ಜನನಿ

ಜನನಿ

ಕವನ

ನಮ್ಮ ತಾಯಿ ಭಾರತಿ

ಅವಳೆ ನಮ್ಮ ಕೀರುತಿ

ಜಗಕೆ ಇವಳೆ ಮೂರುತಿ

ನಮ್ಮ ತಾಯಿ ಭಾರತಿ.

 

ಭರತ ಭುವಿಯ ಅಂಬೆ

ಚಾಚಿಹುದು ರಂಬೆ ಕೊಂಬೆ

ಸತ್ಯ ಧರ್ಮ ಶಾಂತಿಯಲ್ಲಿ

ಸಾರುತಿಹಳು ನೀತಿಯಲ್ಲಿ.

 

ಧರ್ಮ ಭೂಮಿ ನಮ್ಮದು

ಕರ್ಮ ಭೂಮಿ ನಮ್ಮದು

ಭಾರತಾಂಭೆ ತಾಯಿ ಒಡಲು

ಸಮೃದ್ಧಿಯಲ್ಲಿ ಮಡಿಲು.

 

ಪುರಾಣ- ಇತಿಹಾಸವು

ಮಣ್ಣ,ಮಣ್ಣ ಕಣದಲು

ನೀತಿ, ನಿಯಮ ಕಲಿಸುತ

ಸಂಸ್ಕೃತಿ,ಸಂಸ್ಕಾರದಲ್ಲಿ.

 

ಜನನ ಕೊಟ್ಟ ಭಾರತಿ

ಪುಣ್ಯ ಭೂಮಿ ಸನ್ಮತಿ

ಉಸಿರುಸಿರಲು ಭಾರತ

ಮನದ ತುಂಬಾ ಗೀತಾ.

 

-ವೀಣಾ ಕೃಷ್ಣಮೂರ್ತಿ, ದಾವಣಗೆರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್