ಜಗಜ್ಯೋತಿ ಬಸವಣ್ಣ!
ಕವನ
ನಮ್ಮ ಜಗಜ್ಯೋತಿ ಬಸವಣ್ಣ ಬಂದ
ಈ ಜಗಕೆ ಧರ್ಮದ ಬೆಳಕನು ತಂದ!
ಬಸವನ ಬಾಗೇವಾಡಿಯಲಿ ಹುಟ್ಟಿದ
ಜಗದಲಿ ಕಾಯಕವೇ ಕೈಲಾಸ ಎಂದ
ಹೊಸ ಕ್ರಾಂತಿ ಧರ್ಮವನೇ ಸ್ಥಾಪಿಸಿದ
ಈ ಮಾನವ ಕುಲವನೇ ಉದ್ಧರಿಸಿದ!
ವಚನಗಳೆಂಬ ಸಾಹಿತ್ಯವನೇ ಬರೆದ
ಶ್ರೇಷ್ಠ ಭಕ್ತಿ ಭಂಢಾರಿ ಎನ್ನಿಸಿಕೊಂಡ
ಬಿಜ್ಜಳನ ಆಸ್ಥಾನದಲಿ ಮಂತ್ರಿಯಾದ
ಶ್ರೇಷ್ಠ ಸಮಾಜ ಸುಧಾಕರನಿವನಾದ!
ಅಯ್ಯೋ ಜಾತಿ-ವಿಜಾತಿಯನ್ನದಿರೆಂದ
ಭೂಮಿಯಲಿ ಎಲ್ಲರೂ ಸಮಾನರೆಂದ
ಹುಲು ಮಾನವರ ಘರ್ಷಣೆಗೆ ನೊಂದ
ಮತ್ತೆ ಹುಟ್ಟಿ ಬರಲು ಶಪಥ ಕೈ ಗೊಂಡ!
-ಕೆ ನಟರಾಜ್, ಬೆಂಗಳೂರು
ಚಿತ್ರ್
