ಜಗದ ದುಃಖವೆಲ್ಲ

ಜಗದ ದುಃಖವೆಲ್ಲ

ಕವನ

ಜಗದ ದುಃಖವೆಲ್ಲ

ನನ್ನೊಳಗೆ ಆವರಿಸಿತ್ತು

ನಾ ಅನಾಥನಾಗಿದ್ದೆ ಆ ದಿನವೆಲ್ಲ

ನನ್ನೊಳಗೆ ಆ ದಿನ ಆ ಭಾವ ಬಾಸವಾಗಿತ್ತು

 

ನನ್ನ ಕೈ ಹಿಡಿದು ನೆಡೆಸುವರಿಲ್ಲ

ನನ್ನ ಕಣ್ಣೀರು ವರೆಸುವರಿಲ್ಲ

ನನ್ನ ಕಷ್ಟವ ಕೇಳುವರಿಲ್ಲ

ಎಲ್ಲರಿದ್ದವರೂ, ಆ ದಿನ  ನನಗೆ ಇಲ್ಲದಂತಾಯಿತಲ್ಲ

 

ಆದರೂ ಮನಸ್ಸು ಕಲ್ಲು ಮಾಡಿಕೊಂಡೆ

ಗೊತ್ತು ಪರಿಚಯವಿಲ್ಲದವರು ನನಗೆ ಆಸರೆಯಾದರು

ಕೈ ಹಿಡಿದು ನಡೆಸಿದರು ಹೊತ್ತು ಕೊಂಡು ಇಳಿಸಿದರು

 ನಾ ಅವರ ಮರೆಯುವುದಿಲ್ಲ, ನಾ ಅವರಿಗೆ  ಚಿರ ಋಣಿಯಾಗಿರುವೆ ಎಂದೆಂದು.

 

ನಾ ಅಂದು ಅನಾರೋಗ್ಯದಿಂದ ಬಳಲುತ್ತಿದೆ.

ನನ್ನಿಂದ ನಡೆಯಲು ಆಗುತ್ತಿರಲಿಲ್ಲ ನಿಶಕ್ತನಾಗಿದ್ದೆ

ದುಃಖದಲ್ಲಿ ಮುಳುಗಿದ್ದೆ ಅನಾರೋಗ್ಯದಲ್ಲಿ ತೇಲುತ್ತಿದ್ದೆ

ವೈಧ್ಯರು ಚಿಕಿತ್ಸೆ ನೀಡಿದರು ತದನಂತರ ಮನಸ್ಸು ಅರಳತೊಡಗಿತು.

 

                                                   - ಹೆಚ್.ವಿರುಪಾಕ್ಷಪ್ಪ ತಾವರಗೊಂದಿ

 

 

 

Comments