ಜಗದ ತಂದೆತಾಯಿ ಪೂಜೆ

ಜಗದ ತಂದೆತಾಯಿ ಪೂಜೆ

ಕವನ

ಆಷಾಢ ಮಾಸ ಹಬ್ಬಗಳ ರಸದೂಟ

ಜಗದ ತಂದೆ ತಾಯಿಯರ ಪೂಜೆಯಾಟ

ಕುಟುಂಬ ಸದಸ್ಯರು ಒಟ್ಟಾಗುವ ಕೂಟ

ಕಣ್ಣು ಮನಕೆ ಸಂಭ್ರಮಿಸೋ ನೋಟ

 

ಪತಿಯ ಆಯುಷ್ಯವೃದ್ಧಿಗೆ ವ್ರತನೇಮ ನಿಷ್ಠೆ

ಸತಿಯ ಪ್ರಾರ್ಥನೆ ಬೇಡಿಕೆ  ಪಾದಪೂಜೆ

ಪತಿ ಸಂಜೀವಿನಿ ಆರಾಧನೆ ಕಾಲವಿದು

ಶಿವ ಪಾರ್ವತಿ ಧ್ಯಾನ ವಿಶೇಷವಿದು

 

ಮಣ್ಣಿನಲಿ ಜೋಡಿದೀಪ  ಮಾಡುತಲಿ

ತಟ್ಟೆ ಅಕ್ಕಿಯ ಮೇಲಿರಿಸಿ ಜ್ಯೋತಿ ಬೆಳಗುತಲಿ

ಶುಭಾರಂಭ ದೇವ ಗಣಪನ ನೆನೆಯುತಲಿ

ತಂಬಿಟ್ಟು ಕಡುಬು ಮೋದಕ ನೈವೇದ್ಯ ಅರ್ಪಿಸುತಲಿ

 

ಜ್ಯೋತಿರ್ಭೀಮ ಅಮಾವಾಸ್ಯೆ  ಆಚರಿಸುತಲಿ

ಪಿತೃದೋಷ ನಿವಾರಣೆಗೆ ದಾನ  ಗೈಯುತಲಿ

ಮರಣಿಸಿದ ಪತಿಯ ಜೀವದಾನ ಪಡೆದ ಸಂಕೇತವಾಗಿ

ಶಿವೆ-ಪರಮೇಶರ ಭಕ್ತಿ -ಶಕ್ತಿ ಅನುಗ್ರಹವಾಗಿ

 

ವರಿಸಿದ ಮನದನ್ನನ ಆಶೀರ್ವಾದ ಪಡೆಯುತ

ಮನೆಯ ಸಹೋದರರ ಯೋಗಕ್ಷೇಮ ಗುರಿಯಾಗಿಸುತ

ಆಟಿ ಅಮಾವಾಸ್ಯೆ ತುಳುನಾಡಿನ ಆಚರಣೆಯಾಗಿಸುತ

ಭೀಮನಮಾವಾಸ್ಯೆಯ ವಿಶೇಷತೆಯಲಿ  ಮೈಮನ ತುಂಬಿ ಕೊಳುತ

(ಭೀಮನ ಅಮಾವಾಸ್ಯೆ (ಆಟಿ ಅಮಾವಾಸ್ಯೆ) ವಿಶೇಷ ದಿನದಂದು ಬರೆದ ಕವನ)

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್