ಚೆಲುವೆ ಅರ್ಥವಾಗದೇ ?
ಕವನ
ಮನ ಕರಗದಿರದೇ
ಈ ಸೊಗಸಿಗೆ
ಶುಭ್ರತೆಯ ಹೊಳಪಲ್ಲಿ
ಮಲ್ಲೆ ಮರುಗದಿರದೇ....?
ಕೊಡೆ ತೊಟ್ಟಿಕ್ಕದೇ
ಹನಿ ಬಿದ್ದ ಒಲವು
ಪ್ರೀತಿ ಮಳೆಯಲ್ಲಿ
ಭಾವುಕ ಆಗದಿರದೇ....?
ಕೋಪ ಸರಿಸದೇ
ನೆಮ್ಮದಿಗಿಲ್ಲ ಜಾಗ
ಮುದುಡಿ ಎಸೆದರೆ
ನಗುವು ಪಸರಿಸದಿರುವುದೇ....?
ಭಾವುಕತೆ ವಿಭಿನ್ನವಾಗದೇ
ತಳಮಳ ಎಲ್ಲರಲ್ಲೂ
ಬೆರಳು ಸಮವಿಲ್ಲ
ಉತ್ತರ ಹುಡುಕಲಾಗದೇ...?
ಚೆಲುವೆ ಅರ್ಥವಾಗದೇ
ಯಾನದಲ್ಲಿ ಕಲ್ಲು ಮುಳ್ಳು
ದಾಟಿದಾಗಲೇ ಬದುಕು
ಜಗದಲ್ಲಿ ಶಾಶ್ವತವಾಗದೇ...?
ಕಣ್ಣಿರು ತಡೆಯಲಾಗದೇ
ಬೆಲೆ ಇದೆ ಎಲ್ಲದಕ್ಕೂ
ಅರಿತು ನಡೆದಾಗ
ಜೀವನ ನಂದನವನವಾಗದೇ....?
-ಟಿ.ನಿರಂಜನಮೂರ್ತಿ, ಅರಸೀಕೆರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್