ಜಗದೊಡೆಯ ರಾಮಚಂದಿರ
ಕವನ
ಜಗದ ಒಡೆಯನೆ ರಾಮಚಂದಿರ
ಸಿದ್ಧಗೊಂಡಿದೆ ರಾಮಮಂದಿರ
ಪ್ರಾಣ ಪ್ರತಿಷ್ಠೆಯ ಕ್ಷಣವು ಸುಂದರ
ನೋಡಿ ಧನ್ಯತೆ ಪಡೆವ ಕಾತರ
ನೆಲೆಸಿ ಭಕ್ತರ ಹೃದಯ ಮಂದಿರ
ಕೇಳಿ ಬರುತಿದೆ ನಾಮದಿಂಚರ
ರಾಮ ನಾಮದ ಘೋಷ ಸುಸ್ವರ
ಮೇರೆ ಮೀರಿದ ಪುಳಕದಾತುರ
ಎನಿತು ಪುಣ್ಯವ ಪಡೆದ ದಶರಥ
ಆಯ್ತು ಪಾವನ ನಮ್ಮ ಭಾರತ
ನಾಮ ನುಡಿಯಲಿ ಮನವು ಸಂತತ
ನಿನ್ನ ಸೇವೆಗೆ ಜನ್ಮ ಸೀಮಿತ
ಮಾತೆ ಸೀತೆಯ ಕದ್ದ ರಾವಣ
ಅವನ ಅಂತ್ಯಕೆ ಆಯ್ತು ಕಾರಣ
ಕಳುಹಿ ಲಂಕೆಗೆ ವೀರ ಹನುಮನ
ಮಾಡಿ ಕಡಲಿಗೆ ಸೇತು ಬಂಧನ
ಜೊತೆಯಲಿದ್ದನು ಅನುಜ ಲಕ್ಷ್ನಣ
ಲಂಕೆ ದನುಜರ ಮಾಡಿ ಮಾರಣ
ದುಷ್ಟ ಕೂಟದ ಧಮನ ವಿಕ್ರಮ
ರಾಮ ಸೀತೆಯ ಪುನರ್ಸಮಾಗಮ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್