ಚಿರ ವಿರಹಿ

ಚಿರ ವಿರಹಿ

ಕವನ

ಚಂದ್ರಚಕೋರಿ ಮನಕದ್ದ ಪೋರಿ
ನಾನರಿಯೆ ನಿನ್ನ ಮನ ಗೆಲ್ಲುವ ಪರಿ


ನಿನ್ನ ನೋಟದ ಕುಡಿಯಂಚಿಗೆ
ಸಿಲುಕಲು ಪ್ರತಿಕ್ಷಣವೂ ಕಾದೆ,
ಪ್ರೇಮದ ಮಧುರ ಭಾವನೆಯ
ವಿರಹದುರಿಯಲಿ ಬೆಂದೆ ನಾನೊಂದೆ,
ಎನಗೆ ನೀ ನಿಲುಕದ ಮಾಣಿಕ್ಯದ ಮಣಿಯಾದೆ.



ಕಾಲ್ಗೆಜ್ಜೆಯ ಮೃದುಲ ಇನಿ ನಾದಕೆ
ಮರುಳಾದೆ, ಕನಸಲಿ ನಿನ್ನಿನಿಯನಾದೆ,
ನಿನ್ನ ಮುಡಿಯೇರಿದ ಮಲ್ಲಿಗೆಯ
ಮನತಣಿವ ಸುವಾಸನೆಯ ಸೆರೆಯಾಳಾದೆ,
ಭ್ರಮೆಯ ತೆರೆಯ ನಾ ಸರಿಸಿ ಬರುವ ಮೊದಲು
 - ನೀನವನ ಮಡದಿಯಾದೆ.

Comments