ಚಿತ್ರರಂಗದ ಒಗ್ಗಟ್ಟಿನ ಬರಹ !

ಚಿತ್ರರಂಗದ ಒಗ್ಗಟ್ಟಿನ ಬರಹ !

ಚಿತ್ರರಂಗದ ಒಗ್ಗಟ್ಟಿನ ಬರಹ ! ‘ಪ್ರೇಮ ಬರಹ’ದ ಹೊಸ ಬರಹ. ಅರ್ಜುನ್ ಸರ್ಜಾ ಪುತ್ರಿ ಪ್ರಥಮ ಚಿತ್ರ.ಪ್ರೇಮ ಬರಹದ ಮೂಲಕ ಐಶು ಎಂಟ್ರಿ.ಐಶ್ವರ್ಯ ಲಾಂಚ್​ ಗೆ ದಿಗ್ಗಜರ ಸಮಾಗಮ.ಬ್ಲಾಕ್ ಬ್ಲೆಜರ್ ಧರಿಸಿದ್ದ  ನಮ್ಮ ಸ್ಟಾರ್ಸ್ .ಅದ್ಧೂರಿ ಲಾಂಚ್​ಗೆ ದಿಗ್ಗಜರ ಶುಭ ಹಾರೈಕೆ.ಚೆಂದನ್-ಐಶ್ವರ್ಯ ನಟನೆ ಪ್ರೇಮ ಬರಹ.ಅರ್ಜುನ್​ ಸರ್ಜಾ ನಿರ್ದೇಶನ-ನಿರ್ಮಾಣ
ಜೆಸ್ಸಿ ಗಿಫ್ಟ್ ಸಂಗೀತದಲ್ಲಿ ಪ್ರೇಮ ಬರಹ.ವೇಣು ಛಾಯಾಗ್ರಾಹದಲ್ಲಿ ಅರ್ಜುನ್ ಚಿತ್ರ

------
ಕನ್ನಡ ಚಿತ್ರರಂಗ ಒಂದೇ ಜಾಗದಲ್ಲಿತ್ತು. ಆಗ ಅಲ್ಲಿ ಹರ್ಷಕ್ಕೆ ಪಾರವೇ ಇರಲಿಲ್ಲ. ಎಲ್ಲ ರ ಮುಖದಲ್ಲೂ ಮಂದಹಾಸ. ಬಹು ದಿನಗಳ ನಂತರ ಜತೆಗೂಡುತ್ತಿದ್ದೇವೆಂಬ ಖುಷಿ. ಈ ಒಂದು ಸಮಾಗಮಕ್ಕೆ  ಬ್ಲಾಕ್ ಅಂಡ್ ಬ್ಲ್ಯಾಕ್ ಬ್ಲೆಜರ್ ಧರಿಸಿಕೊಂಡೇ ಬಹುತೇಕರು ಬಂದಿದ್ದರು. ಕಾಪೋರೇಟ್ ರೇಂಜ್ ಗೆ ನಡೀತು ಈ ಸಡಗರ. ಈ ಸಂತಸದ ಕ್ಷಣದಲ್ಲಿ ಒಂದಲ್ಲ. ಹಲವು ಇಂಟ್ರಸ್ಟಿಂಗ್ ವಿಚಾರಗಳಿದ್ದವು. ಆದರೆ, ಈ ಎಲ್ಲ ಸಿಹಿ ಘಳಿಗೆಗೆ ಕಾರಣವಾಗಿದ್ದು ಪ್ರೇಮ ಬರಹ. ಬನ್ನಿ, ಓದೋಣ.

ಕನ್ನಡ ಚಿತ್ರರಂಗದ ಎಲ್ಲ ಸೂಪರ್ ಸ್ಟಾರ್​ ಗಳಿದ್ದರು. ರೆಬಲ್ ಸ್ಟಾರ್ ಅಂಬರೀಶ್ ಎಂದಿನ ಗತ್ತಿನಲ್ಲಿ ಹೊಳೀತಿದ್ದರು. ಉಪೇಂದ್ರ ಬ್ಲೆಜರ್​ ಧರಿಸಿಕೊಂಡು ಸೂಪರ್ ಆಗಿ ಕಾಣಿಸುತ್ತಿದ್ದರು. ವೈಟ್​ ಶರ್ಟ್ ಬ್ಲಾಕ್ ಪ್ಯಾಂಟ್ ಮತ್ತು ಬ್ಲೆಜರ್ ನಲ್ಲಿ ಶಿವರಾಜ್​ ಕುಮಾರ್ ಮಿಂಚ್ತಿದ್ದರು. ಗೋಲ್ಡನ್ ಡೇಜ್​ನ ನಾಯಕರೂ ಇಲ್ಲಿದ್ದರು. ಕಲಾತಪಸ್ವಿ  ರಾಜೇಶ್, ಪ್ರಣಯರಾಜ ಶ್ರೀನಾಥ್, ಕನ್ನಡದ ಕುಳ್ಳ ದ್ವಾರಕೀಶ್. ಬ್ಲಾಕ್ ಅಂಡ್ ಬ್ಲಾಕ್ ಬ್ಲೆಜರ್ ಧರಿಸಿಕೊಂಡು ಹೊಸ ಬರಹಕ್ಕೆ ಸಾಕ್ಷಿ ಆಗಲು ಬಂದಿದ್ದರು.

ದಿಗ್ಗಜರ ಈ ಸಮಾಗಮ ಒಂದು ರೀತಿ ವಿಶೇಷವೂ ಆಗಿತ್ತು. ಕಲಾವಿದರ ಒಂದು ಅಪರೂಪದ ಸಂಗಮದಂತೇ ಕಂಡಿತ್ತು. ಪರಸ್ಪರ ಬೇಟಿಯಾದ ಕಲಾವಿದರು ತಬ್ಬಿಕೊಂಡು ಖುಷಿ ಹಂಚಿಕೊಂಡರು. ಜೊತೆಗೆ ನಿಂತು ಫೋಟೋನೂ ತೆಗೆಸಿಕೊಂಡರು.ಈ ಸಡಗರದಲ್ಲಿ  ಗೋಲ್ಡನ್ ಡೇಸ್ ನಾಯಕಿಯರೂ ಇದ್ದರು. ಬಿ.ಸರೋಜಾ ದೇವಿ, ಭಾರತಿ, ಸುಧಾರಾಣಿ, ತಾರಾ, ಪ್ರಮಿಳಾ ಜೋಷಾಯ್, ಈಗೀನ ಮೇಘನಾ ರಾಜ್, ಹೀಗೆ ಬಂದ ಅವರೆಲ್ಲ, ಪ್ರೇಮ ಬರಹದ ಸಂಭ್ರಮವನ್ನ ಕಣ್ತುಂಬಿಕೊಂಡರು.

ಆದರೆ, ಇವರೆಲ್ಲ ಹೀಗೆ ಬರಲು, ಒಂದಡೆ ಸೇರೋದರ ಹಿಂದಿನ ಶಕ್ತಿ ಒಂದೇ. ಅದು ಪ್ರೇಮ ಬರಹ ಸಿನಿಮಾ. ಇದು ಅರ್ಜುನ್ ಸರ್ಜಾ ಬರೆಯ ಹೊರಟ ಹೊಸ ಬರಹ. ಪ್ರೇಮದ ಇನ್ನೊಂದು ಅದ್ಬುತ ಮುಖ ತೋರೋದು ಅರ್ಜುನ್ ಸರ್ಜಾ ಅತಿ ದೊಡ್ಡ ಕನಸು.ಆ ಕನಸನ್ನ  ನನಸು ಮಾಡೋಕೆ ಹೊರಟ ಕಥಾನಾಯಕಿ ಐಶ್ವರ್ಯ. ಅರ್ಜುನ ಸರ್ಜಾ ಪುತ್ರಿ. ಮತ್ತು ಕಥಾನಾಯಕ ಬಿಗ್ ಬಾಸ್ ಖ್ಯಾತಿಯ ಚಂದನ್.

ತೆರೆ ಮೇಲಿನ ಈ ಪ್ರೇಮಿಗಳನ್ನ  ಕನ್ನಡದ ಎಲ್ಲ ದಿಗ್ಗಜ ಕಲಾವಿದರು ಹರೆಸಿದರು. ತೆಲುಗು ಚಿತ್ರರಂಗದಖ್ಯಾತ ನಟ ಜಗಪತಿ ಬಾಬು ಕೂಡ ಬಂದು ಐಶುಗೆ ಶುಭ ಕೋರಿದರು.

ಪ್ರೇಮ ಬರಹ ಚಿತ್ರದ ಈ ಅದ್ಧೂರಿ ಲಾಂಚ್ ಕಾರ್ಯಕ್ರಮ ರಂಗೇರಿತ್ತು.ಎಲ್ಲ ಕಲಾವಿದರು ಮನಸಾರೆ ಮಾತನಾಡಿದರು. ಮಾತು..ಮಾತಲ್ಲಿ ಅಂಬರೀಶ್ ಹಾಸ್ಯ ಚಟಾಕೆಯನ್ನೂ ಹಾರಿಸುತ್ತಿದ್ದರು. ಆದರೆ, ನಟಿ ಸುಧಾರಾಣಿ ಒಂದು ಅಪರೂಪದ ಘಟನೆ ನೆನಪಿಸಿಕೊಂಡರು. ಪ್ರತಾಪ್ ಚಿತ್ರದ ಪ್ರೇಮ ಬರಹ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಆಗಲೇ ಅರ್ಜುನ್ ಸರ್ಜಾ ಅವರಿಗೆ ಸುದ್ದಿ ಬಂದದ್ದು.  ಐಶು ಹುಟ್ಟಿದ್ದಾಳೆ ಎಂದು. ಅದನ್ನ ಸುಧಾ ರಾಣಿ ಹೇಳಿದರು. ಅರ್ಜುನ್ ಅ ಕ್ಷಣವನ್ನ ನೆನೆದು ಖುಷಿಪಟ್ಟರು. ಹೌದಲ್ಲ..ಇದು ಐರನಿ ಅಲ್ಲವೇ ಅಂದ್ರು ಅಪ್ಪ-ಮಗಳು ಪರಸ್ಪರ ಮಾತಿಗೆ ಕಳಿತಾಗ.

ಪ್ರೇಮ ಬರಹ ಚಿತ್ರದ ಈ ಕಥಾನಾಯಕಿ ಯಾರೂ ಅಂತ ಈಗಾಗಲೇ ಗೊತ್ತಾಗಿದೆ. ಆದರೆ, ಈ ಸುಂದರಿಯ ಅಮ್ಮ ಯಾರೂ. ಗೊತ್ತಲ್ಲ. ಶಿವರಾಜ್​ ಕುಮಾರ್ ಅಭಿನಯದ ರಥಸಪ್ತಮಿ ಚಿತ್ರದ ಹೀರೋಯಿನ್. ಆಶಾ ರಾಣಿ. ಕಲಾತಪಸ್ವಿ ರಾಜೇಶ್ ಪುತ್ರಿ. ಅರ್ಜುನ್ ಪತ್ನಿ. ಪುತ್ರಿ ಐಶ್ವರ್ಯಳನ್ನ ಕನ್ನಡಕ್ಕೆ ಪರಿಚಯಿಸುತ್ತಿರೋ ಈ ಸಮಾರಂಭದ ಹಿಂದೆ ಅವರೇ ಇದ್ದದ್ದು. ಅಷ್ಟೇ ಲವಲವಿಕೆಯಿಂದ ಕಾರ್ಯಕ್ರಮದಲ್ಲಿ ಓಡಾಡುತ್ತಿದ್ದರು. ತಮ್ಮನ್ನ ಪರಿಚಯಿಸಿದ್ದ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರನ್ನ  ಅಷ್ಟೆ ಪ್ರೀತಿಯಿಂದಲೂ ನೋಡಿಕೊಂಡರು. ಆ ಕ್ಷಣ ಅಷ್ಟೇ ಅದ್ಬುತ. ಗೌರವ ಪೂರ್ವಕ.

ಪ್ರೇಮ ಬರಹ ಹಲವು ನೆನಪುಗಳಿಗೆ ಹೊಸ ಬರಹವೇ ಆಗಿದೆ. ಕಲಾವಿದರನ್ನ ಒಟ್ಟಿಗೆ ಒಂದಡೆ ಸೇರಿಸಿದ ಕೀರ್ತೀನೂ ಈ ಚಿತ್ರಕ್ಕೆ ಸಲ್ಲುತ್ತದೆ. ಸಾಧನೆ ಮಾಡಿದ್ದ ಸಾಧಕರನ್ನ ಗೌರವಿಸಿದ ಹೆಗ್ಗಳಿಕೆನೂ ಈ ಚಿತ್ರಕ್ಕೆ ಸಲ್ಲುತ್ತದೆ.ಕನ್ನಡ ಚಿತ್ರರಂಗದೆಡೆಗೆ ಅರ್ಜುನ್ ಸರ್ಜಾಗಿರೋ ಅಪಾರ ಪ್ರೀತಿಯನ್ನ ತೋರುತ್ತದೆ. ಮೊನ್ನೆಯೆಷ್ಟೆ ಮದುವೆ ಆದ ರಘು ಮುಖರ್ಜಿ ಮತ್ತು ಅನು ಪ್ರಕಾರ್ ಕೂಡ ಇದೇ ಪ್ರೇಮ ಬರಹ ಸಡಗರದಲ್ಲಿ, ಮೊದಲ ಭಾರಿಗೆ ಕಾಣಿಸಿಕೊಂಡದ್ದು ಸಹ ಒಂದು ವಿಶೇಷ ಬರಹವೇ ಅನಿಸುತ್ತದೆ. ಆರಂಭದಲ್ಲಿ ಈ ಚಿತ್ರ ಸಂಸತದ ಬರಹ ಬರೆದಿದೆ. ವೇಟ್ ಮಾಡಿ.

-ರೇವನ್ ಪಿ.ಜೇವೂರ್​