ಜನತೆಯ‌‌ ನಿಲುವು ಯಾರೆಡೆಗೆ ?

ಜನತೆಯ‌‌ ನಿಲುವು ಯಾರೆಡೆಗೆ ?

ಮಂಗಳೂರು‌ ಮಹಾನಗರ ಪಾಲಿಕೆಯ‌ ಚುನಾವಣೆ  ನವಂಬರ್ 12 ಕ್ಕೆ ನಡೆಯಲಿದ್ದು ಈ ಬಾರಿ ಮತದಾರರ ಒಲವು ಯಾರ ಪರವಾಗಿ ಬರುತ್ತದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಇತ್ತೀಚೆಗೆ ನಡೆದ ಲೋಕ ಸಭಾ ಚುನಾವಣೆಯ ಫಲಿತಾಂಶ ಹಾಗೂ ರಾಜ್ಯ ಸಮ್ಮಿಶ್ರ ಸರ್ಕಾರ ಪಕ್ಷಾಂತರಿಗಳಿಂದಾಗಿ ಪತನವಾಗಿರುವ ಸಂಧರ್ಭದಲ್ಲಿ ಇದರ ಪರಿಣಾಮ ಜನತೆಯಲ್ಲಿ ಅಲ್ಪ ಮಟ್ಟಿಗಾದರೂ ಮನೋಸ್ಥಿತಿಗಳನ್ನು ಬದಲಾಯಿಸಬಲ್ಲುದು ಎಂಬುವುದನ್ನು ಅಲ್ಲಗೆಳೆಯುವಂತಿಲ್ಲ. 

ಈ ಬಾರಿ ಹಲವು ಟಿಕೇಟ್ ಆಕಾಂಕ್ಷಿಗಳು‌ ಕಾಂಗ್ರೆಸ್ ಪಾರ್ಟಿಯಲ್ಲಿ ಟಿಕೆಟ್ ವಂಚಿತರಾಗಿ ಪಕ್ಷೇತರರಾಗಿ ಸ್ಪರ್ಧಿಸಲು ಅಣಿಯಾಗಿರುವುದು ಕಾಂಗ್ರೆಸ್ ನ ಸ್ವಾಭಿಮಾನಕ್ಕೆ ಧಕ್ಕೆ ತಂದಿವೆ. ಆದರೆ ಪಕ್ಷದಲ್ಲಿ ತಮ್ಮ ಕಡಗಣನೆಯೇ ತಾವು ಕಾಂಗ್ರೆಸ್ ಬಿಟ್ಟು ಹೊರಬರಲು ಕಾರಣ ಎಂಬ ನಿಲುವುಗಳು ಕೇಳಿಬರುತ್ತಿವೆ. ಅಲ್ಪ ಸಂಖ್ಯಾತರ ವೋಟ್ ಬ್ಯಾಂಕ್ ಗಳಾಗಿ‌ ಮಾತ್ರವೇ ಕಾಂಗ್ರೆಸ್ ಬಳಕೆಯಾಗುತ್ತಿವೆ ಎಂಬ ಗುಮಾನಿಗಳ ಹಿಂದೆ ವಾಸ್ತವಾಂಶಗಳು ಅಡಗಿರುವುದನ್ನು ಸಂಪೂರ್ಣವಾಗಿ ಅಲ್ಲಗೆಲೆಯಲೂ ಸಾಧ್ಯವಿಲ್ಲ.

 ಕಾಂಗ್ರೆಸ್, ಬಿಜೆಪಿಯನ್ನು ಹೊರತು‌ಪಡಿಸಿ ಪ್ರಾದೇಶಿಕ‌ ಪಕ್ಷಗಳಿಗೆ ಜನರು ಇತ್ತೀಚೆಗೆ ಮುಖಮಾಡಿರುವುದು ಜನರಲ್ಲಿ‌ ಹೊಸ ಬದಲಾವಣೆಯ ನಿರೀಕ್ಷೆಗಳು ಎದುರಾಗಿವೆ. ಎಸ್.ಡಿ.ಪಿ.ಐ ಇತ್ತೀಚೆಗೆ ಹಲವು ಕಡೆಗಳಲ್ಲಿ‌ ಉತ್ತಮ ಪ್ರಾಬಲ್ಯವನ್ನು ಪಡೆಯುತ್ತಿರುವುದು ಈ ಬಾರಿಯೂ ಜನರು ಎಸ್.ಡಿ.ಪಿ.ಐ ಬೆಂಬಲಿಸುವ ಸಾಧ್ಯತೆಗಳು ಹೆಚ್ಚಿವೆ. ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತರ ಕಡೆಗಣನೆಯೇ ಜನರು ಎಸ್.ಡಿ.ಪಿ.ಐ ಗೆ ಒಲವು ತೋರಲು ಕಾರಣ ಎಂಬುವುದು ಜನರ ನಿಲುವು.

ಎಸ್.ಡಿ.ಪಿ.ಐ ಕಳೆದ ಬಾರಿ 5 ನೇ ವಾರ್ಡ್ ನಲ್ಲಿ ಜಯಗಳಿಸಿದ್ದು ಈ ಬಾರಿಯೂ‌ ಜನತೆ ಎಸ್.ಡಿ.ಪಿ.ಐ ಯನ್ನು ಅವಲಂಬಿಸುವ ಸಾಧ್ಯತೆಗಳು ಹೆಚ್ಚಿವೆ. ಜನಸೇವೆಗಾಗಿ ಮಾಹಿತಿ ಸೌಲತ್ತುಗಳ ಕೇಂದ್ರವನ್ನು ಸ್ಥಾಪಿಸಿ ಪರಿಸರದ ಜನರಿಗೆ ನೆರವಾಗಿರುವುದು ಹಾಗೂ ಕಾರ್ಯಕರ್ತರ ಶ್ರಮಾದಾನಗಳು ಎಸ್.ಡಿ.ಪಿ.ಐ ಗೆ ಉತ್ತಮ ಫಲಿತಾಂಶವನ್ನು ಪಡೆಯಲು ಸಹಕಾರಿಯಾಗಬಲ್ಲದು ಎಂಬ ನಿರೀಕ್ಷೆಗಳಿವೆ. ಕಳೆದ ಬಾರಿ ಅದೇ ಪಕ್ಷದಿಂದ ಆಯ್ಕೆಯಾದ ಅಭ್ಯರ್ಥಿಯ ಪತ್ನಿಗೆ ಟಿಕೆಟ್ ಸಿಗಲಿಲ್ಲ ಎಂದು ಪಕ್ಷೇತರರಾಗಿ ಸ್ಪರ್ಧಿಸುತ್ತಿರುವುದು, ಕುಟುಂಬ ರಾಜಕೀಯದ ಸ್ವಾರ್ಥ ಹಿತಾಸಕ್ತಿಗಾಗಿ ಪಕ್ಷವನ್ನು ತ್ಯಜಿಸಿರುವುದರಿಂದ ಅದು ಕಪ್ಪು ಚುಕ್ಕೆಯಾಗಿ ಪರಿಣಮಿಸಿದ್ದು ಮತದಾರರು ಕೈಬಿಡುವ ಸಾಧ್ಯತೆಗಳಿವೆ.  ಜನರು‌ ಬದಲಾವಣೆಯ ಸಮಾಜವನ್ನು ಬಯಸುತ್ತಿದ್ದಾರೆ ಎಂಬುವುದಕ್ಕೆ ಈ ಬಾರಿಯ ಫಲಿತಾಂಶ ನಿದರ್ಶನವಾಗಬಹುದು