ಚಿಲ್ಲರೆ ಅಂಗಡಿ ಕಾಕ , ರೀಟೇಲಲಿ ಅಕ್ಕಿ..!
ಬೀದಿ ಕೊನೆ ಕಾಕ ದುಖಾನು
ಆಚೆ ಬದಿಯ ಶೆಟ್ಟರ ಅಂಗಡಿ
ನಡು ಗುಡ್ಡೆಯ ಪೆಟ್ಟಿಗೆ ಬೀಡಾ
ಆಪರೇಶನ್ ರೀಟೇಲು ಖೆಡ್ಡಾ!
ಚಿಲ್ಲರೆ ಪಲ್ಲರೆ ಅಂಗಡಿಗಳೆಲ್ಲ
ಗಾಂಧಿ ಕೇಕು ಮಾರಿದ್ದರಲ್ಲಾ
ಆರು ಕಾಸಿನಾ ಅಕ್ಕಿ ಬೇಳೆಗೆ
ಉಪ್ಪು ಹುಣಸೆ ಸಕ್ಕರೆ ಜಾಗೆ!
ಅಂಗಡಿಯಿಂದಂಗಡಿಗೆ ಸುತ್ತಿ
ಇದೆಯೊ ಇಲ್ಲವೊ ಕೇಳುತ್ತಿ
ಸುಮ್ಮನೇಕೆ ಸುತ್ತೋ ಚಪಲ
ರೀಟೇಲಲೆ ಕೊಳ್ಳೊಂದೆಸಲ!
ಚಿಲ್ಲರೆ ಅಂಗಡಿಯಲಿತ್ತು ಬೆಲೆ
ಎಟುಕುವಂತೆ ಮನೆಗೂ ಸಪ್ಲೈ
ತಿನ್ನುತ್ತಾನೆ ಬಡ್ಡಿ ಮಗ ಅನ್ನುತೆ
ಪ್ರೀತಿಯಿಂದಲ್ಲೆ ಮತ್ತೆ ಕೊಳ್ಳುತೆ!
ಅರೆ ಇದೇನಿದು ರೀಟೆಲು ಅಬ್ಬಾ!
ಸೇಲು ಪ್ರಮೋಷನ್ ಹಬ್ಬಾಹಬ್ಬ
ಕೊಳ್ಳೊಂದು ಪುಕ್ಕಟೆಗೆ ಇನ್ನೊಂದು
ಕಂಡಿದ್ದೆಲ್ಲಾ ಕೊಳ್ಳುವ ತರದೂದು!
ಏನನ್ಯಾಯ ಕಾಕ ತಿಂದೆ ಹಾಕಿಟ್ಟ
ಹತ್ತು ರೂಪಾಯಕ್ಕಿ ಇಪ್ಪತ್ತಾಕಿಬಿಟ್ಟ
ರೀಟೇಲಲಿ ಬರಿ ಎಂಟು ರುಪಾಯಿ
ಹತ್ತೆ ಕೆಜಿ ಜತೆಗುಚಿತ ಸೌಟಿನಾ ಕೈ!
ಚಿಲ್ಲರೆ ಅಂಗಡಿಯೆಲ್ಲರು ಪಾಪರು
ರೀಟೆಲಲೆ ತಂದು ಮಾರುವವರು
ಒಂದೊಂದಾಗಿ ಬಾಗಿಲು ಮುಚ್ಚಿತೆ
ರೀಟೇಲಲಾದರೂ ಕೆಲಸ ಸಿಕ್ಕಿತೆ?
ನಿಧಾನವಾಗೆಲ್ಲ ರೀಟೇಲಲಿ ಮಲ್ಲ
ಬೇಕು ಬೇಡದ್ದೆಲ್ಲ ಕೊಳ್ಳೊ ತಿಕ್ಕಲ
ಸೋಪು ಕೊಳ್ಳಲು ಹೋದಾ ಲೆಕ್ಕ
ಸೋಫಾ ಹಾಸಿಗೆ ಯಾಕೆ ಬೇಕಪ್ಪ?
ಅರೆರೆ ಸಿಗದಲ್ಲ ಅಕ್ಕಿ ಮಾರುಕಟ್ಟೆ
ಕಾಣೆಯಾಗಿ ಬೆಲೆಯೇ ಸಿಕ್ಕಾಪಟ್ಟೆ
ಸ್ಟಾಕೆ ರೀಟೇಲ ಸೇರಿದ್ದನರಿಯರು
ಹಾಹಾಕಾರದಲೆ ಹೆಚ್ಚೆಚ್ಚು ತೆತ್ತರು!
ಮತ್ತೆ ಮಹಾನುಭಾವನೆ ಪರೋಕ್ಷ
ರೀಟೆಲುಗಳಲಿ ಅಕ್ಕಿಯೂ ಪ್ರತ್ಯಕ್ಷ
ಕೊಟ್ಟೆರಡು ರೂಪಾಯಿ ಕಮ್ಮಿ ಬೆಲೆ
ಇಪ್ಪತ್ತು ಎಪ್ಪತ್ತಾಗಿಸೊ ಮಹಾನ್ಕಲೆ!
--------------------------------------------------------------------------------------
ನಾಗೇಶ ಮೈಸೂರು, ಸಿಂಗಾಪುರ
--------------------------------------------------------------------------------------
Comments
<<ಇಪ್ಪತ್ತು ಎಪ್ಪತ್ತಾಗಿಸೊ
In reply to <<ಇಪ್ಪತ್ತು ಎಪ್ಪತ್ತಾಗಿಸೊ by Premashri
ಧನ್ಯವಾದಗಳು ಪ್ರೇಮಾಶ್ರಿಯವರೆ,
ರೈತರಿಂದ ನೇರ ಗ್ರಾಹಕರಿಗೆ....
In reply to ರೈತರಿಂದ ನೇರ ಗ್ರಾಹಕರಿಗೆ.... by ಗಣೇಶ
ಗಣೇಶ್ ಜೀ, ಒಂದರ ನಂತರ ಒಂದು