ಚೈತ್ರ ಸಂಭ್ರಮ
ಬರಹ
ಚೈತ್ರನೊಂದಿಗೆ ವಸಂತ ಬಂದನು
ಶಿಶಿರನಾರ್ಭಟಕಂತ್ಯ ತಂದನು
ಪ್ರಕೃತಿ ತಳೆದಳು ನವಚೇತನ
ಹೊಸತು ತಳಿರಿನ ತೋರಣ
ಚಳಿಗೆ ಮೌನದೆ ಕುಳಿತ ಕೋಗಿಲೆ
ಸ್ಪೂರ್ತಿಗೊಂಡಿತು ಚೈತ್ರನಿಂದಲೆ
ತುಂಬಿತೆಲ್ಲೆಡೆ ಮಧುರ ಗಾಯನ
ತಂದಿತೆಲ್ಲೆಡೆ ಪ್ರೇಮಸಿಂಚನ
ತರುಲತೆಗೆ ಹಿಗ್ಗಿನ ಪಲ್ಲವ
ಎಲ್ಲೆಲ್ಲು ಚಿಲಿಪಿಲಿ ಕಲರವ
ಅಳಿಸಿಹೋಯಿತು ಬರಡಾದ ನೋವು
ಅಂಕುರಾಯಿತು ಹೊಸತು ಮಾವು
ಪ್ರಕೃತಿಯಂತೆಯೆ ನಮ್ಮ ಬದುಕು
ಚೈತ್ರದಾಗಮ ಬಯಸಿದೆ
ಹಳೆಯನೋವಿನ ಕೊಳೆಯ ನೀಗಿಸಿ
ಸಂತಸದ ಚಿಗುರಿಗೆ ಕಾದಿದೆ