ಚೋಲೆ ಬಟೂರ
ಕಾಬೂಲ್ ಕಡಲೇಕಾಳು - ೩ ಕಪ್, ಕತ್ತರಿಸಿದ ಈರುಳ್ಳಿ - ೧ ಕಪ್, ಕತ್ತರಿಸಿದ ಹಸಿ ಮೆಣಸಿನಕಾಯಿ - ೫, ದಾಲ್ಚಿನ್ನಿ - ೨ ತುಂಡುಗಳು, ಲವಂಗ - ೪, ಹುಡಿ ಮಾಡಿದ ಕೊತ್ತಂಬರಿ ಬೀಜ - ೨ ಚಮಚ, ಶುಂಠಿ ತುರಿ - ೧ ಚಮಚ, ಕತ್ತರಿಸಿದ ಟೊಮೆಟೋ - ೧ ಕಪ್, ಹುಣಸೆ ರಸ - ಕಾಲು ಕಪ್, ತುಪ್ಪ - ಅರ್ಧ ಕಪ್, ಎಣ್ಣೆ - ೧ ಕಪ್, ಮೆಣಸಿನ ಹುಡಿ - ೩ ಚಮಚ, ಜೀರಿಗೆ ಹುಡಿ - ೨ ಚಮಚ, ಹುಡಿ ಮಾಡಿದ ಸೋಂಪು - ೨ ಚಮಚ, ಕತ್ತರಿಸಿದ ಪುದೀನಾ ಎಲೆಗಳು - ೧೦, ಕತ್ತರಿಸಿದ ಕೊತ್ತಂಬರಿ ಸೊಪ್ಪು - ೪ ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ಕಡಲೆಕಾಳುಗಳನ್ನು ೬ ಗಂಟೆ ನೆನೆಸಿ, ದಾಲ್ಚಿನ್ನಿ, ಲವಂಗ, ಕೊತ್ತಂಬರಿ ಬೀಜ, ಶುಂಠಿ ತುರಿ, ಮೆಣಸಿನ ಹುಡಿ, ಜೀರಿಗೆ ಹುಡಿ, ಸೋಂಪು ಹುಡಿಗಳನ್ನು ಸೇರಿಸಿ ರುಬ್ಬಿ ಮಸಾಲೆ ತಯಾರಿಸಿ, ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಹಸಿ ಮೆಣಸಿನಕಾಯಿ, ಈರುಳ್ಳಿ, ಟೋಮೆಟೊಗಳನ್ನು ಬಾಡಿಸಿ. ಈ ಮಿಶ್ರಣಕ್ಕೆ ಅರೆದ ಮಸಾಲೆ, ತುಪ್ಪ, ಉಪ್ಪು, ಹುಣಸೆರಸ, ಬೇಯಿಸಿದ ಕಡಲೆಕಾಳುಗಳನ್ನು ಹಾಕಿ ಕುದಿಸಿ. ಪುದೀನಾ ಎಳೆಗಳುಹಾಗೂ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿದರೆ, ಪೂರಿ (ಬಟೂರಾ) ಜೊತೆ ಸವಿಯಲು ಚೋಲೆ ತಯಾರು.