ಚೆಲು ತೋರಣ

ಚೆಲು ತೋರಣ

ಕವನ

ಕನ್ನಡ ಭಾಷೆಯ ನಲ್ಮೆಯ ಘಮಲು/

ನಡೆ ನುಡಿಯಲಿ ಹೊಮ್ಮಲಿ ಚಿಮ್ಮಲಿ//

ಕಂದನ ನಾಲಿಗೆಯಲಿ ನಲಿದಾಡುತ ಮೆರೆಯಲಿ/

ತಾಯಿ ಮಾತುಗಳ ಶುಭ್ರ ಮುತ್ತು ಮಣಿಗಳಂದದಲಿ//

 

ಭುವನೇಶ್ವರಿ ಮಾತೆಯ ಹಾಡಿ ಹೊಗಳುತಲಿ/

ಮಾತೃ ನೆಲದ ಋಣ ಸಂದಾಯ ಮಾಡುತಲಿ//

ಅಪ್ಪುತ ಒಪ್ಪುತ ಶಿರದಲಿ ಧರಿಸುತಲಿ/

ಎಲ್ಲಾ ಭಾಷೆಗೂ ಗೌರವ ಸಲಿಸುತಲಿ//

 

ಸಂಸ್ಕೃತಿ ತೇರನು ಎಳೆಯುತ ನಾಡ ಗುಡಿಯ ಕಟ್ಟುತಲಿ/

ಅಮ್ಮನ ಕಣ್ಣೀರ ಧಾರೆಯನು ಒರೆಸುತಲಿ//

ಗತ ಇತಿಹಾಸದ ಆಲದ ಬಿಳಲಿನಲಿ/

ಸಿಂಹಾವಲೋಕನ ಮಾಡುತ ಪಾಯವಾಗಿಸುತಲಿ//

 

ಹಸಿರಲಿ ಉಸಿರಲಿ ತನುವಲಿ ಸಿಹಿ ಹೂರಣ/

ಅ ಆ ಇ ಈ ಅಕ್ಷರ ಮಾಲೆಯ ಚೆಲು ತೋರಣ//

ಸಾಹಿತ್ಯ ಸೇವೆಯಲಿ ಬಿಂಬಿಸಲಿ ನುಡಿ ಮಾಪನ/

ಹೆತ್ತಬ್ಬೆಯ ಸೆರಗಿನೊಳಗಣ ಸವಿ ಅಮೃತಪಾನ//

 

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್