ಚೆಲುವರಳಿದಾಗ...
ಕವನ
ಬಾಳು ಚೆಲುವಲಿ ಹೊರಳಿ ಚಂದನ
ಮನೆಯ ಸುತ್ತಲು ತೋರಣ
ತನುವಿನೊಳಗಡೆ ಖುಷಿಯ ಹೂಮನ
ಹೃದಯದಾಳದಿ ಚೆಲುವನ
ನಗುವ ಮುಖದಲಿ ಸವಿಯ ಚುಂಬನ
ನೋಟ ಬೆಸುಗೆಯ ಬಂಧನ
ಕಾಟ ಕೊಡದೆಲೆ ಪ್ರೇಮ ಬಾಗಲು
ಮಧುರ ಭಾವದ ಸ್ಪಂದನ
ಹೀಗೆ ಬೀಗುತ ಸೊಕ್ಕಿಯೊಲುಮೆಯು
ಶಯನ ದೂರಕೆ ದೂಡುತ
ವರುಷ ಕಳೆಯಲು ಪುಟ್ಟ ಕಂದನು
ಮಡಿಲ ಸೇರುತ ನಲಿಯುತ
***
ಮನದ ಮಾತು
ಮನದ ರೀತಿ ಭಾವವಿರಲು
ತನುವ ಹಿಡಿಯಲಾದಿತೆ
ಕನಸುಯಿಂದು ಕಾಣುತಿರಲು
ನನಸು ಬರದೆ ಹೋದಿತೆ
ಸತ್ತ ಬದುಕ ಬೇರ ಹಿಡಿದು
ಸುತ್ತ ಬೇಡವೆಂದಿಗು
ಕತ್ತನೆತ್ತಿ ಸುತ್ತ ನೋಡು
ಮತ್ತೆ ಸೂರ್ಯ ಬರುವನು
ಜನಿಸಬೇಕು ಬುವಿಯ ಮೇಲೆ
ಬನದ ನಡುವೆ ಚೆಲುವಿದೆ
ಹಣವು ಮೂಲವಲ್ಲ ನಮಗೆ
ಗುಣವು ಬೇಕು ಬದುಕಿಗೆ
ಛಲವುಯಿರಲು ಬೆಳಕು ಬರಲಿ
ಬಲವು ನಮ್ಮದಾಗಲಿ
ಹಲವು ಕೀರ್ತಿ ಗಳಿಸಿ ಧರೆಲಿ
ಗೆಲುವ ಪಡೆದು ಬೆಳಗಲಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್