ಜಗವನುಳಿಸುವ ಬಾರಾ.. - ವೋಟ್ ಅರ್ಥ್ ಫಾರ್ ಅರ್ಥ್ ಅವರ್

ಜಗವನುಳಿಸುವ ಬಾರಾ.. - ವೋಟ್ ಅರ್ಥ್ ಫಾರ್ ಅರ್ಥ್ ಅವರ್

ಬರಹ

ಸಂಪದಿಗರಿಗೆಲ್ಲ ಯುಗಾದಿಯ ಶುಭಾಶಯಗಳು.

ಎಲ್ಲರೂ ಬೇವು-ಬೆಲ್ಲ ಹಂಚಿ, ಒಬ್ಬಟ್ಟು ತಿನ್ನುತ್ತಿರಬೇಕಲ್ವಾ? ಜೀವನದ ಸುಖ ಮತ್ತು ದು:ಖಗಳೆರಡನ್ನೂ ನೆನಪಿಸಿ, ಎರಡನ್ನೂ ಒಮ್ಮನಿಸ್ಸಿನಿಂದ ಎದುರಿಸಿ ಎಂದು ಉಸಿರುವ ಈ ಹಬ್ಬ ನಿಮಗೆಲ್ಲ ಸುಖ ಶಾಂತಿ ನೆಮ್ಮದಿಯನ್ನ ಈ ಹೊಸ ವರ್ಷದಲ್ಲಿ ತರಲಿ ಎಂದು ಹಾರೈಸುತ್ತೇನೆ. ಹಾಗೇ ನಿಮಗೆಲ್ಲ ಒಂದು ಕಿವಿ ಮಾತು. 

ಜಗತ್ತು ಸಂತೋಷವಾಗಿರಬೇಕು ಅಂದ್ರೆ, ನಾವು ಮಾತ್ರ ಸುಖವಾಗಿರೋದು ಅಂತಲ್ಲ. ನಮ್ಮ ಸುತ್ತಮುತ್ತಲಿನ ಸಕಲ ಚರಾಚರ ಪಶು, ಪಕ್ಷಿ, ಪ್ರಾಣಿಗಳು, ಪ್ರಕೃತಿ ಎಲ್ಲವೂ ಸುಖವಾಗಿರಬೇಕು ಅಲ್ಲವೇ? ಇಡೀ ಜಗತ್ತು ಹಸಿರುಮನೆ ಪರಿಣಾಮದಿಂದಾಗಿ ಅಳುತ್ತಿದೆ. ವಿಶ್ವದೆಲ್ಲೆಡೆ ಭೂತಾಯಿಯ ರೋಧನ ಮುಗಿಲು ಮುಟ್ಟುತ್ತಿದೆ. ವರ್ಷಗಟ್ಟಲೆ ತಪ್ಪನ್ನು ಮಾಡಿರುವ ನಾವು ಈಗ ಅದನ್ನು ತಟ್ಟನೆ ತಡೆಗಟ್ಟಲು ಸಾಧ್ಯವಿಲ್ಲ. ಆದ್ರೆ, ಇದರ ಬಗ್ಗೆ ಅರಿವನ್ನ ಮೂಡಿಸಿ ಸಾಧ್ಯವಾದಷ್ಟೂ ಮಂದಿ ಪರಿಸರ ಉಳಿವಿನ ಕಡ ಗಮನ ಹರಿಸುವಂತೆ ನಾವೂ ಖಂಡಿತ ಮಾಡಬಹುದು. ಅಂತದ್ದೇ ಒಂದು ಪ್ರಯತ್ನ "ಅರ್ಥ್ ಅವರ್ (Earth Hour)".

ವಿಶ್ವದೊಂದು ಮೂಲೆಯಲ್ಲಿರುವ ಸಿಡ್ನಿಯ ೨.೨ ಮಿಲಿಯನ್ ಜನರು ಪರಿಸರದ ಉಳಿವಿಗಾಗಿ ಪ್ರಾರಂಭಿಸಿದ "ವೋಟ್ ಅರ್ಥ್ ಫಾರ್ ಅರ್ಥ್ ಅವರ್" ಕಾರ್ಯಕ್ರಮ ಈ ವರ್ಷ ಪ್ರಪಂಚದ ೧೦೦೦ಕ್ಕೂ ಹೆಚ್ಚು ನಗರಗಳ ಗಮನವನ್ನು ತನ್ನತ್ತ ಸೆಳೆದಿದೆ. ಇದಕ್ಕೆ ನಿಮ್ಮ ಬೆಂಬಲವೂ ಇದ್ದರೆ ನಾಳೆ ರಾತ್ರಿ ೮:೩೦ ರಿಂದ ೯:೩೦ ರವರೆಗೆ ನಿಮ್ಮೆಲ್ಲ ವಿಧ್ಯುತ್ ಉಪಕರಣಗಳನ್ನು, ವಾಹನಗಳನ್ನು ಉಪಯೋಗಿಸದಿರಿ. ನೀವು ನಿಮ್ಮ ಲೈಟ್ ಆಫ್ ಮಾಡಿದರೆ ಅದೇ ಪರಿಸರದ ಉಳಿವಿಗೆ  ನಿಮ್ಮ ಮತ.

ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು http://earthhour.in ನಿಂದ ಪಡೆಯಬಹುದು. 

ಕೆಳಗಿನ ವಿಡಿಯೋ ನಿಮಗೆ ಈ ಕಾರ್ಯಕ್ರಮದ ಒಂದು ಕಿರುಪರಿಚಯ ಮಾಡಿಕೊಡುತ್ತದೆ.

ಹೊಸ ವರ್ಷ ಆಚರಿಸುತ್ತ ನನ್ನೀ ಕಿವಿ ಮಾತಿಗೆ ಹು ಗುಟ್ಟರೆ ನನ್ನ ವರ್ಷಾಚರಣೆ ಪ್ರಾರಂಭ ಆಗುತ್ತೆ. ನಾಳೆ ಆಫೀಸಿನಲ್ಲೂ ಕನಿಷ್ಟ ೭೫% ರಷ್ಟು ಕಡಿಮೆ ವಿಧ್ಯುತ್ಚಕ್ತಿ ಬಳಸಿ ಅಂತ ಕೊಟ್ಟ ಕರೆಗೆ ಈಗಾಗಲೇ ಬೆಂಬಲ ಒದಗಿದೆ. ನೀವೂ ಭಾಗವಹಿಸುತ್ತೀರೆಂದು ನಂಬಿದ್ದೇನೆ.

ನಿಮ್ಮ
ಶಿವು