ಚಿತ್ರಕ್ಕೆ ಗಝಲ್
ಕವನ
ನಿನ್ನಯ ಪ್ರೀತಿಯ ಉಸಿರಲ್ಲಿ ಬೆರೆಸಿ ಹೋಗಲೆ ಇನಿಯಾ
ಮೌನದ ನಗುವನಿಂದು ಕರೆಸಿ ಹೋಗಲೆ ಇನಿಯಾ
ಸನ್ಮೋಹನ ಮನ್ಮಥನ ಹತ್ತಿರ ಜೊತೆಗಿರಲೇ ಹೀಗೆ
ಮೋಹನ ವೇಣುಗಾನವ ನುಡಿಸಿ ಹೋಗಲೆ ಇನಿಯಾ
ಬಳಿಯಿದ್ದರೂ ದೂರವಿದ್ದವನಂತೆ ಏಕಿರುವೆ ಹೇಳು
ಸಾಂಗತ್ಯದ ಒಲವಿನ ಮೆರೆಸಿ ಹೋಗಲೆ ಇನಿಯಾ
ಚಿತ್ತಾರದ ನಡುವೆಯೂ ಮುಗುಳಲೆಯ ತೋರಿಸಿದೆ ಏನು
ಯೌವನದ ಸಿಹಿ ಸವಿಗಳ ಉಣಿಸಿ ಹೋಗಲೆ ಇನಿಯಾ
ಮನಸಿನಾಳದ ನೋವ ಮರೆಯ ಬಂದಿರುವೆ ನೋಡು
ಕನಸುಗಳ ಎಲ್ಲವನು ಮೂಟೆ ಕಟ್ಟಿಸಿ ಹೋಗಲೆ ಇನಿಯಾ
ಚಿಂತನೆಯ ನಡುವೆಯೂ ಮದುವಣಗಿತ್ತಿ ಸಿಂಗರಿಸಿ ನಿಂದಿಹಳು
ಮಂದಾರ ಪುಷ್ಪಗಳ ಸುರಿಸಿ ಹೋಗಲೆ ಇನಿಯಾ
ರತುನಾಳ ಬದುಕಿನಲ್ಲಿ ರಾಧಾಕೃಷ್ಣರ ಪ್ರೇಮವೇ ಸಾಕ್ಷಿ
ಜೀವನದಿ ಮಧುರ ಸಂಗೀತವ ಹರಿಸಿ ಹೋಗಲೆ ಇನಿಯಾ
-ರತ್ನಾ ಕೆ.ಭಟ್,ತಲಂಜೇರಿ
ಚಿತ್ರ್
