ಚುನಾವಣೆ ಸಮೀಕ್ಷೆ

ಚುನಾವಣೆ ಸಮೀಕ್ಷೆ

ಕವನ

          ಚುನಾವಣೆ ಸಮೀಕ್ಷೆ

 

ನಮ್ಮ ರಾಮಯ್ಯ ಮೇಸ್ಟರಿಗೆ ತುಮುಕುರ್ ಗ್ರಾಮಾಂತರ ಪ್ರದೇಶಕ್ಕೆ ಎಲೆಕ್ಷನ್ ಕೆಲಸದ ಮೇಲೆ ವರ್ಗಾವಣೆ ಆಯಿತು.

ಮೇಷ್ಟ್ರು ಹಳ್ಳಿನ ಒಂದು ರೌಂಡ್ ಹಾಕಿ ಬರೋಣ ಅಂತ ಹೊರಟ್ಟರು , ದಾರಿ ಮಧ್ಯ ಮೇಸ್ಟರಿಗೆ ನಮ್ಮ ಡಿ ಗೋಪಾಲ್ ರಾಯರು ಮತ್ತು ಅವರ ಶಿಷ್ಯ ತಿಪ್ಪ ಸಿಕಿದರು . ಮೇಷ್ಟ್ರು ಡಿ ಗೋಪಾಲ ರಾಯರನ ಎಲೆಕ್ಷನ್ಉ ಬಗೆ ಅವರ ಅಭಿಪ್ರಾಯ ತಿಳಿಯೋಣ ಅಂತ ಮಾತಿಗೆ ಎಳೆದರು ,

 

ಮೇಷ್ಟ್ರು : ನಮಸ್ಕಾರ ಗೋಪಾಲ ರಾಯರೇ , ಏನು ಸೌಕ್ಯವೇ ?

ಡಿ: " ನಮಸ್ಕಾರ ಸಿವಾ , ಏನೋ ನೋಡಿ ಆ ಸಿವ ಮಾಡಗ್ದಂಗೆ ಇದೀನಿ , ಎಲ್ಲ ನಿಮ್ಮ ಆಶೀರ್ವಾದ "

ಮೇಷ್ಟ್ರು : ಏನ್ ರಾಯರೇ ಇ ಸರಿ ನಿಮ್ಮ ವೋಟು ಯಾರಿಗೆ , ಕಮಲಕ ಇಲ್ಲ

ಡಿ: ಕಿರು ಧ್ವನಿಲ್ಲಿ " ಏ ತಿಪ್ಪ , ಯಾರೋ ಅದು ಕಮಲಮ , ಇ ಹಳ್ಳಿನಾಗೆ ನನ್ನಗೆ ಗೊತ್ಹಿಲ್ಲದವಳು , ಹೊಸದಾಗಿ ನಮ್ಮ ಹಳ್ಳಿಗೆ ಬಂದಿರೋ ಟೀಚೆರು ಅಮ್ಮ ಏನೋ "

ತಿ (ಒಲ್ಲಗೊಳಗೆ ಈ ನನ್ಮಗಂಗೆ ವಯಸ್ಸಿಗೆ ಬಂದಿರೋ ಮಗಳಿದರು ಇನು ಬಾಯಿ ಚಪ್ಪಲ ಹೋಗಿಲ್ಲ )

ತಿ : ರೀ ಯೆಜಮಾನರೆ ಮೇಸ್ಟ್ರು ಕೇಳಿದು ಕಮಲಾ ಪಕ್ಷಕ ನಿಮ್ಮ ಮತ ಅಂತ , ಕಮಲಾ ಪಕ್ಕಕ್ಕೆ ಅಂತ ಅಲ್ಲ , ಸರಿಯಾಗಿ ಕೇಳಿಸಿಕೊಳ್ ರೀ ರೀ

ಡಿ : " ಸುಮ್ಕಿರೋ , ಮೇಟ್ರು ಮುಂದೆ ಮರಿಯಾದೆ ತೆಗಿಬೇಡ "

ಡಿ : " ನೋಡಿ ಮೆಟ್ರೆ , ಕಮಲ ಪಕ್ಷಕಂತು ನಮಪ್ರಣೆ ನಾನು ವೋಟು ಹಾಕಕಿಲ್ಲ "

ಮೇಷ್ಟ್ರು: ಯಾಕೆ ರಾಯರೇ ಹಾಗೆ ಹೇಳುತಾ ಇದ್ದೀರಾ

ಡಿ: " ನೋಡಿ ಮೆಟ್ರೆ , ಕಮಲಾ ಪಕ್ಸದೊರೋ ಹೆಣ್ಣು ಹೈಕಳಿಗೆಲ್ಲ ಸೈಕಲ್ ವಿತರಣೆ ಮಾಡಿ ಸೈಕಲ್ಉ ವ್ಯಾಪಾರ ಜಾಸ್ತಿ ಮಾಡವರೆ , ದಿನ ಒಂದಲ ಒಂದು ವಿಷಯಕೆ ಜಗಳ ಆಡುತ್ತಾ ಬಲು ಮನರಂಜನೆ ಕೋಟೋರೆ , ರೆಸಾರ್ಟು ಹೋಟೆಲು ರಾಜಕೀಯ ಅಂತ ಹೋಟೆಲು ಬುಸ್ಸಿನೆಸ್ಸು ಜಾಸ್ತಿ ಮಾಡವ್ರೆ , ಗಣಿಗಾರಿಕೆ ಅಂತ ಭೂಮಿ ಬಾರಾ ಕಮ್ಮಿ ಮಾಡವ್ರೆ , ಎಲ್ಲಾ ಕಡೆನು ಸಾರಾಯಿ ಅಂಗಡಿ ಜಾಸ್ತಿ ಮಾಡಿ , ಜನ ಅದನ ಕೇಮೆ ಇಲ್ಲದೆ ಅದನ ಕುಡಿದು , ಆಸ್ಪತ್ರೆ ಸೇರೋರೆ , ಹಿಂಗಾಗಿ ಆಸ್ಪತ್ರೆ ಬುಸ್ಸಿನೆಸ್ಸು ಜಾಸ್ತಿ ಮಾಡವರೆ ಅಂದರಪ್ಪ , ನಮ್ಮ ಅಬಕಾರಿ ಸಚಿವರೆನೋ ಜನಕೆ ಸಾಂತ್ವಾನ ಹೇಳೋ ಸಿರಿ ನಲ್ಲಿ ಅದು ಎಂಥದೋ ಆತುರದವನಿಗೆ ಏನೋ ಇಲ್ಲ ಅಂತಾರಲ್ಲ ಹಂಗೆ   ಆಸ್ಪತ್ರೆ ನಲ್ಲಿ ಇದ ನರ್ಸ್ಮಮ್ಮನ ಜೊತೆ ಏನೋ ಎಡವಾಟು ಮಾಡಿಕೊಂಡು  ಆ ಯಮ್ಮ್ಮ ಸಿಕಿದೆ ಚಾನ್ಸು ಅಂತ ಸಿಕಿದಸ್ತು ಆ ಯಾಪ್ಪನ ಕೈಇಂದ ಸಿಕಿದಸ್ಟು ಕಿತ್ತು ಕಲಿಸವಳೇ , ಇನ್ನು ಯಾರೋ ಒಬ್ಬರು ಫ್ರೆಂಡು ಹೆಂಡತಿಗೆ ಡವ್ ಹೊಡಿಯೋಕೆ ಹೋಗಿ ಕೆರ ಕಿತ್ತೊಗೋ ಹಾಗೆ ಬಾಸುಂಡೆ ಬಾರೋ ಹಾಗೆ ಓದಿಸಿಕೊಂಡು ಬಂದವರೇ , ಈಗ ಹೇಳಿ ಮೆಟ್ರೆ ಏನೋ ಮಾಡೋಣ ಅಂತ , ನೀವು ತಿಳಿದವರು "

 

ಮೇಷ್ಟ್ರು : ಸರಿ ರಾಯರೇ , ಕಮಲಕೆ ಇಲ್ಲ ಅಂದರೆ ಬಿಡಿ ಮಣ್ಣಿನ ಮಕ್ಕಳ ಪಕ್ಷ ಇದೆ ಅದಕೆ ನಿಮ್ಮ ಮತ ನಾ

ಡಿ : " ದಯವಿಟ್ಟು ಕ್ಷಮಿಸಬೇಕು ಮೆಟ್ರು , ಅಲ್ಲ ಇ ಮಣ್ಣಿನ ಮಗ ಜನಗಳಿಗೆ ಬ್ರಾಂಚ್ ಆಪೀಸು ಓಪನ್ ಮಾಡೋದು ಹೆಂಗೆ ಅಂತ ಹೇಳಿಕೊಟ್ಟಿದ್ದಾರೆ ಬುಡಿ , ಮೂರನೆದಕು ಟ್ರೈ ಮಾಡಿದರು ಆದರೆ ವರ್ಕ್ ಹಾಗಿಲ್ಲ , ಮತ್ತೆ ಆ ವಯ ನಮ್ಮಲ್ಲಿ ತೆನೆ ಹೊತ್ತೋ ಮಹಿಳೆ ತೆನೆ ಹಸ ಆಗೋವರೆಗೂ , ನಾನು ಬಿಡಕಿಲ್ಲ ಅಂತಾನೆ "

ಮೇಷ್ಟ್ರು : ಏನು ರಾಯರೇ ಅದು ಮೂರ್ನೆದಕೆ ಅಂದರೆ

ಡಿ: " ಎಲ್ಲೋ ಆ ಪೂಜಮ್ಮ ನನಗು ಒಂದು ಚಾನೆಲ್ ಕೊಡಿಸಿ ಅಂದಿರಬೇಕು , ಅದಕೆ ಇ ವಯ ಆಗಕ್ಕಿಲ ಹೋಗ್ ಹಮ್ಮಿ ಅಂದಿರಬೇಕು , ಮಾಡ್ದೋರ್ ಪಾಪ ಆಡಿದವರ ಬಾಯಿ ಅಲ್ಲಿ , ನಮ್ಮಗೆ ನಿಮ್ಮಗೆ ಏಕೆ ಬುಡಿ , ಇ ನನ್ ಮಕ್ಕಳಿಗೆ ವೋಟು ಹಾಕಿ ಬಿಟ್ಟರೆ ಎಲ್ಲರು ಬ್ರಾಂಚ್ ಆಪೀಸು ಶುರು ಮಾಡಿ ಬಿಡುತ್ತಾರೆ ಆಮ್ಯಾಕೆ "

 

ಮೇಷ್ಟ್ರು : ಸರಿ ರಾಯರೇ ಹಾಗಿದರೆ ನಿಮ್ಮ ಮತ ಕೈಗೆ ಅಂತ ಆಯಿತು , ಅಲ್ಲವೇ

ಡಿ : " ೬೬ ವರ್ಷದಿಂದ ನಮ್ಮಗೆ ಅವರು ಅದನೆ ಕೊಡುತ್ತಾ ಬಂದವರೇ , ಅವರಿಗೆ ಹೆಂಗೆ ಮತ ನೀಡೋದು ನೀವೇ ಹೇಳಿ ವಸಿ "

 

ಮೇಷ್ಟ್ರು: ಹಾಗಾದರೆ ನೀವೇ independent ಕ್ಯಾಂಡಿಡೇಟ್ ಆಗಿ ನಿಲ್ಲುತೀರ ಹೆಂಗೆ , ಯಾವ ಕ್ಷೇತ್ರದಿಂದ ಟಿಕೆಟ್ ಕೊಟ್ಟವರೇ

ಡಿ : " ಮೆಟ್ರೆ ಇ ಟಿಕೆಟ್ ಅಂತ ಹೇಳಿದರಲ್ಲ ಎಲ್ಲಿ ಕೊಡುತ್ತಾರೆ ಅಂತ ಹೊಸಿ ಹೇಳಿ , ನಮ್ಮ ತಿಪ್ಪನ ಕಳಿಸಿ ತರಿಸೋಣ ಮತ್ತೆ , ನಾನು ಬಸ್ ಸ್ಟಾಂಡ್ , ರೈಲ್ವೆ ಸ್ಟೇಷನ್ಉ ಎಲ್ಲ ಕಡೆ ಕೇಳಿದೆ ಎಲ್ಲೂ ಸಿಕ್ಕಿಲ "

 

ಮೇಷ್ಟ್ರು : ನಿಮ್ಮ ಅಂಥವರು ಎಲೆಕ್ಷನ್ ನಲ್ಲಿ ನಿಂತರೆ ದೇಶ ಹಾಳಾಗಿ ಹೋಗುತೆ ಅಸ್ಟೇ

ಡಿ : " ನಾನು ನಿಲ್ಲೋದು ಕರ್ನಾಟಕಕ್ಕೇ , ದೇಶ ಹಾಳಾದರೆ ನಮ್ಮಪ್ಪನ ಗಂಟು ಏನು ಹೋಗ ಬೇಕು ಬಿಡಿ "

ಮೇಷ್ಟ್ರು : ನಿಮ್ಮ ಹತ್ತಿರ ಮಾತು ಆಡುತ್ತಾ ಇದಿನಲ್ಲ ನನಗೆ ಬುದ್ದಿ ಇಲ್ಲ , ನಾನು ಇನ್ನು ಬರುತೀನಿ ರಾಯರೇ .

ಡಿ : " ಹೋಗ್ ಹೋಗಯೋ ".

 

                                                ಬರೆದ ಬಡಪಾಯಿ ,

                                                                           ಹರೀಶ್ ಎಸ್ ಕೆ