ಛಾನ್ಸೋ ಛಾನ್ಸು

ಛಾನ್ಸೋ ಛಾನ್ಸು

ಕವನ

ಒಂದು ಬಾರಿ ಮಾನ ಹರಾಜಾದ ಮೇಲೇ
ಛಾನ್ಸಪ್ಪ  ಛಾನ್ಸು  ಛಾನ್ಸೋ ಛಾನ್ಸು
ಛಾನ್ಸೋ ಛಾನ್ಸು ಛಾನ್ಸಪ್ಪ  ಛಾನ್ಸು  ||

ರಾಜಕಾರಣಿಯಾಗೋದೂನೂ  ಆಮೇಲೆ
ಸುಳ್ಳು ಸುಳ್ಳೇ ಕಥೆ ಕಟ್ಟೋದೂ  ಆಮೇಲೆ ||
ಎಲ್ಲದ್ರಲ್ಲೂ ಕಾಣಿಸಿಕೊಳ್ಳಬಹುದು ಆಗ
ಟಿ.ವಿ.ಯಲ್ಲಿ  ಟ್ಹೀವಿಯಿಂದ ಕಾಣ್ಬಹುದಾಗ ||

ಮೊದಲಿದ್ದಂಥ ಬರೀ ಮುಲಾಜು ಈಗ ಇಲ್ಲ
ಸುತ್ತ ಮುತ್ತ ಟೀಕೆ ಮಾಡೋ  ಜನಗ
ಳಿಲ್ಲ  ||
ಮರ್ಯಾದಸ್ಥ ಬೇಕಾಗಿಲ್ಲ ದೊಡ್ಡ ದೊಡ್ದೋರ್ಗೆ
ಹುಡುಕ್ತಿರ್ತಾರೆ ಅವರು ಮಾತ್ರ ಇನ್ತೋರನ್ನೇ ||

ಬಂಡವಾಳಕ್ಕೆ ಅವರಿದ್ದಾಗ ಇನ್ನೇನ್ ಚಿಂತೆ
ಪಾಪಿಷ್ಟರ ಕೈಯಾಗ್ಕೋಟಿ ಕೋಟಿ  ಕಂತೆ ||
ಗಂಡಾದ್ರೇನು  ಹೆಣ್ನಾದ್ರೇನು ಮಾರ್ಕೆಟ್ ಇಬ್ರಿಗುಂಟು
ಮಾನ ಬಿಟ್ಟು ಬಂದೋರ್ಗೆಲ್ಲ
ಛಾನ್ಸು ಚೆನ್ನಾಗುಂಟು ||

Comments