ಚಾರುಲತೆ - ಒಂದು ಗಝಲ್

ಚಾರುಲತೆ - ಒಂದು ಗಝಲ್

ಕವನ

ರಂಗಭೋಗದಲಿ ತಕಥೈಯೆಂದು

ಕುಣಿದಳು ಚಾರುಲತೆ

ಕಂಗಳ ನೋಟದಿ ಇನಿಯಗೆ

ಒಲಿದಳು ಚಾರುಲತೆ||

 

ಶಾಂತಲೆಯ ರೂಪದ

ನಾಟ್ಯರಾಣಿ ಅಭಿನೇತ್ರಿ|

ಕಾಂತನೊಲುಮೆಯ ಪರಿ

ಮೆಚ್ಚಿದಳು ಚಾರುಲತೆ||

 

ಹೆಜ್ಜೆಹೆಜ್ಜೆಗೆ ಗತ್ತುಗಮ್ಮತ್ತು

ತೋರುತ ನಿಂತಿರುವೆ

ಗೆಜ್ಜೆಯ ಗಿಲ್ ಗಿಲ್ ನಾದದಲಿ

ನಲಿದಳು ಚಾರುಲತೆ||

 

ಕನಸನುಗಳನ್ನು ಅಪಹರಿಸಿದ

ಮೋಹಕ ಬೆಡಗಿಯಾಗಿರುವೆ

ಮನಸನ್ನು ಮೋಡಿ ಮಾಡುತ

ಸೆಳೆದಳು ಚಾರುಲತೆ||

 

ಅಭಿನವನಿಗಾಗಿ ಅಧರದಲಿ

ಸವಿಜೇನ ಇರಿಸಿದಳು

ಶೋಭಿಸುತ ಹೃದಯವನು

ಸೇರಿದಳು ಚಾರುಲತೆ||

 

-*ಶಂಕರಾನಂದ ಹೆಬ್ಬಾಳ*, ಕನ್ನಡ ಉಪನ್ಯಾಸಕರು 

 

ಚಿತ್ರ್