ಚಿತ್ರ ರಸಿಕತೆಗೆ ಸಿಕ್ಕ ದುರಂತ ಬದುಕು....!

ಚಿತ್ರ ರಸಿಕತೆಗೆ ಸಿಕ್ಕ ದುರಂತ ಬದುಕು....!

ಕನ್ನಡ ಚಿತ್ರಸಿಕರ ಸಂಘ....!
ನೇತೃತ್ವವಹಿಸಿದ ಪದ್ಮನಾಭರಾಜು ಬದುಕು ದುಸ್ತರ
ಕಲೆಗಾಗಿ ದುಡಿದವನ ಬಳಿಗೆ ಈ ದುಡ್ಡೇಯಿಲ್ಲ..
ವಯಸ್ಸು 75... ಚಿತ್ರಗಳ ಮೇಲಿನ ಪ್ರೀತಿ ಕಮ್ಮಿಯಾಗಿಲ್ಲ..
ಪದ್ಮನಾಭರಾಜು ಎಂಬ ಕಲಾಭಿಮಾನಿ ಕಷ್ಟದ ಜೀವನ
ಜೀವನಕ್ಕೆ ಆಧಾರವಾದ ಪುತ್ರನಿಗೆ ಕಾಲು ಸರಿಯಿಲ್ಲ..
ಸೊಸೆ-ಹೆಂಡ್ತಿ-ಮೊಮ್ಮಗನ ಜೊತೆ ಬಾಡಿಗೆ ಮನೆಯಲ್ಲಿ ಜೀವನ

-----
ಕನ್ನಡದ ಚಿತ್ರ ಪ್ರೇಮಿಗಳು ಅಪಾರ. ಅದು 70 ದಶಕದಲ್ಲಿ. ಈಗ ಕನ್ನಡ ಚಿತ್ರ ತಾರೆಯರ ಅಭಿಮಾನಿಗಳೇ ಹೆಚ್ಚು. ಅಭಿಮಾನದ ಸಂಘ ಕಟ್ಟಿಕೊಂಡು, ನಾಯಕನಡೆಗಿನ ಪ್ರೀತಿ ತೋರುವವರೇ ಹೆಚ್ಚು. ಆದರೆ, 1970 ರಲ್ಲಿ ಒಂದು ಸಂಘ ಹುಟ್ಟಿಕೊಂಡಿತ್ತು. ಕನ್ನಡ ಚಿತ್ರ ರಸಿಕರ ಸಂಘ ಅಂತ. ಇದು ಅಭಿಮಾನಿಗಳ ಸಂಘ ಅಲ್ಲ. ಚಿತ್ರಗಳನ್ನ ವೀಕ್ಷಿಸಿ, ರಸಿಕತೆ ಬಳೆಯೋಸಿಕೊಂಡೇ. ಆಯಾ ನಾಯಕರನ್ನ ಆರಾಧಿಸೋರ ಸಂಘವಿದು. ಆಗಲೇ ಸುಮಾರು 100 ಕ್ಕೂ ಹೆಚ್ಚು ಜನ ಸದಸ್ಯರಿದ್ದರು. ಸಮಾನ ಮನಸ್ಕ ಗೆಳೆಯರೆಲ್ಲ ಸೇರಿ ಕಟ್ಟಿದ ಈ ಸಂಘ ಈಗ ಸಕ್ರಿಯವಾಗಿಲ್ಲ. ಇದರ ನೇತೃತ್ವವಹಿಸಿದ್ದ ಪ್ರಧಾನ ಕಾರ್ಯದರ್ಶಿ ಪದ್ಮನಾಭರಾಜು ಬುದುಕು ಕೂಡ ಈಗತ ನಿಸಕ್ರಿಯಾವಾಗಿದೆ. ದೇಹಯಕ್ಕೆ ವಯಸ್ಸಾಗಿದೆ. ದುಡಿಯೋಬ್ಬ ಪುತ್ರನ ಕಾಲು ಸರಿಗಿಲ್ಲ. ಜೀವನ ಸಾಗಿಸೋಕೆ ದುಡ್ಡಿನ ಕೊರತೆ. ಸಾಲಗಾರರು ಮನೆಮುಂದೆ ಬಂದು ನಿಲ್ಲುತ್ತಾರೆ.  ಏನೂ ಮಾಡೋದೆಂಬ ನೋವು ಈ ಸ್ವಾಭಿಮಾನಿಯನ್ನ ಈಗ ಕಾಡುತ್ತಿದೆ...

ಕನ್ನಡ ಚಿತ್ರರಸಿಕರ ಸಂಘ. 1970 ರ ದಶಕಕ್ಕೂ ಮುಂಚೆ. ಎಲ್ಲಿಯ ಸಂಘ. ಇನ್ನೇಲಿಯ ರಸಿಕತೆ. ಬರುತ್ತಿದ್ದ ಚಿತ್ರಗಳ ಸಂಖ್ಯೆನೂ ಆಗ ಕಡಿಮೆ. ಕಲಾರಸಿಕರ ಸಂಖ್ಯೆನೂ ಬೆರಳೆನಿಕೆಯೆಷ್ಟು. ಈ ಸ್ಥಿತಿಯಲ್ಲಿಯೇ ಹುಟ್ಟಿಕೊಂಡದ್ದು ‘ಕನ್ನಡ ಚಿತ್ರರಸಿಕರ ಸಂಘ’. ಇದರ ಪ್ರಧಾನ ಕಾರ್ಯದರ್ಶಿಯಾಗಿದ್ದವರು ಪದ್ಮನಾಭರಾಜು. ಆರಂಭದಿಂದಲೂ ಸಿನಿಮಾದ ಬಗ್ಗೆ ಅಪಾರ ಪ್ರೀತಿ. ಅದೇ ಪ್ರೀತಿಯಿಂದಲೇ, ಕೆಲವು ಗೆಳೆಯರು ಸೇರಿ ಈ ಸಂಘ ಕಟ್ಟಿದರು. ಹಲವು ಕಾರ್ಯಕ್ರಮಗಳನ್ನೂ ಮಾಡಿದರು...

ಚಿತ್ರರಸಿಕರ ಈ ಸಂಘ ಕನ್ನಡಪರ ಹೋರಾಡಿದೆ. ಕಲಾರಸಿಕರ ಆರಾಧನೆಯಂತೆ, ತಾರೆಯರನ್ನ ಸನ್ಮಾನಿಸಿದೆ. ಪ್ರಶಸ್ತಿ ನೀಡೋ ಗೌರವದ, ಸುಮಾರು ಕೆಲಸ ಮಾಡಿದೆ. ಪದ್ಮನಾಭರಾಜು ಹೇಳೋವಂತೆ, ಯಾವುದೇ ಫಂಡ್​ ಕಲೆಕ್ಷನ್ ಇಲ್ಲದೇ ಗೆಳೆಯರೆಲ್ಲ ಸೇರಿ, ಕೈಯಿಂದ ದುಡ್ಡು ಹಾಕಿಯೇ ಹಲವು ಕಾರ್ಯಕ್ರಮ ಮಾಡಿರೋದು ಇದೆ. ಚಿತ್ರಗಳನ್ನ ಅತೀವ ಪ್ರೀತಿಯಿಂದ ವೀಕ್ಷಿಸಿ, ತಮ್ಮ ನೆಚ್ಚಿನ ನಾಯಕನಿಗೆ ಹಲವು ಬಿರುದು-ಬಾವಲಿಗಳನ್ನೂ ಕೊಟ್ಟಿದು ಇದೇ ಸಂಘ. ಕನ್ನಡದ ಹಲವು ನಾಯಕ-ನಾಯಕಿಯರು ಇದೇ ಸಂಘದಿಂದ ಅನೇಕ ಗೌರವ ಸಮ್ಮಾನ ಪಡೆದಿದ್ದಾರೆ. ಅಭಿಮಾನಿಗಳ ಪ್ರೀತಿಗೂ ಪಾತ್ರರಾಗಿದ್ದಾರೆ. 
 
ಆದರೆ, ಈಗ ಎಲ್ಲವೂ ನೆನಪು. ಐಟಿಐ ದಲ್ಲಿ ಟ್ರಾನ್ಸ್​ಪೋರ್ಟ್ ವಿಭಾಗದಲ್ಲಿ ಪದ್ಮನಾಭ ಕೆಲಸ ಮಾಡ್ತಿದ್ದರು. ಚಿತ್ರ ರಸಿಕರ ಸಂಘಕ್ಕಾಗಿಯೇ ಈ ವೇಳೆ ಕೆಲಸವನ್ನೂ ಮಾಡ್ತಿದ್ದರು. ಮನೆಯವ್ರ ವಿರೋಧದ ಮಧ್ಯೆನೂ ಕೆಲಸ ಬಿಟ್ಟು ಕಾರ್ಯಕ್ರಮ ಆಯೋಜನೆಯಲ್ಲಿಯೇ ತೊಡಗುತ್ತಿದ್ದರು. ಇದರಿಂದ ಪ್ರಮೋಷನ್ನ ಆಗಲಿಲ್ಲ. ಇನ್​ಕ್ರಿಮೆಂಟೂ ಸಿಕ್ಕಿಲ್ಲ. ಏನೂ ಇಲ್ಲದೇನೆ. 1990 ರಲ್ಲಿ ಪದ್ಮನಾಭರಾಜು ರಿಟೈರ್​ ಆಗಿದ್ದಾರೆ. ಪುತ್ರ ಮಂಜುನಾಥ್ ಒಬ್ಬನೇ ಆಗ ಆಧಾರ. ಒಳ್ಳೆ ಕೆಲಸದಲ್ಲೂ ಇದ್ದವ್ರು. ಕಳೆದ ಮೂರು ವರ್ಷದ ಹಿಂದೆ, ಅಪಘಾತದಲ್ಲಿ ಪುತ್ರ ಮಂಜುನಾಥ್​ ಅವ್ರಿಗೆ ಕಾಲಿಗೆ ತೀವ್ರಗಾಯವಾಗಿದೆ. ಈಗ ಸರಿಯಾಗಿ ನಡೆಯಲೂ ಬಾರದು. ಹಳೆ ಕಂಪನಿಯ ಮಾಲೀಕರ ದಯದಿಂದ 2 ತಿಂಗಳಿನಿಂದ ಈಗ ಕೆಲಸ ಮಾಡ್ತಿದ್ದಾರೆ. ಇರೋ ಈ  ಮಗನ ಚಿಕಿತ್ಸೆಗೆ ಪದ್ಮನಾಭ 
ಮನೆನೂ ಮಾರಿಕೊಂಡಿದ್ದಾರೆ. ಈ ಸ್ಥಿತಿಯಲ್ಲಿ ಸಂಬಂಧಿಕರು ದೂರವಾಗಿದ್ದಾರೆ. ಬನಶಂಕರಿ ಸೆಕೆಂಡ್ ಸ್ಟೇಜ್​ನಲ್ಲಿ ಚಿಕ್ಕದೊಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ...

ಇಲ್ಲಿವರೆಗೂ ಕಷ್ಟವೋ..ಸುಖವೋ. ಏನೇ ಬಂದರೂ ಎದುರಿಸಿಕೊಂಡೇ ಬಂದಿದ್ದಾರೆ ಪದ್ಮನಾಭರಾಜು. ಆದ್ರೂ, ಕಷ್ಟಗಳ ಸಂಕೋಲೆ ಹೆಚ್ಚುತ್ತಲೇ ಇದೆ. ಈ ಕಾರಣದಿಂದಲೇ, ಸಹಾಯ ಮಾಡಿ ಎಂದು ಮಾಧ್ಯಮದ ಎದುರು ಬಂದಿದ್ದಾರೆ. ಪುತ್ರ ಚಿಕಿತ್ಸೆಗೆ ದುಡ್ಡು ಬೇಕು. ಮೊಮ್ಮಗನ ಭವಿಷ್ಯವೇನೂ ಎಂಬ ನೋವು. ಹೆಂಡ್ತಿ ಮತ್ತು ಸೊಸೆಯ ಗತೀಯೇನು ಎಂದು ಚಿಂತಿಸೋ ಸ್ಥಿತಿ ಇಳಿವಯಸ್ಸಿನಲ್ಲಿ. ಯಾರಾದ್ರೂ, ಸಹಾಯ ಮಾಡೋಕೆ ಇಚ್ಚಿಸಿದರೇ..? ಈ ನಂಬರ್​ಗೆ ಕಾಲ ಮಾಡಿ. ಇವರ ಕಷ್ಟ ತಿಳಿದು ಸಹಾಯನೂ ಮಾಡಬಹುದು. ನಂಬರ ಹೀಗಿದೆ. 8762130648 ಮತ್ತು 9482009359.

-ರೇವನ್ ಪಿ.ಜೇವೂರ್