ಚೈತ್ರ ಕೋಗಿಲೆ
ಬರಹ
ಬಂದಿತೋ ಶತಶತಮಾನದ ಮುದ್ದಾದ ಬಾಲೆ,
ಮಾಡಿತೋ ಮನಕರಗುವ ಇಂಪಾದ ನಾದಲೀಲೆ,
ಸ್ವಾಗತ ಕೋರಿದೆ ನವ ಚೈತ್ರದ ಬಾಗಿಲೆ,
ನಾಚುತ ಹಾಡಿರುವೆ ನೀನೆನ ಚೈತ್ರ ಕೋಗಿಲೆ !
ಇರುವೆ ನೀ ಮಾಮರದ ಮೇಲೆ,
ಕಳಿಯುವೆ ಚೈತ್ರದ ಸುಂದರ ವೇಳೆ,
ನನ್ನ ಮನದಾಸೆಯ ನೀ ಕೇಳೆ,
ಹಾಡಲು ನನಗೂ ನೀ ಕಲಿಸೆಲೆ !
ದೇಹ ಕಪ್ಪಾದರು ಕಂಠದಲ್ಲಿ ಮೊದಲೆ,
ಸ್ವರಮಾಧುರ್ಯವ ಕೇಳಿ ಕುಣಿಯಿತು ನವಿಲೆ,
ಸೂರ್ಯದೇವನು ಮಾಯವಾದನು ಹಗಲೆ,
ಬೀಳದಿರಲೆಂದು ಚೈತ್ರಬಾಲೆಗೆ ಬಿಸಿಲೆ !
ಚೈತ್ರದ ನಕ್ಷತ್ರ ನೀನು ಎಂದಿತು ಮುಗಿಲೆ,
ದುಂಬಿಗಳು ತಂದಿತು ನಿನ್ನ ಕೊರಳಿಗೆ ಹೂಮಾಲೆ,
ಮಾಮರಕೆ ಆಗಿರುವೆಯ ನೀನು ಕಾವಲೆ,
ನಿನಗೆ ಸಮಾನರಿಲ್ಲ, ಇದು ಕೇಳುಗರಿಗೆ ಸವಾಲೆ !
ಸ್ನೇಹದಿಂದ
ಗಣೇಶ್ ಪುರುಷೋತ್ತಮ