ಛಲ ತೊಟ್ಟು ಏಳು ಸಾಹಸ ಮಾಡೇಳು
ಕವನ
ನಿನಗೆ ನಿನೇ ಸಾಟಿ
ಬೇರೆ ಬೇಡ ದಾಟಿ
ಸುಮ್ಮನೆ ಏಕೆ ಕುಂತಿ
ಬಿಟ್ಟು ಬಿಡು ಚಿಂತಿ
ಅಪಜಯ ಬಿಟ್ಟೆಳು
ಜಯ ಕಾಣೇಳು
ಕಾಯಕ ಮಾಡೇಳು
ಕೈಲಾಸ ಕಾಣೇಳು
ಕಣ್ಣಿರು ಸುರಿಸ ಬೇಡೆಳು
ನೋವು ನೀಗಲು ಏದ್ದೇಳು
ದುಃಖ ಕೊನೆಗಾಣಿಸಲು ಎದ್ದೇಳು
ನಿನಗಾಗಿ ಮೊದಲು ಏದ್ದೇಳು
ಧೈರ್ಯ ಮಾಡಿ ಏಳು
ಸಹನೆ ತೋರಿಸು ಏಳು
ಛಲ ತೊಟ್ಟು ಏಳು
ಸಾಹಸ ಮಾಡೇಳು
ಬೆದರಿಸಿದವರ ಬಿಟ್ಟೆಳು
ಹೆದರಿಸಿದವರ ಬಿಟ್ಟೆಳು
ಅವಮಾನ ಬಿಟ್ಟೆಳು
ಸಾಧನೆ ಮಾಡೇಳು
-ಹುಚ್ಚೀರಪ್ಪ ವೀರಪ್ಪ ಈಟಿ, ಶಿಕ್ಷಕರು, ಸಾ ನರೇಗಲ್ಲ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್