ಛತ್ರಪತಿ ಶಿವಾಜಿಯ ತಂದೆಯ ಸಮಾಧಿಗೆ ಸ್ಥಳ ಒದಗಿಸಿದವರು ಕೆಳದಿಯರಸರು
ಶಿವಾಜಿಯ ತಂದೆ ಶಹಾಜಿ ಭೋಸ್ಲೆ ಕರ್ನಾಟಕದ ಹೋದಿಗ್ಗೆರೆ (ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ) ಅರಣ್ಯದಲ್ಲಿ ಬೇಟೆಯಾಡುವ ಸಂದರ್ಭದಲ್ಲಿ ಕುದುರೆಯಿಂದ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡು ೧೬೬೫ರಲ್ಲಿ ಮೃತನಾದಾಗ ಆತನ ದೇಹವನ್ನು ಹೋದಿಗ್ಗೆರೆಯಲ್ಲೇ ಸಮಾಧಿ ಮಾಡಲಾತು. ಆಗ ಹೋದಿಗ್ಗೆರೆ ಕೆಳದಿಯ ರಾಜ್ಯದ ಸೀಮೆಯಲ್ಲೇ ಬರುತ್ತಿದ್ದು, ಶಹಾಜಿಯನ್ನು ಆ ಗ್ರಾಮದಲ್ಲೇ ಸಮಾಧಿ ಮಾಡಲು ಅವಕಾಶ ಕೊಟ್ಟದ್ದು ಕೆಳದಿಯ ಅರಸರೇ. ಸಮಾಧಿ ಮಾಡಲು ಅವಕಾಶ ಕೊಡಬೇಕೇ, ಬೇಡವೇ ಎಂಬ ಬಗ್ಗೆ ದೀರ್ಘವಾದ ಮಂತ್ರಾಲೋಚನೆ ನಡೆದು, ಕೊನೆಗೆ ಶಹಾಜಿ ಮರಣ ಹೊಂದಿದ ಸ್ಥಳದಲ್ಲೇ ಸಮಾಧಿಯನ್ನು ಗೌರವೋಚಿತವಾಗಿ ನಿರ್ಮಿಸಲಾಯಿತೆಂದು ಹೇಳಲಾಗಿದೆ. ಈ ಸಮಾಧಿಯನ್ನು ಕರ್ನಾಟಕ ಸರ್ಕಾರವು ಸಂರಕ್ಷಿತ ಸ್ಮಾರಕವೆಂದು ಘೋಷಿಸಿದೆ. ಶಿವಾಜಿಯ ಅನುಯಾಯಿಗಳೆಂದು ಹೇಳಿಕೊಂಡು ಮರಾಠಿ ಭಾಷೆಯನ್ನು ಮುಂದಿಟ್ಟುಕೊಂಡು ಬೆಳಗಾವಿಯಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿರುವವರು ಈ ವಿಷಯವನ್ನು ಗಮನಿಸಬೇಕು. ಸ್ವಭಾಷಾಪ್ರೇಮ ಒಳ್ಳೆಯದು. ಆದರೆ ಅದು ಪರಭಾಷಾ ದ್ವೇಷವಾಗಿ ಬೆಳೆಯಬಾರದು, ಬೆಳೆಸಬಾರದು. ಒಂದು ಭಾಷೆ ಬೆಳೆಯುವುದು, ಅಳಿಯುವುದು ಅದನ್ನು ಬಳಸುವ ರೀತಿಯಿಂದ. ಅನ್ಯ ಭಾಷಿಗರೊಡನೆ ಹೋರಾಡುವುದರಿಂದ, ಕಚ್ಚಾಡುವುದರಿಂದ ಅಲ್ಲ.
Comments
ಕವಿ ನಾಗರಾಜರೇ, ನಿಮ್ಮ ಬರೆಹ
In reply to ಕವಿ ನಾಗರಾಜರೇ, ನಿಮ್ಮ ಬರೆಹ by sada samartha
ವಂದನೆಗಳು ಸದಾನಂದರೇ. ದೀಪಾವಳಿ
ಕವಿನಾಗರಾಜರೆ,
In reply to ಕವಿನಾಗರಾಜರೆ, by ಗಣೇಶ
ನಿಜ ಗಣೇಶರೇ. ಶಿವಾಜಿ ಶಹಾಜಿಯ ಮಗ.
>>>ಶಿವಾಜಿಯ ಅನುಯಾಯಿಗಳೆಂದು
In reply to >>>ಶಿವಾಜಿಯ ಅನುಯಾಯಿಗಳೆಂದು by ಗಣೇಶ
ಆತ್ಮೀಯ ಗಣೇಶರೇ, ಉತ್ತಮ