ಜಗವೆಲ್ಲ ಮಲಗಿರಲು...
ಕವನ
ಜಗವೆಲ್ಲ ಮಲಗಿರಲು ತಾನೊಬ್ಬನೆದ್ದ
ಬದುಕಿನಾ ಗೂಢವರಿಯೆ ಆದನವ ಸಿದ್ಧ
ಭೋಗ, ಭಾಗ್ಯವೆಲ್ಲ ತೊರೆದು ಬೀದಿಗವ ಬಿದ್ಧ
ನಿಜದಬದುಕಿನರ್ಥವರಿತುನಾದನವ ಶುದ್ಧ
ಬೋಧಿವೃಕ್ಷದಡಿಯಲ್ಲಿ ತಪಕೆ ಅವ ಬದ್ಧ
ಜ್ಝಾನೋದಯವಾದಂದೇ ಎಲ್ಲವನ್ನು ಗೆದ್ಧ
ಅಂದಿನಿಂದೆಂದೆಂದಿಗು ಲೋಕಕವನೆ ಬುದ್ಧ
ಬೆಳಕ ನೀಡೆ ಬಂದಾ, ದಾರಿ ತೋರೊ ಬುದ್ಧ
ಅಜ್ಝಾನತಿಮಿರ ನೀಗಿಸುವಾ ಈತನೇ ಬುದ್ಧ
ಕೈಬಿಡದಾತನೀ ಬುದ್ಧ, ಜಗದಾತನೀ ಬುದ್ಧ
-ಎಂ.ಎಸ್.ಮುರಳಿಧರ್, ಶಿರಾ