ಜಡಭರತ

ಜಡಭರತ

ಬರಹ

ಒಮ್ಮೆ ನಾನು ಸಪ್ನಾ ಬುಕ್ಸ್ ಅಂಅಗಡಿಗೆ ಭೈರಪ್ಪ ನವರ ಆವರಣ ತರ್ಲಿಕ್ಕಂತಾ ಹೋಗಿದ್ದೆ, ಅಲ್ಲಿ ನನ್ನ ಕಣ್ಣಿಗೆ ಒಂದು ಪುಸ್ತಕ ಬಿತ್ತು. ಅದರ ಹೆಸರು "ನಾನೆ ಬಿಜ್ಜಳ" ಅಂತ ಹಂಗ ಇರ್ಲಿ ಓದೋಣ ಅನ್ಕೋಂದು ತಗೋಡು ಮನೀಗೆ ಹೋದ್ ಮ್ಯಾಲೆ ಅ ಪುಸ್ತಕ ಓದಿದೆ. ಅದು ಒಂದು ನಾಟಕ. ಅದನ್ನು ಬರದವರ್ಯಾರು ಅಂತ ನೋಡಿದಾಗ ಗೊತ್ತಾತು ಅವ್ರೆ ಜಡಭರತ ಅಂತ. ಅದು ಅವ್ರು ನಮ್ಮಧಾರವಾಡ ದವರು, ಮನೋಹರ ಗ್ರಂಥಮಾಲೆ ಯನ್ನು ಹುಟ್ಟು ಹಾಕಿದವರು ಅಂತ ನಮ್ಮ ಒಬ್ಬ ಸಂಪದ ಮಿತ್ರರೆ ತಿಳಿಸಿದ್ದರು. ಅವರ ಬಗ್ಗೆ ಸ್ವಲ್ಪ ಆಸಕ್ತಿ ತಗೊಂಡು ಓದಿ ಒಂದು ಕಿರು ಪರಿಚಯನ್ನು ಸಂಪದಿಗರಿಗೆ ಅರ್ಪಿಸಬೇಕು ಅನಿಸ್ತು. ಅದಕ್ಕೆ ಈ ಲೆಖನ.. ಒಪ್ಪ್ಸಿಕೊಳ್ಳಿ.. ಗೆಳೆಯರೆ.

ಜಡಭರತ ಅವರ ಪೂರ್ಣ ಹೆಸರು ಗೋವಿಂದ ಭೀಮಾಚಾರ್ಯ ಜೋಶಿ ಹುಟ್ಟಿದ್ದು 1904 ಜುಲೈ 29 ರಂದು ಈಗಿನ ಗದಗ ಜಿಲ್ಲೆಯ ಹೊಂಭಳ ಎಂಬ ಪುಟ್ಟ ಗ್ರಾಮದಲ್ಲಿ. ಬಾಲ್ಯದಲ್ಲೆ ಜಿ.ಬಿ ಯವರು ತಂದೆಯನ್ನು ಕಳೆದುಕೊಂಡು ವಿಧ್ಯಾಬ್ಯಾಸಕ್ಕೆಂದು ಧಾರವಾಡ ದಲ್ಲಿದ್ದ ಅವರ ಚಿಕ್ಕಪ್ಪನ ಮನೆಗೆ ಬಂದು ಅಲ್ಲೆ ತಮ್ಮ ವಿಧ್ಯಾಬ್ಯಾಸ ಮುಗಿಸುತ್ತರೆ.

ನಮ್ಮ ಕನ್ನಡ ಚಿತ್ರರಂಗದಲ್ಲಿ ಧರ್ಮಸೆರೆ ಇಂಬ ಚಿತ್ರದ ಮೂಲ ಕಾದಂಬರಿ ಯನ್ನು ಬರೆದವರು ನಮ್ಮ ಜಿ ಬಿ ಯವರೆ ಅಂತ ಎಷ್ಟೊ ಜನರಿಗೆ ಗೊತ್ತಿಲ್ಲ. ಅವರು ಏ ಕಾದಂಬರಿಯನ್ನು 1934 ರಲ್ಲಿ ಬರೆಯುತ್ತಾರೆ, ಮುಣ್ದೆ ಅದು ಚಾಲನ ಚಿತ್ರ ವಾಗಿ ಅಧ್ಬುತ ಯಶಸ್ಸು ಕಾಣುತ್ತದೆ.ಅದೇ ರೀತಿ ಅವ್ರ ಉಳಿದ ಕೃತಿಗಳು ತುಂಬಾ ಸೊಗಸಾಗಿವೆ(ನಾನು ಯೆಲ್ಲವನ್ನು ಓದಿಲ್ಲ ಕ್ಶಮೆ ಯಿರಲಿ). ಅವರ ಕೆಲವು ಕೃತಿಗಳು ಇಂತಿವೆ.

"ಜಡಭರತನ ಕನಸುಗಳು"
"ಮೂಕ ಬಲಿ"
"ಕದಡಿದ ನೀರು"
"ಆ ಊರು ಏ ಊರು"
"ಸತ್ತವರ ನೆರಳು"
"ಪರಿಮಳರವರು"
"ನಾನೆ ಬಿಜ್ಜಳ".

ಸಂಪದಿಗರಲ್ಲಿ ಮನವಿ: "ಜಡಭರತ" ರ ಬಗ್ಗೆ ಹೆಚ್ಚಿನ ಮಾಹಿತಿ ಇದ್ದಲ್ಲಿ ದಯವಿಟ್ಟು ಹಂಚಿಕೊಳ್ಳಿ.

ಪ್ರೀತಿಯಿಂದ
ಗಿರಿ