ಚುಟುಕುಗಳಲ್ಲಿ ವಿವಿಧತೆ

ಚುಟುಕುಗಳಲ್ಲಿ ವಿವಿಧತೆ

ಕವನ

೧. ನಂಬುವವರು

ಬೆನ್ನಿಗೆ ಚೂರಿ ಇರಿಯುವವರು

ಕಪಟಿಗಳ ಜೊತೆಯಾಗುವರು

ಮನಸುಗಳ ಕದಿಯುವವರು

ಪ್ರೀತಿಯನು ಮಾಡುವವರು

 

೨. ಜ್ಞಾನ

ಬರಿದೆ ಕಣ್ಣಲಿ ನೋಡಿ

ವಿಜಯಿ ಎನದಿರಿ ಜನತೆ

ಒಳ ಹೊಕ್ಕು ನೋಡುತಲಿ

ವಿಷಯ ತಿಳಿಯಲು ಘನತೆ

 

೩. ನೋಟ

ಜನತೆಯ ನೋಟದೊಳು ಜೀವಂತಿಕೆಯಿಲ್ಲ

ಉಟ್ಟ ಬಟ್ಟೆಯಲೆ ಹೊರ ಹೊರಟಿರುವರೆಲ್ಲ

ಹಳೆಯ ಚಪ್ಪಲಿಯ ಕಾಲಿಗೆ ಧರಿಸುತಲೆಯಿಂದು

ಭಿಕ್ಷಾ ಪಾತ್ರೆಯ ಹಿಡಿದು ಬೇಡುತಿಹರು ಬಂದು

 

೪. ಪ್ರೀತಿ

ಸುಪ್ತವಾದ

ಪ್ರೀತಿ

ಹೊರ

ಹೊಮ್ಮಿದಾಗ

ಮೈಮನಗಳ

ಮಿಲನ

ಅಂತರಗತ ! 

 

೫. ಮಾತು ಕತೆ

ಬಂಧುಗಳ ಕಟು ಮಾತೊಳು

ಬೆಳೆಯ ಬೇಕು ಮನುಜ

ದೇಹ ಮನಸ್ಸುಗಳೆರಡು ಶುಚಿಯಾಗುತ

ಗೆಳೆತನವ ದೂರದಿರು

ಸಿರಿತನಕೆ ಸೇರದಿರು

ಬಡತನದ ಭಾಗ್ಯದೊಳು ಮೆರೆದಾಡುತ

 

೬. ಶುದ್ಧ ಬಟ್ಟೆ

ಕೊಳೆಯ ಬಟ್ಟೆ 

ತೊಳೆದು ಅಗಸ

ಶುಚಿಯ ಮಾಡಿದ

ಮಡಿಯ ಬಟ್ಟೆ

ಧರಿಸಿ ಹುಡುಗ

ಕುಣಿದು ಹಾಡಿದ

 

೭. ಚೆಲುವ ಅರಸಿ

ಚೆಲುವ ಅರಸಿ ನಡೆದು ಸಾಗುತ

ದಟ್ಟ ಅಡವಿಯ ನಡುವೆಲಿ

ಹಲಸು ಮಾವನು ಸವಿದು ತಿನ್ನುತ

ಮನೆಗೆ ಸೇರುವ ಬಯಕೆಲಿ

 

೮. ಹನಿ

ಪ್ರೇಮವೇ

ಇಲ್ಲದ ಮೇಲೆ

ಪ್ರೀತಿ ಎಂತಗೆ ! 

 

೯. ಮದನಾರಿ

ಮದನಾರಿಯ ಚೆಲುವಿನೆಡೆಗೆ

ಮುದದಿಂದ ಬರುವುದರೊಳಗೆ

ಮೆದುವಾದ ಪ್ರೇಮದೊಳಗೆ

ಮೃದುವಾಯಿತು ಪ್ರೀತಿ ಕೊನೆಗೆ 

 

೧೦ ಹಾಯ್ಕು

ಮಧು ಚಂದ್ರನ

ಮಡಿಲಲ್ಲಿ ಮೋಹಕ

ತಾರೆ ಚಂದವು

 

೧೧. ಟಂಕಾ

ನನ್ನೊಲವಿನ

ಸವಿಗನಸಿನೊಳು

ನಿನ್ನೊಲವನು

ಸೇರಿಸುತಿರುವಂತೆ

ನನಸಾಯಿತು ಬಾಳು

 

೧೨. ರುಬಾಯಿ

ವಿಷಯದ ಒಳಗೆ ವಿಷ ಬರಬಾರದು

ನನಸಿನ ಒಳಗೆ ಕನಸು ಇರಬಾರದು

ಗುಲಗಂಜಿಯ ಜೊತೆ ಇರುವೆಗಳಂತೆ

ಚಿಂತೆಯ ಹತ್ತಿರ ಸುಖವ ತರಬಾರದು

-ಹಾ ಮ ಸತೀಶ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್