ಜಗದಿ ನನಗಾಗಿ..

ಜಗದಿ ನನಗಾಗಿ..

ಕವನ

ಮನೆ ಖಾಲಿಯಾಗಿ ಮನ ಬರಿದಾಗಿ
ನಾ ಕುಳಿತಾಗ ಗಳಿಗೆ ಎಣಿಸಿ
 
ಪವನ ವಾಹನವೇರಿ 
ನೀ ಬಂದೆ ನೆನಪಾಗಿ  
ಅರಿದೆ ಆಸರೆಯಾಗಿ 
ಕತ್ತಲಲಿ ಬೆಳಕಾಗಿ 
ಬೆಂದವಗೆ ನೆಳಲಾಗಿ 
 
ಹೃದಯ ತುಂಬುತ ಬಂದೆ 
ದಾರಿ ತೋರುತ ನಿಂದೆ 
ದೂರ ವಿನಿತಿಂದು 
ದಾಹ ಅರಿತಿಂತು
 
ಬಳಿಯೆ ಬಂದಿರುವೆ 
ನೆನಹಾಗಿ ನಿಂದಿರುವೆ 
ಪ್ರೀತಿ ಮಾಗಿದಮೇಲೆ 
ಮಾತು ತೀರಿದ ಮೇಲೆ 
 
ಮೌನ ಆಡುವುದು 
ಹೃದಯ ಕೇಳುವುದು 
ಪ್ರೀತಿ ಫಲಿಸುವುದು 
ಜಗದ ಸುತ್ತಲೆಲ್ಲ 
ನಿನ್ನದೇ ಜೀವವೆಲ್ಲ 

Comments