ಜಗದಿ ಹರಡು ಶಾಂತಿಯ...
ಕವನ
ಜಗದ ಮಾತೆ ಬಂದುದೀಗ
ಮಿಗಿಲು ನವರಾತ್ರಿಯುತ್ಸವ
ಮುಗಿಸು ನಮ್ಮ ಮನದ ಕೊಳೆಯ
ಜಗದಿ ಹರಡು ಶಾಂತಿಯ
ನಾಡ ಜನರ ನೋವ ಕಳೆದು
ನೀಡು ಮನಕೆ ನೆಮ್ಮದಿ
ಬೇಡವಾದ ಸಮರವಿಂದು
ಕಾಡುತಿಹುದು ಲೋಕದಿ
ಭಕ್ತಿಯಿಂದ ಬೇಡುತಿಹೆವು
ಮುಕ್ತಿ ನೀಡು ದುರಿತಕೆ
ಶಕ್ತಿ ತುಂಬಿ ಪೊರೆಯಬೇಕು
ಶಕ್ತಿದಾತೆ ಅಂಬಿಕೆ
ಮಾಯದಂಥ ಗಾಳಿಯಲ್ಲಿ
ಹಾಯಿದೋಣಿ ಸಿಲುಕಿದೆ
ತಾಯಿ ನೀನು ಬಂದು ನಮ್ಮ
ಕಾಯಬೇಕು ಕರುಣದೆ||
ಸಮಸ್ತ ಬಂಧುಗಳಿಗೆ ನಾಡಹಬ್ಬ ನವರಾತ್ರಿಯ ಶುಭಾಶಯಗಳು,
ಸಕಲರ ಇಷ್ಟಾರ್ಥ ಜಗನ್ಮಾತೆ ಈಡೇರಿಸಲಿ
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್