ಚಿತ್ರಮಂದಿರ ಕ್ಲೋಸ್ ಆಗಿವೆ.!

ಚಿತ್ರಮಂದಿರ ಕ್ಲೋಸ್ ಆಗಿವೆ.!

ತ್ರಿಭುವನ್-ಕೈಲಾಸ್​ ಕ್ಲೋಸ್ !1974 ರಲ್ಲಿ ಚಿತ್ರಮಂದಿರ ನಿರ್ಮಾಣ. 42 ವರ್ಷದ ಸುದಿರ್ಘ ಪಯಣ ಅಂತ್ಯ.ತ್ರಿಭುವನಲ್ಲಿ ಮೊದಲು ಶ್ರೀನಿವಾಸ ಕಲ್ಯಾಣ್. ಕೈಲಾಶ್ ನಲ್ಲಿ ಆಂಧಿ ಚಿತ್ರ ತೆರೆ ಕಂಡಿತ್ತು.ಕೊನೆ ಆಟದಲ್ಲಿ ಲಾಲ್ ರಂಗ್ ಸಿನಿಮಾ .ಕೈಲಾಶ್ ನಲ್ಲಿ ತೆಲುಗು ಸಿನಿಮಾ ಪ್ರದರ್ಶನ.
----
ಒಂದು ಕೈಲಾಶ್. ಮತ್ತೊಂದು ತ್ರಿಭುವನ್. ಗಾಂಧಿನಗರಿಗರ ಅಚ್ಚು-ಮೆಚ್ಚಿನ ಚಿತ್ರ ಮಂದಿರಗಳು. ಕೆ.ಜಿ.ರಸ್ತೆಯಲ್ಲಿ ತೆರೆ ಕಂಡ ಸಿನಿಮಾಗಳಿಗೆ ಇವೇ ಥಿಯೇಟರ್ಗಳು ಕೊನೆಯ ನಿಲ್ದಾಣಗಳು. ಎಲ್ಲೂ ಸಲ್ಲದ ಚಿತ್ರಗಳಿಗೆ ಇಲ್ಲಿ ಬೆಚ್ಚನೆಯ ಸ್ವಾಗತ ಇರುತ್ತಿತ್ತು. ಆದರೆ, ಈಗ ಆ ಚಿತ್ರಮಂದಿರಗಳು ಇತಿಹಾಸ ಪುಟ ಸೇರಿವೆ. 42 ವರ್ಷದ ಸುದಿರ್ಘ ಪಯಣ ಮುಗಿಸಿವೆ. ಕಾಲನ ಕಾಟಕ್ಕೆ ಅಲ್ಲ. ಮಲ್ಟಿಪ್ಲೆಕ್ಸ್​ನ ಅಟ್ಟಹಾಸಕ್ಕೆ..

ಚಿತ್ರಮಂದಿರಗಳು ಇಲ್ಲವೇ ಇಲ್ಲ. ಇದ್ದವುಗಳು ಬೆರೆಳಣಿಕೆ. ಅವುಗಳಲ್ಲಿಯೇ ಈಗ ಕೆಲವು ನೆಲಸಮ ಗೊಳುತ್ತಿವೆ. ಕನ್ನಡ ಚಿತ್ರಗಳು ಮತ್ತೆ ಥಿಯೇಟರ್​ ಕೊರತೆ ಅನುಭವಿಸಬೇಕಿದೆ. ಮೊದಲಿದ್ದ ಆ ನೋವು ಇಮ್ಮಡಿಗೊಳ್ಳಲಿದೆ. ಒಂದಲ್ಲ. ಒಟ್ಟಿಗೆ ಎರಡು ಚಿತ್ರಮಂದಿರ ನೆಲಸಮಗೊಳ್ಳುತ್ತಿವೆ. ಆ ಜಾಗದಲ್ಲಿ ಏನ್ ಎದ್ದು ನಿಲ್ಲುತ್ತವೆಯೋ ಏನೋ. ಮಲ್ಟಿಪ್ಲೆಕ್ಸ್  ಎಂಬ ಮಾತು ಸದ್ಯಕ್ಕೆ ಕೇಳಿ ಬರುತ್ತಿವೆ.

ಗಾಂಧಿನಗರದ ಗ್ರೀನ್ ಹೌಸ್ ಪಕ್ಕ ಇದೆ ತ್ರಿಭುವನ್ ಥಿಯೇಟರ್.ಅದೇ ಬಿಲ್ಡಿಂಗ್ ನ ಗ್ರೌಂಡ್​ ಫ್ಲೋರ್​ ನಲ್ಲಿ  ಕೈಲಾಷ್ ಥಿಯೇಟರ್​  ಇದೆ. 1974 ರಲ್ಲಿ ಈ ಚಿತ್ರಮಂದಿರಗಳು ನಿರ್ಮಾಣಗೊಂಡಿವೆ. ಮೂರನೇ ಫ್ಲೋರ್​ನಲ್ಲಿ ತ್ರಿಭುವನ್ ಥಿಯೇಟರ್​ ಇದೆ. ಲಿಫ್ಟ್ ಹತ್ತಿಯೇ ಈ ಚಿತ್ರ ಮಂದಿರಕ್ಕೆ ಹೋಗಬೇಕು. ಉತ್ಸಾಹಿ ಯುವಕರು ಚಿತ್ರದ ಹುಚ್ಚಿನಿಂದ ಮೆಟ್ಟಿಲು ಹತ್ತಿಕೊಂಡೇ ಓಡುತ್ತಿದ್ದರು. ಡಾಕ್ಟರ್ ರಾಜ್ ಅಭಿನಯದ ಶ್ರೀನಿವಾಸ ಕಲ್ಯಾಣ ಚಿತ್ರ ಮೊದಲು ಈ ಚಿತ್ರಮಂದಿರದಲ್ಲಿ ತೆರೆಕಂಡಿತ್ತು.ಭರ್ಜರಿ ಪ್ರದರ್ಶನವೂ ಕಂಡಿತ್ತು. ಅದು ಈಗ ಇತಿಹಾಸ. ಕೊನೆಯದಾಗಿ 28.04.16 ರಂದು ಅದೇ ಥಿಯೇಟರ್​ ನಲ್ಲಿ ರಣದೀಪ್ ಹುಡಾ ಅಭಿನಯದ ಲಾಲ್ ರಂಗ್ ಚಿತ್ರ ಪ್ರದರ್ಶನ ಕಂಡಿದೆ.ಅಲ್ಲಿಗೆ ತ್ರಿಭುವನ್ ತನ್ನ ಕೊನೆ ಆಟ 7.30 ಕ್ಕೆ  ಲಾಲ್ ರಂಗ ಚಿತ್ರ ಪ್ರದರ್ಶನದ ಮೂಲಕ ಮುಗಿಸಿದೆ.

ಕೈಲಾಷ್ ಚಿತ್ರದಮಂದಿರದ ಕಥೆನೂ ಇಷ್ಟೆ.  ಈ ಚಿತ್ರದ ಮಂದಿರದಲ್ಲಿ ಮೊದಲು ಆಂಧಿ ಚಿತ್ರ ಪ್ರದರ್ಶನ ಕಂಡಿದೆ. ಗುಲ್ಜಾರ್ ನಿರ್ದೇಶನದ ಈ ಚಿತ್ರದಲ್ಲಿ ಸಂಜೀವ ಕುಮಾರ್ ಅಭಿನಯಿಸಿದ್ದರು. ಮೊದಲ ಚಿತ್ರ ಪ್ರದರ್ಶನದ ಈ ಇತಿಹಾಸ ಹೊಂದಿದ ಕೈಲಾಷ್ ನಲ್ಲಿ ಕೊನೆಯದಾಗಿ ಪ್ರದರ್ಶನ ಕಂಡ ಚಿತ್ರ, ತೆಲುಗು ಭಾಷೆಯ ಎದೊ ರಕಮ್ ಅದೋ ರಕಮ್. (Eedo Rakam Aado Rakam)

ತ್ರಿಭುವನ್ ಮತ್ತು ಕೈಲಾಷ್ ಸುಸಜ್ಜಿತ ಚಿತ್ರಮಂದಿರಗಳು. ಆಗಿನ ಕಾಲದಲ್ಲಿಯೇ ಆಧುನಿಕವಾಗಿದ್ದವು. ಅಷ್ಟೇ ಹೆಸರು ಮಾಡಿದ್ದವು. ಕನ್ನಡದ ಹೆಸರಾಂತ ನಾಯಕ ನಟರ ಅನೇಕ ಚಿತ್ರಗಳು ಇಲ್ಲಿ ನೂರು ದಿನ ಓಡಿವೆ.ಹೊಸಬರ ರಂಗಿತರಂಗ, ಫಸ್ಟ್​ ರಾಂಕ್ ರಾಜು ಚಿತ್ರಗಳು ಇವೇ ಚಿತ್ರ ಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿವೆ.ಅದೇಷ್ಟೋ ಚಿತ್ರಗಳಿಗೆ ಈ ಎರಡೂ ಚಿತ್ರಮಂದಿರಗಳು ಕೊನೆಯ ನಿಲ್ದಾಣದಂತೆ ಶಾಶ್ವತ ಆಶ್ರಯವನ್ನೂ ಕೊಟ್ಟು ಶತ ದಿನಗಳನ್ನ ಪೂರೈಸೋವಂತೆ ಮಾಡಿವೆ.

ಆದರೆ, ಈಗ ಈ ಚಿತ್ರಮಂದಿರಗಳು ಇಲ್ಲವಾಗುತ್ತಿವೆ. 28.04.16 ರಂದು ಕೊನೆಯ ಆಟ ಪೂರ್ಣಗೊಳಿಸಿವೆ. ನಂಬಿಕೊಂಡು 20-30 ವರ್ಷ ಕೆಲಸ ಮಾಡಿದ ಸುಮಾರು 30-40 ಕಾರ್ಮಿಕರನ್ನ ಕೆಲಸವಿಲ್ಲದಂತೆ ಮಾಡಿವೆ. ಆದರೆ, ಚಿತ್ರಮಂದಿರದ ಮಾಲೀಕರು ಈ ಕಾರ್ಮಿಕರನ್ನ ಮಕ್ಕಳಂತೆ ಸಾಕಿದ್ದಾರೆ. ಸಲುಹಿದ್ದಾರೆ. ಆದರೂ, ಬದಲಾವಣೆ ಪರ್ವಕ್ಕೆ  ಸಿಂಗಲ್ ಥಿಯೇಟರ್​ ಗಳು ನೆಲಸಮಗೊಂಡು ಇತಿಹಾಸಪುಟ ಸೇರುತ್ತಿವೆ.

-ರೇವನ್ ಪಿ.ಜೇವೂರ್​