ಚಿತ್ರಸಂತೆಗೆ ಆಹ್ವಾನ

ಚಿತ್ರಸಂತೆಗೆ ಆಹ್ವಾನ

ಚಿತ್ರಸಂತೆ ಮತ್ತೊಮ್ಮೆ ಬಂದಿದೆ..

ಅದೂ ಕೆಲವು ವಿಶೇಷತೆಗಳೊಂದಿಗೆ..

ಸ್ನೇಹಿತರೆ...

ಪ್ರತಿ ವರ್ಷದಂತೆ ಇದೇ ಜನವರಿ 30ರಭಾನುವಾರದಂದು ಕರ್ನಾಟಕ ಚಿತ್ರಕಲಾ ಪರಿಷತ್ ನವರು ಅಯೋಜಿಸಿರುವ ’ಚಿತ್ರಸಂತೆ’ ಕುಮಾರಕೃಪ ರಸ್ತೆಯಲ್ಲಿ ನಡೆಯಲಿದೆ. ಪ್ರತಿ ವರ್ಷದಂತೆ ದೇಶದಎಲ್ಲೆಡೆಯಿಂದ ಬರಲಿರುವ ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸುವುದರ ಜೊತೆಗೆ ಚಿತ್ರಸಂತೆ ಕೆಲವು ವಿಶೇಷತೆಗಳನ್ನು ಒಳಗೊಂಡಿದೆ. ಅದರಲ್ಲಿ ಪ್ರಮುಖವಾದುದು..

 

 

 

 

೧) ನಮ್ಮ ಸಂಪದ ಮಿತ್ರರಾದ ಎಚ್. ಎ. ಅನಿಲ್ ಕುಮಾರರ ಫಿನ್ಲೆಂಡ್, ರಷ್ಯಾ ಮತ್ತು ಶಾಂತಿನಿಕೇತನ ಪ್ರವಾಸ ಕಥನಗಳನ್ನು ಬೆಳಕಿಂಡಿ ಪ್ರಕಾಶನವು ಪುಸ್ತಕ ರೂಪದಲ್ಲಿ ಹೊರತರುತ್ತಿದೆ.

 

 

೨)ಕರ್ನಾಟಕದ 90ಕ್ಕೂ ಹೆಚ್ಚು ಕಲಾವಿದರ ಕಲಾಕೃತಿಗಳ ಸಮೂಹ ಪ್ರದರ್ಶನ ಚಿತ್ರಕಲಾ ಪರಿಷತ್ತಿನ ಗ್ಯಾಲರಿ ಒಳಗೆ ನಡೆಯಲಿದೆ.

೩)ಹೊಸಪೀಳಿಗೆ ಕಲಾವಿದರಾದ ಭರತೇಶ್ ಜಿ.ಡಿ., ಸುರೇಶ್ ಕುಮಾರ್ ಗೋಪಾಲ್ ರೆಡ್ಡಿ, ದೀಪಕ್ ಡಿ.ಎಲ್ ರವರ ಸಾರ್ವಜನಿಕ ವಿನಿಮಯಾತ್ಮಕ ಯೋಜನೆ(public interactive project) ಮತ್ತು ಅಭಿನಯಾತ್ಮಕ ಯೋಜನೆಗಳು ನಡೆಯಲಿದೆ. ಜೊತೆಗೆ ಇನ್ನೂ ಹಲವು ವಿನೂತನ ಪ್ರಯೋಗಗಳು ಈ ಚಿತ್ರಸಂತೆಯಲ್ಲಿ ನಡೆಯಲಿದೆ. ಆದ್ದರಿಂದ ಈ ಬಾರಿಯ ಚಿತ್ರಸಂತೆಯನ್ನು ಎಂದಿನ ಚಿತ್ರಸಂತೆಯೆಂದು ಪರಿಗಣಿಸದೆ.. ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಲು ತಮಗೆಲ್ಲರಿಗೂ ಈ ಆಹ್ವಾನ.

 

ನಿಮ್ಮವ

ಮಂಸೋರೆ.

 

:-) ಸಮೂಹ ಚಿತ್ರಪ್ರದರ್ಶನದಲ್ಲಿ ನನ್ನದೂ ಒಂದು ಕಲಾಕೃತಿ ಪ್ರದರ್ಶಿಸಲ್ಪಡುತ್ತಿದೆ.

Comments