ಚುಟುಕುಗಳು ( ಭಾಗ 3 )

ಚುಟುಕುಗಳು ( ಭಾಗ 3 )

ಕವನ

 


ಕನಸಿನದು ಮನೋವೇಗ


ವಾಸ್ತವದ್ದು ಆಮೆಯ ವೇಗ


ಕನಸು ವಾಸ್ತವಗಳೆರಡರ


ಸಂಯೋಜನೆಯೆ ಜೀವನ


 


     ***


 


ಮೂಲ ದ್ವಾರಕೆ


ಕಾಲ ಗರ್ಭ ಸೇರಿದೆ


ಆದರೆ


ದ್ವಾರಕಾಧೀಶ ಮಾದವ


ಪಾತಾಳ ಭೂಮಿ ಆಕಾಶಗಳ


ತುಂಬ ಆವರಿಸಿದ್ದಾನೆ


ದ್ವಾರಕೆ ಸ್ಥಾವರ


ಮಾಧವ ಜಂಗಮ


 


     ***


 


ನಾವು ಜೀವಿಸಿದ್ದೇವೆ


ನಮ್ಮ ಅಹಂ ಗಳೊಂದಿಗೆ


ಅಹಂ


ನರಕದ ದಾರಿ ಸೂಚಕ


ಅದನ್ನು ಜಪಿಸುತ್ತ


ಬದುಕಿದ್ದೇವೆ ಭ್ರಮೆಯಲ್ಲಿದ್ದೇವೆ


ಅದೊಂದು ಪಿತ್ರಾರ್ಜಿತ


ಆಸ್ತಿ ಎಂಬಂತೆ ಸುಮ್ಮನೆ


ಕಾಪಿಟ್ಟುಕೊಂಡು ಬಂದಿದ್ದೇವೆ


 


       ***