ಜಗ್ಗು ‘ದಾದಾ’ love ದಿನಗಳು !

ಜಗ್ಗು ‘ದಾದಾ’ love ದಿನಗಳು !

ಜಗ್ಗುದಾದಾ ಹೆಂಗಿದೆ...!.ಡಾನ್​ ಒಬ್ಬನ ಲವ್ ಸ್ಟೋರಿ.ಹಾಸ್ಯದಲ್ಲಿ ಹೆಣೆಯಲ್ಪಟ್ಟಿದೆ.ಮಂದಹಾಸ ತರೋ ಚಿತ್ರ.ಲವ್ ಮಾಡೋ ಡಾನ್.ಸಂಪ್ರದಾಯಸ್ತ ಹುಡ್ಗಿ ಲವ್ವರ್
ದರ್ಶನ್ ಡಾನ್-ಫ್ಯಾನ್ಸ್ ಖುಷ್.
------
ಜಗ್ಗುದಾದಾ. ದರ್ಶನ್ ಡಾನ್ ಆದ ಚಿತ್ರ. ಡಾನ್​ ಗೆ ಕಾಮಿಡಿ ಸೆನ್ಸ್ ಇದೆ. ಡೈಲಾಗ್​ ನಲ್ಲಿ ಪಂಚೂ ಇದೆ. ಅದು ಹೆಚ್ಚೇನಿಲ್ಲ. ಫೈಟ್ ಮಾಡೋದು ಗೊತ್ತು. ಲವ್ವ್ ಮಾಡೋಕೆ ಬರೋದಿಲ್ಲ. ಹುಡ್ಗಿ ಹಿಂದೆ ಬೀಳೋ ಈ ಡಾನ್, ಮುಂದೇನ್ ಆಗ್ತಾನೆ. ಅದಕ್ಕೆ ಈ ಸ್ಟೋರಿ ಓದಿ.

ಜಗ್ಗುದಾದಾ. ಒಬ್ಬ. ಇಬ್ಬರಲ್ಲ. ಈ ದಾದಾ ಡಾನ್. ಅಪ್ಪನೂ ಡಾನ್. ಅಜ್ಜನು ಡಾನ್. ಮನೆ ಮಂದಿಯಲ್ಲ ಡಾನ್. ಆದರೆ, ಮೂವರಿಗೂ ಒಂದೊಂದು ಕಥೆ ಇದೆ. ಕಥೆಯಲ್ಲಿ ಎಲ್ಲರೂ ಬಂದು ಹೋಗ್ತಾರೆ. ಆದರೆ, ಸಿನಿಮಾದಲ್ಲಿ ಅಜ್ಜನದ್ದೇ ಪ್ರಮುಖ. ಮೊಮ್ಮಗನದೂ ಪ್ರಮುಖ.

ಜಗ್ಗು ದಾದಾ ಹಫ್ತಾ ವಸೂಲಿ ಮಾಡ್ತಾನೆ. ಹೊಡೀತಾನೆ. ಮನೆ ಹೊಕ್ಕು ದುಡ್ಡೂ ಕಿತ್ಕೋತಾನೆ. ಆದರೆ,ಎಲ್ಲರನ್ನ ಹೆದರಿಸೋ ಈ ಡಾನ್​ ಗೆ ಲವ್ ಮಾಡೋಕೆ ಬರೋದಿಲ್ಲ. ಸಂಪ್ರದಾಯಸ್ತ ಹೆಣ್ಣು ಯಾರೂ ಅಂತಲೂ ಗೊತ್ತಿಲ್ಲ. ಈತ ನೋಡಿದ್ದೇ ಬಾರ್ಲ್ ಗರ್ಲ್ ಗಳನ್ನ. ಆಕೆ ಮೇಲೇನೆ ಈತನಿಗೆ ಲವ್ವು.ಅಮ್ಮ ಸಪೋರ್ಟ್ ಮಾಡ್ತಾಳೆ. ಅಪ್ಪ ಏನೂ ಹೇಳೋದಿಲ್ಲ. ಅಜ್ಜ ಎಲ್ಲವನ್ನೂ ವಿರೋಧಿಸುತ್ತಾನೆ.

ಕಥೆ ಹೀಗೆ ಸಾಗುತ್ತದೆ.ನಿರ್ದೇಶಕ ರಾಘವೇಂದ್ರ ಹೆಗಡೆ, ಈಗ ನೀವೂ ಕೇಳಿದಷ್ಟು ಕಥೆಯನ್ನ ಸೀರಿಯೆಸ್ ಆಗಿ ಹೇಳಿಲ್ಲ. ಕಾಮಿಡಿ ಮಾಡ್ತಾರೆ. ಸೀರಿಯೆಸ್ ವಿಷ್ಯವನ್ನ ನವಿರು ಹಾಸ್ಯದ ಮೂಲಕ ಜನರಿಗೆ ಬಡೆಸುತ್ತಾರೆ. ಹಾಗಂತ ಕಾಮಿಡಿಯಲ್ಲಿ ಡಬಲ್ ಮೀನಿಂಗ್ ಡೈಲಾಗ್ ಹುಡುಕೋಕೆ ಹೋಗಬೇಡಿ. ಅವು ಕಂಡಿತ ಸಿಗೋದಿಲ್ಲ. ಇಲ್ಲಿ ನಿಮಗೆ ಸಿಗೋದು ಮುಖದಲ್ಲಿ ಮಂದಹಾಸ ಮೂಡಿಸೋ ರಂಜನೆ. ಮನರಂನೆ.

ಜಗ್ಗು ದಾದಾ ಉರ್ಫ ದರ್ಶನ್ ದಾದಾ ಆಗಿಯೇ ಬದಲಾಗಿದ್ದಾರೆ. ಡಾನ್ ಆಗಿಯೇ ಅವಶ್ಯಕ್ಕೆ ತಕ್ಕನಾಗಿ ಅಬ್ಬರಿಸುತ್ತಾರೆ.ದರ್ಶನ್ ಡೈಲಾಗ್ ಪ್ರಿಯರಿಗೆ  ಇಲ್ಲಿ ಬೇಸರ ಆಗೋದಿಲ್ಲ. ಕಥೆ ಓಟಕ್ಕೆ ಬೇಕಾದಾಗ ಡೈಲಾಗ್ ಬರುತ್ತವೆ. ಅಷ್ಟೆ.

ಚಿತ್ರ ತಂಡ ಹೇಳಿದಂತೆ ಇದೊಂದು ಫ್ಯಾಮಿಲಿ ಮನರಂಜನೆ ಚಿತ್ರ. ಆದರೆ, ಕಥೆಯನ್ನ ನೀವು ಮೊದಲೆ ಗೆಸ್ ಮಾಡಿ ಹೇಳಿ ಬಿಡಬಹುದು. ಆದರೆ, ಅಲ್ಲಿ ಬರೋ ಹಾಸ್ಯ ದೃಶ್ಯಗಳು ಅದನ್ನ ಮಾಡೋಕೆ ಬಿಡೋದಿಲ್ಲ. ಜಗ್ಗುದಾದಾ ಆಗಿ ದರ್ಶನ್ ಇಷ್ಟ ಆಗುತ್ತಾರೆ. ಲವ್ವರ್ ಬಾಯ್ ಥರ ಲುಕ್ಕಲ್ಲೂ ಇಷ್ಟ ಆಗುತ್ತಾರೆ. ರವಿಶಂಕರ್ ನಿಮನ್ನ ನಗಿಸುತ್ತಾರೆ. ಮೊಮ್ಮಗನನ್ನ ಕಾಡುತ್ತಾರೆ. ಪೀಡಿಸುತ್ತಾರೆ. ತೆರೆ ಮೇಲೆ ಬಂದಾಗೆಲ್ಲ ಮಜಾ ಕೋಡ್ತಾರೆ.

ನಾಯಕಿ ದೀಶಾ ಸೇಠ್ ಸಂಪ್ರದಾಯಸ್ತ ಹುಡುಗಿ ಅನಿಸೋದು ಕಷ್ಟ. ಪ್ರಯತ್ನ ಮೆಚ್ಚಬಹುದೇನೋ. ಮಜಾ ಟಾಕೀಸ್ ಸೃಜನ್ ಇಲ್ಲೂ ಹಾಸ್ಯ ಮಾಡಿದ್ದಾರೆ. ಆದರೆ, ದರ್ಶನ್ ಗೆಳೆಯನ ಚೌಕಟ್ಟಿನಲ್ಲಿ. ಬುಲೆಟ್ ಬರ್ತಾರೆ. ಮಜಾ ಕೊಟ್ಟು ಹೋಗ್ತಾರೆ. ಹರಿಕೃಷ್ಣರ ಸಂಗೀತದ ನೆನಪಲ್ಲಿ ಉಳಿಯೋದು ಕಷ್ಟ. ಚಿತ್ರ ನೋಡೋವಾಗ ಖುಷಿ ಕೋಡುತ್ತವೆ. ಅನಂತ್ ನಾಗ್ ಕೆಲವೇ ದೃಶ್ಯದಲ್ಲಿ ಬರುತ್ತಾರೆ. ಬಂದರೂ ಮನದಲ್ಲಿ ಉಳಿತಾರೆ. ಜಗ್ಗುದಾದಾ ನೊಡೇಬಲ್ ಸಿನಿಮಾ. ಅಭಿಮಾನಿಗಳಂತೂ ಖುಷ್ ಆಗಿದ್ದಾರೆ.
-ರೇವನ್ ಪಿ.ಜೇವೂರ್​