ಚುನಾವಣಾ ರಾಜಕೀಯ!!!
ಅಂದಿತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಒಂದೇ ಪಕ್ಷ
ಇಂದಿದೆ ಸ್ವಾತಂತ್ರ್ಯದ ಹೆಸರಿನ ಹಲವಾರು ಪಕ್ಷ!
ಈ ಜನರ ಉದ್ದೇಶವಾಗಬೇಕು ರಕ್ಷಿಸುವುದು
ಈಗಿನ ಪಕ್ಷಗಳ ಧ್ಯೇಯವಾಗಿದೆ ಭಕ್ಷಿಸುವುದು!!
ಹಿಂದೊಮ್ಮೆ ಹಾಡು ಮಾಡಲಾಗಿತ್ತು
ಅಲ್ಲಿದೆ ನಮ್ಮನೆ, ಇಲ್ಲಿರುವೆನು ಸುಮ್ಮನೆ.
ಈಗಿನ ಕಾಲದ ಹಾಡು ಹೀಗಿರಬೇಕು
ಇಂದಿರುವೆನು ಈ ಪಕ್ಷ, ಮುಂದಿರುವೆನು ಆ ಪಕ್ಷ ಅಲ್ಲ ಅಲ್ಲ ಮತ್ತೊಂದು ಪಕ್ಷ.
ರಾಜಕೀಯವೀಗ ಆಗಿದೆ ರಾಕ್ಷಸನ ಕಾಯ
ಕುರ್ಚಿ ಸಿಕ್ಕರೆ ಸಾಕು ಆಗುವುದು ಜನರ ದುಡ್ಡು ಮಾಯ..
ಕುರ್ಚಿಯಲ್ಲಿ ಕೂತವನಾಗುವನು ಶ್ರೀಮಂತ ರಾಯ
ಕೇಳುವನವನು ಜನರು ಸತ್ತರೆ ನನಗೇನು ಮಾರಾಯ..
ಚುನಾವಣೆ ಬಂದರೆ ಸಾಕು ಶುರುವಾಗುವುದು ನೋಟಿನ ಚಲಾವಣೆ
ಕೊಟ್ಟು ಕಳ್ಬಟ್ಟಿಯ ಪ್ಯಾಕೇಟು, ಗಳಿಸುವರು ವೋಟಿನ ಚಾಕ್ಲೇಟು!
ಅವಧಿಯಲ್ಲಿದ್ದಾಗ ಮಾಡಿದ್ದರೆ ಸರಿಯಾದ ವಿಧಿ
ಮಾಡಬೇಕಾಗುತ್ತಿರಲಿಲ್ಲ ಖರ್ಚುಮಾಡಲು ವೋಟಿಗಾಗಿ ದುಡ್ಡಿನ ಸುನಿಧಿ!!
ಚುನಾವಣೆ ಬಂದರೆ, ಬರುವರು ನಮಸ್ಕಾರದೊಂದಿಗೆ ಗಲ್ಲಿ-ಗಲ್ಲಿಯ ನುಗ್ಗಿ
ಆಡುವರು ಜನರ ನಂಬಿಕೆಯನು ಜಗ್ಗಿ!
ನಡೆವರು ಕುರ್ಚಿ ಸಿಗುವ ತನಕ ತಗ್ಗಿ-ಬಗ್ಗಿ
ಅಧಿಕಾರ ದೊರೆತಮೇಲೆ ಮಾಡಿಕೊಳ್ಳುವರು ಅವರ ಜೀವನ ಸುಗ್ಗಿ!!
ನಿಯತ್ತಿದ್ದಿದ್ದರೆ ಬರುತ್ತಿರಲಿಲ್ಲ ಪ್ರಚಾರದ ವಿಚಾರ
ಬರುತ್ತಿರಲಿಲ್ಲ ಜನರ ದುಡ್ಡಿಗೆ ಸಂಚಕಾರ..
ನೇತಾರ ಆಗುತ್ತಿರಲಿಲ್ಲ ಒಬ್ಬ ಮೋಸಗಾರ
ಆಗ ಜಗವಾಗುವುದಿಲ್ಲವಿತ್ತು ಭ್ರಷ್ಟಾಗಾರ!!
ಮತ್ತೆ ಮತ್ತೆ ಬರುತ್ತದೆ ಚುನಾವಣೆ
ಯುವಕರಾದ ನಾವು ಚಿಂತಿಸಿ ಮತದಾನ ಮಾಡಿ, ತರಬೇಕು ಸುಧಾರಣೆ!
ದೇಶಕ್ಕೆ ಬೇಕಾಗಿರುವುದೀಗ ಭ್ರಷ್ಟಾಚಾರದಿಂದ ಬದಲಾವಣೆ
ಆಗ ಮಾಡಬಹುದು ದೇಶಪ್ರಗತಿಯೆಂಬ ಬಾವುಟದ ಉಡಾವಣೆ!!
