ಚು(ಗು)ಟುಕು
ಅಲೆಮಾರಿ
ನಿನ್ನೆ ನಾಳೆಗಳ ಚಿಂತೆಯಲಿ
ಸುಳಿದಾಡುತಿಹ 'ಮನಸು' ಅಲೆಮಾರಿ
ವರ್ತಮಾನವ ನಿನ್ನೆ ನಾಳೆಗೆ ಮಾರಿದ್ದಕ್ಕೆ
ಶಪಿಸುತಿದೆ,ಅದೇ ಮನಸ್ಸು ಕಿಡಿಕಾರಿ
ಗೊಂದಲ
ಯಾವಾಗಲೂ ಹೊಸತನ್ನ
ಮಾಡಬೇಕೆನ್ನುವ ನನ್ನ ಹಂಬಲ
ಕರಗಿ ಹೋಗುತ್ತದೆ, ಆದೊಡನೆ
ಮನಸ್ಸು 'ಚಂಚಲ'.
ನಿಮಗೇಕೆ? ಈ ಚಂಚಲ
ಯಾರೆಂದು ತಿಳಿಯುವ ಚಪಲ
ಆ 'ಚಂಚಲೆ'ಯ ಅರಿಯುವುದೇ ಒಂದು ಗೊಂದಲ.
ಬ್ಯುಟಿ
ಏ ಬ್ಯುಟಿ .....
ಈ ಬ್ಯುಟಿ ಕಾಯ್ದುಕೊಳ್ಳಲು
ನೀ ಮಾಡಲೇ ಬೇಕು ನಿತ್ಯ ಮೇಕಪ್ ಡ್ಯುಟಿ
ಅದಕ್ಕೆ ಬೇಕು ಕಾಸ್ಮೆಟಿಕ್ಸ್ ಗಳು ಪುಟ್ಟಿ ಪುಟ್ಟಿ
ಅವನ್ನು ಹೊತ್ತ್ಯೊಯಲು ನಿನಗೊಂದು ವ್ಯಾನಿಟಿ
ಒಂದು ದಿನವೇ ಬಿಟ್ಟರೂ
ನಿನ್ನ ಬ್ಯುಟಿಗಿರುವುದಿಲ್ಲ ಕ್ವಾಲಿಟಿ,ಒರಿಝಿನಾಲಿಟಿ
ಆದರೂ ಎಲ್ಲರೂ ಹೇಳುತ್ತಾರೆ
ಹೆಣ್ಣೊಂದು 'ಸುಂದರ' ಸೄಷ್ಠಿ!!
ಪ್ರಮುಖ
ಎಲ್ಲರಿಗು ಇರುವುದೊಂದೇ ಲೋಕ
ಅದನ್ನು ಅವರವರ ದೄಷ್ಠಿಯಲ್ಲಿ
ಗ್ರಹಿಸುವುದರಲ್ಲಿಯೇ ಇರುವುದು ಸುಖ
ಈ ಲೋಕ-ಸುಖಗಳ[ಲೌಕಿಕ] ಜಯಿಸಿ
-ದವನಿಗೇ ಹೆಚ್ಚಿನ ತೂಕ
ಹೀಗೇ ಎಲ್ಲರೊಳಗೊಂದಾಗಿ ಬಾಳುವುದೇ ಪ್ರಮುಖ !!