೆಯುವ ಚಳಿಗೆ
ಕೊರಗೋದೆ ಆಯಿತು.
----
ಚಳಿಗಾಳಿ ಬೀಸಿದೆ..ಹಾಡೊಂದು ಮೂಡಿದೆ.
ನೆನಪಲ್ಲಿ ತೇಲುವ ಹೊತ್ತಿಗೆ.ಒಲವೊಂದು ಕಾಡಿದೆ.
ಅವಳ ಸೆಳೆತದಲ್ಲಿ ಕಳೆದು ಹೋಗುವ ಮುನ್ನ
ಮತ್ತೆ ಗಾಳಿ ಬೀಸಿದೆ..
ಸಾಕೆಂದು ಹೇಳಲು ಆಗದು. ಬೇಕೆಂದು ಕೇಳಲು ಆಗದು
ಚಳಿಯ ನಡುಕಕ್ಕೆ ಕವಿತೆಯೊಂದು ಅರಳಿದೆ. ಅವಳ
ಸುಂದರ ನಗು ಮುಖದ ಹಾಗೆ.
----
ಚಳಿಗೆ ನಾನು ಬರೆಯುತ್ತ ಕುಳಿತೆ. ಅವಳು
ಟೀವಿ ನೋಡುತ್ತ ಕುಳಿತಳು. ವಿರಹ ತಂತಾನೆ ಮೂಡಿತು.
ಬೆಚ್ಚನೆ ಬಟ್ಟೆಗಳಿವೆ. ಮೆಚ್ಚಿದ ಹುಡುಗಿ ದೂರು..ದೂರ.
ಟೀವಿ ಮುಂದೆ...ನಾನು ಹತ್ತಿರ...ಹತ್ತಿರ ಸಿಸ್ಟಂ ಹತ್ತಿರ.
ಇದು ಕಲ್ಪನೆಯಲ್ಲ. ನಿಜವಾದ ಚಳಿಯ ಅನುಭವ.
ಹೊಸ ಅನುಭವ. ಮಾಡ್ರನ್ ಅನುಭವ.
-ರೇವನ್
Comments
ಉ: ಚಳಿಗೊಂದು ಕವಿತೆ...ಮನಸ್ಸಿಗೊಂದು ಮೋಹ..!
ಜೇವೂರ್ ಅವರಿಗೆ ವಂದನೆಗಳು.
ಉತ್ತಮ ಕವಿತೆ.