ಚೆಲುವು ಮತ್ತು ಗೆಳತಿ

ಚೆಲುವು ಮತ್ತು ಗೆಳತಿ

ಕವನ

ಚೆಲುವು ಮಾಸಲಿಲ್ಲ ಗೆಳತಿ ಚೆಲುವು ಮಾಸಲಿಲ್ಲ

ಚೆಲುವಿನೊಳಗೆ ಸವಿಯ ಗೆಲುವು ಸಿಹಿಯ ತಂದಿತಲ್ಲ

 

ಚೆಲುವಿನಾಳದೊಳಗೆ ಒಳಗೆ ಇಳಿದು ಬಂದಿತಲ್ಲ

ಚೆಲುವೆಲ್ಲ ಮನಸಿನೊಳಗೆ  ಇಳಿದು ಹಾಡಿತಲ್ಲ

ಚೆಲುವೆಂಬ ಬಯಕೆಗಳೂ ಕುಣಿದು ನಿಂತವಲ್ಲ

ಚೆಲುವಿಕೆಯ ಕನಸುಗಳೂ ಸುತ್ತ ನಲಿದುವಲ್ಲ

 

ಚೆಲುವೆಗಾಗಿ ನನ್ನ ಮನವು ಸುತ್ತ ತಿರುಗಿತಲ್ಲ

ಚೆಲುವಾಗಿಹ ಬನದ ಸುತ್ತ ಕಣ್ಣು ನಾಟಿತಲ್ಲ

ಚೆಲುವಿಹುದು ಹೃದಯದ ಆಳ ಪ್ರೇಮ ಚಿಗುರಿತಲ್ಲ

ಚೆಲುವಿರುವ ನಯನದ ಮಾತು ನನ್ನ ಹೊಕ್ಕಿತಲ್ಲ 

 

ಚೆಲುವಾದ ಮಾತಿನಲ್ಲಿ ನನಸು ತುಂಬಿತಲ್ಲ 

ಚೆಲುವೆನುವ ಮೋಹದೊಳಗೆ ಕಸುವು ಕಂಡಿತಲ್ಲ

ಚೆಲುವೆಗೆ ಮೋಹನನ ಸನಿಹ ಸಿಕ್ಕಿತಲ್ಲ

ಚೆಲುವಿಂದ ಮುತ್ತಿನೋಲೆ ಕಳಚಿ ಬಿದ್ದಿತಲ್ಲ

***

ಹನಿಗಳು

ನಾನು ಕೆಮ್ಮಿದೆ

ಹಿಡಿದು ಕೊಂಡು

ಹೋದರು !

*

ಸತ್ತರೂ

ಜನ

ಒಗ್ಗಟ್ಟಾಗಲಿಲ್ಲ!

 

ತಪ್ಪು

ಒಪ್ಪುಗಳು

ಸವಕಲು ನಾಣ್ಯಗಳು!

*

ಪುಟ್ಟ

ಕೆಲಸಗಳೇ

ದೇಶಕ್ಕೆ ಭವಿಷ್ಯ !

 

ಮರ ಹತ್ತಿದೆ

ಬಿದ್ದೆ

ಆಸ್ಪತ್ರೆ ಸೇರಿದೆ!

*

ಬೆಕ್ಕು

ಏನೂ ಹೇಳದೆ

ಹಾಲು ಕುಡಿಯಿತು!

 

ಉಪ್ಪು ಹುಳಿ ಖಾರ

ತಿಂದ ದೇಹಕ್ಕೆ

ಸೊಕ್ಕು ಜಾಸ್ತಿ!

*

ಬೆಟ್ಟದ ಮೇಲೆ

ದೇವರಿರುವುದೇ

ನಮ್ಮನ್ನು ಗಮನಿಸಲು!

 

ಪ್ರಕೃತಿ

ಮುನಿದಾಗ

ಬದಲಾಗು !

*

ಮತ್ತೆ

ವಸಂತ

ಬರಲಿಲ್ಲ !

 

ನ್ಯಾಯ

ಬಡವರ

ಕನಸುಗಾರ ! 

*

ಚಿಂತೆ

ಹೆಚ್ಚಾದವ

ಚಿತೆಯೇರಿದ ! 

 

ಚಿಂತನೆ

ಹೆಚ್ಚಾದವ

ಬೀದಿ ತಿರುಗಿದ ! 

*

ಬಡವರ

ಅಕ್ಕಿಯಲ್ಲಿ

ಕಲ್ಲು ಹುಳ ಹುಪ್ಪಡಿ ! 

 

*

ಬರಹಗಾರ

ಕತೆಯಾದಾಗ

ಸ್ಮಶಾನದಲ್ಲಿದ್ದ !

*

ನಾನು

ಎನ್ನುವಲ್ಲಿ

ನಾವೆನ್ನಿ !

 

ನಾನು

ಎನ್ನುವುದೇ

ಸಾವು !

*

ನನ್ನ ನಲ್ಲೆಯೇ

ನನ್ನ ಬದುಕು

ನನ್ನ ಬೆಳಕು !

 

ಗೆದ್ದವನಂತೆ

ಕಂಡೆ ನನ್ನವಳಲ್ಲಿ

ಸೋಲುತ್ತಿರುವೆ

 

ರಾಜಕೀಯದ

ನಡೆಯೊಳಗೆ ಮಾತ್ರ

ಶಕುನಿ ತಂತ್ರ

 

ಗುಲಾಬಿ ಹೂವು

ಪ್ರೀತಿಯ ಸಂಕೇತವು

ಕೆಳಗೋ ಮುಳ್ಳು

-ಹಾ ಮ ಸತೀಶ ಬೆಂಗಳೂರು

ಚಿತ್ರ್