ಚೇತನ‌

ಚೇತನ‌

ಕವನ

ಕತ್ತಲು ಕಳೆದು ಬರುವ  ನಾಳೆಯ  ಬೆಳಕು 

ಮತ್ತೆ  ಹೊಸ ಕನಸ  ಹುಟ್ಟಿಸ  ಬಹುದು

ಕಹಿ ನೆನಪಿನ  ನಿನ್ನೆಯ  ಮತ್ತೆ೦ದೂ

ಕಾಡದ೦ತೆ ಅಳಿಸ  ಬಹುದು

 

ಹಳೆಯ  ನೋವ  ನೆನಪಿಗೆ ಮಡಿಲಾಗುವ  ಮುನ್ನ

ಕಳೆದು ಕೊ೦ಡ  ದಾರಿಯ  ಮತ್ತೆ ಹುಡುಕೋಣ

ಮರೆತ  ಗುರಿಯ  ಗಮ್ಯ  ತಲುಪೋಣ

ಮಡಿದ  ಪ್ರೀತಿಗೆ ಮರು ಜೀವ  ತು೦ಬೋಣ

ಮರೆತು ಹೋದ  ಬ೦ಧದ  ಜಾಡ  ಮತ್ತೆ ಹುಡುಕೋಣ

ಬದುಕಿಗೊ೦ದು ಹೊಸ  ಅರ್ಥ  ನಿಡೋಣ

 

ಪ್ರೀತಿ ಮಡುಗಟ್ಟುವ  ಮೊದಲು

ಸ೦ಭ೦ದಗಳು ಕಳೆದು ಹೋಗುವ  ಮೊದಲು

ಕಣ್ಣಲ್ಲಿನ  ಕನಸುಗಳು ಕರಗುವ  ಮೊದಲು

ಉಸಿರ  ಬಿಸಿ ಆರುವ  ಮೊದಲು

ಬದಲಾಗಿ ಬಿಡೋಣ.......

ಎಲ್ಲರೊಳಗೊ೦ದಾಗಿ ಬದುಕ  ಕಟ್ಟೋಣ.

Comments