.ಜಗತ್ತು-ವಿಸ್ಮಯ. By vidyavilas on Mon, 07/25/2011 - 14:06 ಕವನ .ಜಗತ್ತು-ವಿಸ್ಮಯ. ಬಾನಲಿ ಮೂಡಿದ ಅಂದದ ಚುಕ್ಕೆಗ- ಳೆಣಿಸುವರಾರೀ ಜಗದೊಳಗೆ ಬೆಳಕನು ನೀಡುವ ಆರ್ಕನ ಕಿರಣವ- ನಳೆಯುವರಾರೀ ಜಗದೊಳಗೆ ಹನಿಯುವ ಮಳೆಯಾ ಹನಿಗಳ ಲೆಕ್ಕವ- ಗುಣಿಸುವರಾರೀ ಜಗದೊಳಗೆ ಹಾಗೆಯೇ ಮನದಲಿ ಮೂಡಿದ ಪ್ರೀತಿಯ ಆಳವ- ನಳೆಯುವರಾರೀ ಜಗದೊಳಗೆ. Log in or register to post comments