ಚಿತ್ರದುರ್ಗದ ಪಾಳೆಯಗಾರರು - ಶ್ರೀ ಎಮ್. ಎಸ್. ಪುಟ್ಟಣ್ಣ. ಬಿ. ಎ ;

ಚಿತ್ರದುರ್ಗದ ಪಾಳೆಯಗಾರರು - ಶ್ರೀ ಎಮ್. ಎಸ್. ಪುಟ್ಟಣ್ಣ. ಬಿ. ಎ ;

ಬರಹ

ಚಿತ್ರದುರ್ಗದ ಪಾಳೆಯಗಾರರು - ಶ್ರೀ ಎಮ್. ಎಸ್. ಪುಟ್ಟಣ್ಣ. ಬಿ. ಎ ;

* ಈ ಶೀರ್ಶಿಕೆಯಲ್ಲಿ ಈಗಾಗಲೇ ’ಡಿಜಿಟಲ್”ಆವೃತ್ತಿಯನ್ನು ಶ್ರೀ ಎಚ್. ಪಿ. ನಾಡಿಗ್ ರವರು ನಮಗೆ ಕೊಟ್ಟಿದ್ದಾರೆ. ಅದನ್ನು ಎಲ್ಲರಿಗೂ ಕಾಣಿಸಲು ಇದನ್ನು ನಕಲುಮಾಡಿದ್ದೇನೆ. ಉಪಯೋಗವಾಗಬಹುದೇನೋ !

ಅಕ್ಟೋಬರ್, ೨೯, ೧೯೨೪ ರಲ್ಲಿ ದಿ ಪವರ್ ಪ್ರಿಂಟಿಂಗ್ ಪ್ರೆಸ್,ಚಿಕ್ಕಪೇಟೆ, ಬೆಂಗಳೂರು ನಗರದಲ್ಲಿ ಮುದ್ರಿಸಲ್ಪಟ್ಟಿತು.

ಸುಲ್ತಾನಿ ನಗರದ ಶಾನುಭೊಗ,[ಈಗಿನ ಚಿತ್ರದುರ್ಗದ ಹತ್ತಿರವೇ] ಚಿನ್ನದಮನೆ ರಾಮಂಣನವರ ಮನೆಯಲ್ಲಿ ಲಕ್ಷಣವಾಗಿ ಅಚ್ಚುಕಟ್ಟಾಗಿ ಶೇಖರಿಸಿಟ್ಟ ಓಲೆಗರಿಯ ಪ್ರತಿಗಳು ಮತ್ತು ನಾಯಕರ ವಂಶಸ್ತರ ಮನೆಗಳಲ್ಲಿ ದೊರೆತ ಚಿಕ್ಕ ಪುಟ್ಟ ಮಹತ್ವದ ವಿಷಯಗಳನ್ನೂ ಸೇರಿಸಿ ಈ ಪುಸ್ತಕವನ್ನು ಪ್ರಕಟಿಸಲಾಗಿದೆ.

ಚಿತ್ರದುರ್ಗದ ಮೊದಲ ಹೆಸರು ತಾಳೆಗರಿಯಲ್ಲಿ ನಮೂದಿಸಿರುವುದು ಚಿನ್ಮೂಲಗಿರಿದುರ್ಗ ಎಂದು ; ಇನ್ನೂ ಕೆಲವು ಶಿಲಾಶಾಸನಗಳಲ್ಲಿ 'ರೈಸ್' ಸಾಹೇಬರು ಹೇಳುವಂತೆ, 'ಬೆಮ್ಮತ್ತನೂರು' ಅಥವ 'ಬೆಮ್ಮಚ್ಚನೂರು' ಎಂದೂ ಹೇಳಲಾಗಿದೆ. ೧೪೯೦ ರಲ್ಲೇ ದುರ್ಗದ ನಾಯಕರು ಜನರಾ ಅಪ್ಪಣೆ ಕೊಟ್ಟರು. ಇವರು ಹಿರಿಯರುಗಲು ಶ. ೧೪೭೮ ನೇ ನಳ ಸಂವತ್ಸರದಲ್ಲಿ ಈ ನಾಡಿನಲ್ಲಿ ಗರಿಕಟ್ಟಿಕೊಂಡು ಸಿದ್ಧರಗಿದ್ದರು. ಚಿತ್ರದುರ್ಗದ ಕೋಟೆಯನ್ನು ನಿರ್ಮಿಸಿದ ಖ್ಯಾತಿ ಇವನಿಗೇ ಸಲ್ಲುತ್ತದೆ. ೬ ನೇ ತಲಮಾರಿನ ತನಕ ಆಳಿ ನಿರ್ವಂಶರಾಗುವತನಕ. ೨ ನೇ ದೊರೆ ಓಬಣ್ಣನಾಯಕನಿಗೇ ರಸಸಿದ್ಧರು 'ಮದಕರಿನಾಯಕ'ನೆಂದು ಬಿರುದು ಕೊಟ್ಟು ಸನ್ಮಾನಿಸಿದರು. ಮದಿಸಿದ ಆನೆಯಷ್ಟು ಧರ್ಯಶಾಲಿಯಾಗಿ ಯಾರನ್ನೂ ಲೆಕ್ಕಿಸದೆ ಮುಂದುವರೆಯುವ 'ಗಂಡುಗಲಿ' ಎಂದರ್ಥ.ಕಾಮಗೇತಿ ವಂಶದ ನಾಯಕರು ಮೊದಲು, ಉತ್ತರ ದೇಶದ ಜಡಕಲ್ಲು ದುರ್ಗದ ದಿಳ್ಳೀ ನಡತಳವಾರರು ವಾಲ್ಮೀಕಿ ಗೋತ್ರದವರು. ಮೂರು ಸಹೊದರರು ; ೧. ಸಬ್ಬಗಡಿ ಓಬನಾಯಕ, ೨. ಜಡವಿನಾಯಕ, ೩. ಬುಳ್ಳನಾಯಕ. ಅಲ್ಲಿ ಆದ ಏನೋ ಅವಂತರದಿಂದ ತಮ್ಮ ಮನೆದೇವರು, ಅಹೋಬಲ ನರಸಿಂಹಸ್ವಾಮಿ ದೇವರ ಪೆಟ್ಟಿಗೆ ತುರು, ಕುರಿ, ಕೊಲ್ಲಾರಿ, ಮುಂತಾದ ಕಂಪಳಗಳನು ತೆರಳಿಸಿಕೊಂಡು ದಕ್ಷಿಣ ದೇಶಕ್ಕೆ ಬಂದರು. ದಾರಿಯಲ್ಲಿ ವಿಜಯನಗರ ದಲ್ಲಿ ಇಳಿದು ಹಂಪೆ ವಿರೂಪಾಕ್ಷಸ್ವಾಮಿಯ ದರ್ಶನ ಮಾಡಿ, ಬರುವಾಗ ಆನೆಗೊಂದಿ ಸ್ಥಾಲನವರು ವಿರೂಪಾಕ್ಷದೇವರ ಗುಡಿಯಲ್ಲಿ ಮಂತ್ರಪುಷ್ಪದ ಕೆಲಸಮಾಡುತ್ತಿದ್ದ ಕರಿಜೋಯಿಸ ವಿರೂಪಾಕ್ಷಜೋಯಿಸ ಈ ಇಬ್ಬರು ಹುಡುಗರು ನಾಡ ತಳವಾರರ ಬೆನ್ನು ಹತ್ತಿ ಬಂದು ಮೇಲೆ ತಿಳಿಸಿದ ೩ ತಳವಾರರು ಬಿಳಿಚೋಡಿಗೆ ಬಂದು ರೊಪ್ಪ ಹಾಕಿಕೊಂಡು ೩ ತಿಂಗಳು ಕಾಲಹಾಕಿದರು. ಬಿಳಿಚೋಡು ಪಂಚಾಂಗದ ಜೋಯಿಸರು ನಷ್ಟ ಸಂತಾನ ಗ್ರಾಮದ ಗೌಡ, ಸೇನಭೋಗ ನಾಯಕವಾಡಿ ಮುಂತಾದವರು ಹೇಳಿ ಈ ಕರಿ ಜೋಯಿಸ ವಿರುಪಾಕ್ಷಜೋಯಿಸರಿಗೆ ಭೊಗಪಟ್ಟೆ ಬರೆಸಿಕೊಟ್ಟು, ಅವರನ್ನು ಆಸ್ಥಳದ ಜೊಯಿಸಿಸರನ್ನಾಗಿ ನೇಮಕ ನಾಯಕರು ನೀರುತಡಿ ಎಂಬ ಗ್ರಾಮದ ಬಳಿ ರೊಪ್ಪದಲ್ಲಿದ್ದರು. ದೇವರನ್ನು ತಲೆಯಮೇಲೆ ಇಟ್ಟುಕೊಂಡು ತಿರುಗುತ್ತಾಯಿದ್ದಾಗ ದೇವರು ಕನಸಿನಲ್ಲಿ ಕಾಣಿಸಿಕೊಂಡು, ಇಲ್ಲೇ ಗುಡಿ ಕಟ್ಟಿಸಿ ನಾನು ಈ ಗ್ರಾಮದಲ್ಲೇ ಇರುತ್ತೇನೆ ಎಂದು ಅಪ್ಪಣೆಕೊಡಿಸಿದಮೇರೆಗೆ ತಾವು ಎಡಬಲದಲ್ಲಿ ಕಾವಲು ಕಾಯುತ್ತಿದ್ದರು. ಜಡಕಲ್ಲು ನಾಯಕನ ಮಗ ಹಿರಿಹನುಮನಾಯಕ, ಸಾಗಲೆ ಗ್ರಾಮದಲ್ಲಿ ನಿಂತನು. ಸಬ್ಬಗಡಿ ಓಬನಾಯಕನ ಮಗ ತಿಂಮನಾಯಕ ಮತ್ತಿ ಗ್ರಾಮದಲಿ ನಿಂತ. ಬುಳ್ಳನಾಯಕನು ಮಕ್ಕಳಾದ ೧. ಚಿಕ್ಕ ಹನುಮನಾಯಕ ೨. ಓಬಂಣನಾಯಕ, ಬಿಳಿಚೊಡಿನಲ್ಲಿ ನೆಲೆಸಿದರು. ಇದರಿಂದ ಆದ ಮುಂದಿನ ಭಾಗವೆಲ್ಲಾ ಇತಿಹಾಸ. ಕಥೆ ಹೀಗೆಯೇ ಮುಂದುವರಿಯುತ್ತದೆ. ಕೊನೆಗೆ ಎರಡು ವಂಶದ ನಾಯಕರುಗಳು ಒಟ್ಟು ೨೧೦ ವರ್ಷ ಚಿತ್ರದುರ್ಗದ ಆಧಿಪತ್ಯ ಮಾಡುತ್ತಾರೆ. ಮೂಲತಹಃ ಅವರು ಒಂದು ಬೇಡರ ಅಥವ ’ವ್ಯಾಧ”ರ ಕುಲಕ್ಕೆ ಸೇರಿದವರು. ಆದರೆ ದೈವಭಕ್ತರು. ಮತ್ತು ರಾಜ್ಯವನ್ನು ಚೆನ್ನಾಗಿ ಆಳಿದ ದಾಖಲೆಗಳಿವೆ. ಹೊಳಲ್ಕೆರೆಯ ಗಣೇಶನ ಗುಡಿಯನ್ನು ಕಟ್ಟಿಸಿದ ಸಂಗತಿ ಪುಟ್ಟಣ್ಣನವರ ಕೃತಿಯಲ್ಲಿ ಹೆಚ್ಚಾಗಿ ಕಾಣಲಿಲ್ಲ. [ನಾನು ಇನ್ನೂ ಪುಸ್ತಕವನ್ನು ಪೂರ್ತಿ ಓದಿಲ್ಲ ; ನನ್ನ ಕಣ್ಣಿನ ದೊಷವಿರಲಿಕ್ಕೂ ಸಾಕು. ಆದರೆ ಹೊಳಲ್ಕೆರೆ ಗಣಪನ ಮೂರ್ತಿಯ ಕೆಳಗೆ ಕಾಮಗೇತಿ ವಂಶದ ನಾಯಕರ ಹೆಸರನ್ನು ಸ್ಪಷ್ಟವಾಗಿ ಕೆತ್ತಿರುವುದನ್ನು ನಾವು ಇಂದಿಗೂ ನೋಡಬಹುದು.] ಮುಂದೆ ಬಿಳಿಚೋಡು ವಂಶಸ್ಥರು ದೊರೆತನವನ್ನು ಮುಂದುವರೆಸಿಕೊಂಡು ಹೋಗುತ್ತಾರೆ. ಅವರಲ್ಲಿ ಪ್ರಮುಖನಾದವನು ಭರಮಪ್ಪ ನಾಯಕ. ಇವನು ಕೆರೆ ಕಟ್ಟೆಗಗಳನ್ನು ಕಟ್ಟಿಸಿ ಜನರಿಗೆ ಸಹಾಯಮಾಡಿದನು. ೧೪೮೫ ರುಧಿರೊದ್ಗಾರ ಸಂವತ್ಸರದಲ್ಲಿ ವೈಶಾಖ ಶುಕ್ಲ ೧೦ ರ ಮಂಗಳವಾರದಂದು ಹೊಳಲ್ಕೆರೆಯಲ್ಲಿ ಗೋಪಾಲಸ್ವಾಮಿದೇವಸ್ಥಾನವನ್ನು ಕಟ್ಟಿಸಿದರಂತೆ. ೨೧೧ ವರ್ಷಗಳ ಆಡಳಿತದಲ್ಲಿ ಒಟ್ಟು ರಾಜ್ಯವಾಳಿದ ನಾಯಕರುಗಳ ಸಂಖ್ಯೆ ೧೦. ಕಾಲಾನುಸರಣಿಕೆಯಲ್ಲಿ ಉಲ್ಲೇಖಿಸಿರುವಂತೆ, ಶಾಲಿವಾಹನ ಶಕೆ ೧೪೯೮ ರಲ್ಲಿ ನಾಡ ತಳವಾರರು ವಿಜಯನಗರದ ಮತ್ತಿ ತಿಮ್ಮಣ್ಣನಾಯಕನನ್ನು ಪಾಳೆಯಗಾರನಾಗಿ ನೇಮಿಸಿದರು. ಮೊದಲ ನಾಯಕ, ಮತ್ತಿ ತಿಮ್ಮಣ್ಣನಾಯಕನೇ ಮೂಲಪುರುಷನೆಂದು ದಾಖಲಾಗಿದೆ. [೧೪೯೦-೧೫೧೧] ೧೭೦೦ ರಲ್ಲಿ ಹೈದರನ ಪಡೆ ದುರ್ಗದ ನಾಯಕರನ್ನು ಸೋಲಿಸಿ ಜಯಗಳಿಸಿತು. ಶಕೆ ೧೭೭೭- ೭೮ ವಿಳಂಬಿ ಸಂವತ್ಸರ

ಅದಕಂಡು ಮೆಚ್ಚಿ ಪಛಾವ ಭರಮಪ್ಪ ನಾಯಕನ ಪರಾಕ್ರಮ ಹೊಗಳಿ ಭಟರಾಜರು ಹೇಳುವ 'ಸಮರ ವಿಜಯ' ವೆಂಬ ಶಿರೋನಾಮದಲ್ಲಿ ಕೆಲವು ಪದ್ಯಗಳನ್ನು ಬರೆದಿದ್ದಾರೆ : ಅವುಗಳ ಕೆಲವು ಸಾಲುಗಳು ಕೆಳಗೆ ಇವೆ.
ಭುವನದೊಳ್ ಚಿನ್ಮೂಲಾದ್ರಿಯ ರಾಜಧಾನಿಯೊಳ್ ಯುವರಾಜಸ್ಥಿರ ಪಟ್ಟಭದ್ರ ಕರುಣಾ ಸಮುದ್ರ ಪರಸೈನ್ಯ ಛಿದ್ರ.

ಶರಧಿ ಮಧ್ಯದಲಿ ಚಂದ್ರನು ಸಿದಂದದಲಿ .

ವರಕಾಮಗೇತಿ ವಂಶದೊಳು ಪುಟ್ಟಿ ಸೌಖ್ಯದೊಳು ಬಾಳು ಕೃಪಾಳು ..

ಖಾನ ಖಾನರನೆಲ್ಲ ಸದೆದು ಕಪ್ಪವ ತಂದೆ.

ಈ ನಿನ್ನ ಶೌರ್ಯಕೆಣೆಯಿಲ್ಲ ರಣರಂಗಮಲ್ಲ.

ನಿನಗೆ ಸರಿಯಿಲ್ಲ..

ದೊಡ್ಡೇರಿಯನು ಮುದದಿಂದ ಕೊಡಲು ಕೈಕೊಂಡ ..

ಕದನ ಪ್ರಚಂಡ .

ಭಾಪು ದೋದಕಂಡಮೈಲಾರ ಮೊದಲಾದ ಸೀಮೆಗಳ ಜೈಸಿಕೊಂ ಡೇಳಿಗೆಯ ಭುಜಶಕ್ತಿಯಿಂದೆ.

ದುರ್ಗಕೈತಂದೆ.

ತೂರ್ಯರವದಿಂದೆ..

ಇದಿರು ದಂಡನು ಬಿಟ್ಟು

ಬದಗಿಸಮನಾಳಗದಿ.

ಕದನವನು ಗೆಲಿದ ಹಮ್ಮೀರ.

ಭಲರೆ ಮೊನೆಗಾರ.

ಅಸಹಾಯ ಶೂರ.

ಚಿನ್ಮೂಲಗಿರೀಶ.

ಚನ್ನಿಗವಿಲಾಸ.

ಮೊನ್ನೆ ಯಲಲಾಮ.

ಅಮಿತಗುಣಧಾಮ..

ಕೊಡಗೈಯ ಕರ್ಣ.

ಕರುಣಾ ಸಂಪೂರ್ಣ.

ನುಡಿ ರಾಮ ಬಾಣ..

ನೂತನ ಶರೀರ.

ಮಾರನವತಾರ.

ನೆರೆ ಪುಣ್ಯ ಕಾಂತ

ಪರಮಾಯುವಂತ..

ಪುಸ್ತಕದಲ್ಲಿ ಬರುವ ಕೆಲವು ಪದಗಳ ಅರ್ಥ :

೧. ಕುಲಾಲ- ಕುಂಬಾರ. ೨. . ನಾಪಿತ- ಕ್ಷೌರಿಕ ೩. . ರಜಕ- ಅಗಸ೪. . ಬಾರಿಕ- ನೀರಗಂಟಿ. ಉಲುಪೆ- ಒಂದು ಕೆಲಸ ಮಾಡಲು ಜನಸಹಾಯಕ್ಕೆ- ಈಗಿನಿನಕಾಲದ ಚಂದ. ಎಕ್ಕಂಡೆ ಸಿಪಾಯಿ- ಬಲವಾದ ಸಿಪಾಯಿಕಂಪಳ- ಕೂಟ, ಜೀತದಾಳು- ಸರ್ಕಾರದ ಸಹಾಯವಿಲ್ಲದೆ ಸ್ವಂತವಾಗಿ ಹಣಕೊಟ್ಟು ಇಟ್ಟುಕೊಂಡ ಕೂಲಿಯಾಳು.ಕೊಲ್ಲಾರಿ- ಮುಖಂಡ.ಖಂಡಣಿ- ಹಣಖಡೆ- ಕೈಗೆ ಹಾಕಿದ ಚಿನ್ನದ ಬಳೆ- ಬಿರುದು ಗೊಲಂದಾಸು - ಫಿರಂಗಿ ಸಿಪಾಯಿಛತ್ರಪತಿ- ಖಡೆಯ ಶೊವಂತ.ತಾಕು ವೇಕಿನ ಮಾತು- ಅಹಂಕಾರದ ಲಕ್ಷ್ಯವಿಲ್ಲದ ಮಾತು. ದರಶನ ಕಟ್ಟುವುದು-ಜೋಗಿತ್ತೀರಹಾಬಿಳೀ ಮಣಿ ಹವಳದ್ದು ಮಣಿಸರ ಹಾಕಿಕೊಂಡವಳುದಂಡಕ- ವಿಧಿ ವಡಿಕೆ.ದಿವಾಣ- ಬೊಕ್ಕಸ, ಸರ್ಕಾರ. ನಾಗತಿ- ನಾಯಕರ ಹೆಂಡತಿನಾಕಚಾತ್ರ- ಚಿಕ್ಕ ಪುಟ್ಟ ಸಾಮಾನುಗಳನ್ನು ಚೀಲದಲ್ಲಿ ಹಾಕಿ ಬೆನ್ನಿಗೆ ಕಟ್ಟಿಕೊಳ್ಳುವ ಈಗಿನ 'ನ್ಯಾಪ್ ಸ್ಯಾಕ್' ಇದ್ದಿರಬಹುದು.

ಹೊಲಬು- ಸರಹದ್ದು. ಇತ್ಯಾದಿ.