ಜಗದ ಕವಿ ಕುವೆಂಪು

ಜಗದ ಕವಿ ಕುವೆಂಪು

ಕವನ

ಕನ್ನಡದ  ಹೆಮ್ಮೆ

ಕನ್ನಡದ  ಒಲುಮೆ

ಕನ್ನಡದ  ಗರ್ವ

ಕರ್ನಾಟಕದಲ್ಲಿ ಒಂದು ಪರ್ವ

ಇತಿಹಾಸ  ಸೃಷ್ಟಿಸಿದ ಕವಿ

 

ನಾಡ  ಗೀತೆ  ರಚಿಸಿದ

ವಿಶ್ವ  ಸಂದೇಶ  ಸಾರಿದ

ಜಡತೆ  ತೊಡೆದು ನವಚೇತನ ತುಂಬಿದ

ರೈತ  ಗೀತೆ  ನೀಡಿದ

ಯುಗದ  ಕವಿ ಜಗದ ಕವಿ

 

ನಾಟಕ, ಕಾದಂಬರಿ  ರಚಿಸಿ

ಎಲ್ಲರ  ಮನದಲ್ಲಿ  ನೆಲಸಿ

ಶ್ರೀ  ರಾಮಾಯಣ  ದರ್ಶನಂ ಬರೆದು

ಜ್ಞಾನ ಪೀಠ  ಪ್ರಶಸ್ತಿ  ಪಡೆದು

ರಾಷ್ಟ್ರ  ಕವಿಯಾದ  ಕುವೆಂಪು

 

ಕನ್ನಡ ಸಾಹಿತ್ಯ ಸಂಪತ್ತಿಗೆ ದೊರೆ

ಕನ್ನಡಿಗರಲ್ಲಿ  ನೆಲೆಸಿದ ದೃವತಾರೆ

ಇವರಿಂದ  ಧನ್ಯವಾಯಿತು ಈ ಧರೆ

ಎಲ್ಲರ  ಮನದಲ್ಲಿ  ನೆನಪಿನ ಧಾರೆ

ಮತ್ತೊಮ್ಮೆ  ಹುಟ್ಟಿ  ಬನ್ನಿ ಕನ್ನಡದ ನೆಲದಲ್ಲಿ

 

-ಎಸ್. ನಾಗರತ್ನ ಚಿತ್ರ ದುರ್ಗ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್