ಚುನಾವಣೆಗಳು ಸಮೀಪಿಸುತ್ತಿದ್ದಂತೆ ಏನೇನು ಬದಲಾವಣೆಗಳಾಗುತ್ತವೆ.
ಚುನಾವಣೆಗಳು ಸಮೀಪಿಸುತ್ತಿದ್ದಂತೆ ಏನೇನು ಬದಲಾವಣೆಗಳಾಗುತ್ತವೆ. ಯಾರು ಯಾವ ಪಕ್ಷದಲ್ಲಿರುತ್ತಾರೆ? ಯಾರು ಯಾವ ಪಕ್ಷಕ್ಕೆ ಹಾರುತ್ತಾರೆ? ಆಯಾಯಾ ಪಕ್ಷಗಳ ಅಂತರಿಕ ಸ್ಥಿತಿ ಏನಾಗುತ್ತದೆ? ಯಾರಿಗೆ ಯಾವ ಪಕ್ಷದಿಂದ ಟಿಕೆಟ್ ಸಿಗುತ್ತದೆ/ ತಪ್ಪುತ್ತದೆ ಇತ್ಯಾದಿಗಳನ್ನು ನಿಖರವಾಗಿ ಹೇಳಲು ಯಾವ ರಾಜಕೀಯ ಪಂಡಿತನಿಗೂ ಸಾಧ್ಯವಿಲ್ಲ. ಅದರಲ್ಲೂ ನಾಗಮಂಗಲದ ರಾಜಕೀಯವಂತೂ ಏನೇನು ಬಣ್ಣ ಪಡೆದುಕೊಳ್ಳುತ್ತದೆ ಖಂಡಿತ ಹೇಳಲಾಗದು? ಏಕೆಂದರೆ ಅದು ಹಾಗೆಯೇ ಎಂಬುದೇ ಉತ್ತರ.
ಪ್ರಸ್ತುತ ಸಂದರ್ಭದಲ್ಲಿ ರಾಜಕೀಯ ಸ್ಥಿತಿಗತಿಗಳನ್ನು ಅಳೆದು-ತೂಗಿ ನೋಡಿದರೆ. ಜಿಲ್ಲಾ ಹಾಗೂ ರಾಜ್ಯಮಟ್ಟದ ರಾಜಕೀಯದಲ್ಲಿ ಸುರೇಶ್ಗೌಡರಿಗೆ ವಿರುದ್ದವಾದ ಬೆಳವಣಿಗೆಗಳೇನೂ ನಡೆಯದಿದ್ದರೆ, ಶಿವರಾಮೇಗೌಡರ ಸ್ವಾರ್ಥರಾಜಕಾರಣಕ್ಕೆ , ಅಂಬರೀಷ್, ಎಸ್.ಎಂ ಕೃಷ್ಣ ಬಲಿಯಾಗದಿದ್ದರೆ, ಸಿದ್ಧರಾಮಣ್ಣ ಸುರೇಶ್ಗೌಡರ ಕಡೆಗೆ ಗಟ್ಟಿಯಾಗಿ ನಿಂತರೆ ಇನ್ನೊಂದು ಟಮರ್ಿಗೆ ಸುರೇಶ್ಗೌಡ ಆಯ್ಕೆಯಾಗುವುದು ಕಷ್ಟವಾಗುವುದಿಲ್ಲ. ಇದಲ್ಲದೇ ಸುರೇಶ್ಗೌಡರಿಗೆ ಇನ್ನೂ ಕೆಲವೊಂದು ಸಕಾರಾತ್ಮಕ ಅಂಶಗಳಿವೆ.
ಸಿ.ಆರ್.ಎಸ್ ಹಾಗೂ ಎಲ್.ಆರ್.ಎಸ್ ನಾಗಮಂಲದ ಮಟ್ಟಿಗೆ ಸದ್ಯದ ಪರಿಸ್ಥಿತಿಯಲ್ಲಿ ಸವಕಲು ನಾಣ್ಯಗಳಾಗಿ ಕಾಣುತ್ತಿದ್ದಾರೆ.ಕಾಂಗ್ರೆಸ್ ಪಕ್ಷದಲ್ಲಿನ ದೊಡ್ಡತಲೆಗಳು ಈ ಎಲ್.ಆರ್.ಎಸ್ ಮತ್ತು ಸಿ.ಆರ್.ಎಸ್ ಎಂಬ ಎರಡು ತಲೆಗಳ ರಾಜಕೀಯಕ್ಕೆ ಬಲಿಯಾದರೆ ಮಾತ್ರ ಈ ಸವಕಲು ಮುಖಗಳು ಮತ್ತೆ ನಾಗಮಂಲಕ್ಕೆ ತಗುಲಿಕೊಳ್ಳಬಹುದು. ಈ ಎರಡು ಸವಕಲು ನಾಣ್ಯಗಳು ಚಲಾವಣೆಗೆ ಬರಲು ಪ್ರಯತ್ನಿಸಬಹುದು. ಏಕೆಂದರೆ ಈ ಎರಡೂ ತಲೆಗಳಿಗೂ ಈಗ ನಾಗಮಂಗಲದ ಮಟ್ಟಿಗೆ ಸ್ವಂತ ವರ್ಚಸ್ಸು ಕಡಿಮೆಯಾಗಿದೆ. ಸಿ.ಆರ್.ಎಸ್. ಕಳೆದ ಬಾರಿ ಹೇಗೆ ಎಂ.ಪಿ ಯಾದರೆಂಬುದೂ ಎಲ್ಲರಿಗೂ ಗೊತ್ತಿದೆ!. ಚುನಾವಣೆ ಸಂದರ್ಭದಲ್ಲಿ ಶಿವರಾಮೇಗೌಡರ ಹಾರಾಟ ಯಾವ ರೀತಿ ಇರುತ್ತದೆಂಬುದೂ ಜನತೆಗೆ ಗೊತ್ತಿದೆ.
ಪರಸ್ಪರ ಹಾವು-ಮುಂಗಿಸಿಳಾಗಿದ್ದ ಈ ಇಬ್ಬರು ಪ್ರಖ್ಯಾತರು ಈಗ ರಾಜಕೀಯವಾಗಿ ಅಣ್ಣ-ತಮ್ಮಂದಿರಷ್ಟು ಹತ್ತಿರಕ್ಕೆ ಬಂದಿದ್ದಾರೆ. ಇಬ್ಬರು ನಾಯಕರ ಒಂದು ಪಾಯಿಂಟ್ ಪ್ರೋಗ್ರಾಂ ಏನೆಂದರೆ ಚುನಾವಣೆಯಲ್ಲಿ ಸುರೇಶ್ಗೌಡನನ್ನು ಸೋಲಿಸುವುದು!. ಅದಕ್ಕಿಂತಲೂ ಮೊದಲಿನ ಪ್ರೋಗ್ರಾಂ ಕಾಂಗ್ರೆಸ್ಸಿನಿಂದ ಟಿಕೆಟ್ಸಿಗದಂತೆ ನೋಡಿಕೊಳ್ಳುವುದು!