ಚೈತ್ರದ ಸೊಬಗು

ಚೈತ್ರದ ಸೊಬಗು

ಬರಹ

ಚೈತ್ರ ಬಂದಿದೆ..
ಚಿತ್ತಾರ ಬರೆದಿದೆ..
ಆಹಾ..ಕಲಾಕಾರನೆಂದರೆ ಇವನೇ....
ಮಹಾಕಲಾವಿದ...ಮಹಾ ಕೋವಿದ...

ಕ್ಯಾನವಾಸೋ ಎಲ್ಲೆ ಇಲ್ಲದಷ್ಟು..
ಹರವು, ಎತ್ತರ ಎಲ್ಲಾ ಅಕ್ಷಿ ಕಕ್ಷೆಯಷ್ತು..
ಬ್ರಶ್ ಬಳಸಿದನೋ, ಸ್ಪ್ರೇ ಮಾಡಿದನೋ,
ನೈಫ಼್ ನಲ್ಲೇ ಹಚ್ಚಿದನೋ,,
ನಾನರಿಯೇ..

ಅದೇನು ಹೊಸತು.. ಅದೇನು ಹೊಳಪು..
ನಳನಳಿಪ ರಂಗಲಿ
ಚಿತ್ತಾರಕೆ ರಂಗು ಬಳಿದಿದೆ...
ಚೈತ್ರನಿಗೆ ಹಸಿರೇ ಮೆಚ್ಚು
ನೋಡುಗನಿಗೆ ಮತ್ತಿನ ಹುಚ್ಚು

ಕೆಂಪು, ಹಳದಿ, ನೀಲಿ,
ನೇರಳೆ, ಕೇಸರಿ ಎಲ್ಲಾ
ಹೂವಾಗಿ ಅರಳಿದೆ.
ಕಲ್ಲು ಮನದಲ್ಲೂ ಪ್ರೇಮ ಚಿಗುರಿದೆ
ನಾಸ್ತಿಕನಿಗೆ ದೈವ ಕಂಡಿದೆ
ಅರಸಿಕನಲಿ ಕವಿತೆ ಹೊಮ್ಮಿದೆ

ಚಿತ್ತಾರಕೆ ದನಿಯು ಕೂಡಿದೆ!
ಕುಹೂ ಕುಹೂ ಸ್ವರ ಹೊರಟಿದೆ..
ಜುಳು ಜುಳು ನಿನಾದವಿದೆ..
ತಂಗಾಳಿಯು ಸುಯ್ ಎಂದಿದೆ..
ದುಂಬಿಯು ಗುಯ್ ಗುಡುತಿದೆ..

ಸಗ್ಗವೇ ಇಲ್ಲಿ ಮೈವೆತ್ತಿದೆ....
ನೋಡುವ ಕಣ್ಣು, ಕೇಳುವ ಕಿವಿ ಇದ್ದರೆ ಸಾಲದು
ಅನುಭವಿಸಿ, ಆನಂದಿಸುವ ಮನವಿರಬೇಕು..
ಮನದಿ ವೈಶಾಲ್ಯತೆ ಇರಬೇಕು

ಬೇಕು ಬೇಡಗಳ ನಡುವೆ ನಾವು ನಾವಾಗಿರಬೇಕು!