ಜನಾರ್ದನ ದುರ್ಗಾ ಅವರ ಹನಿಗಳು

Submitted by Shreerama Diwana on Mon, 08/10/2020 - 10:04
ಬರಹ

*ಹ(ಅ)ಲ್ವ* 

 

ಹಬ್ಬಕ್ಕೆ ಮಾಡಲೇ ಬೇಕೆಂದು

ಇವಳ ಹಠ...

ಅವಳಿಷ್ಟದ ಹಲ್ವ..!

ನಾನೇನು ಮಾಡ್ಲಿ...

ಕೈಯಲ್ಲಿ ಹಣವಿದ್ದರೆ ಅಲ್ವ..?!

*******

 

*ವಾಸ್ತವ!!* 

 

ಮೊಬೈಲ್ ಒಳಹೊಕ್ಕು

ನಿಂತರೆ ಸಾಕು

ಹೆಚ್ಚುತ್ತಾ ಹೋಗುವುದು

ಸ್ನೇಹಿತರ ಸಂಖ್ಯೆ..!

ಅದು ಬಿಟ್ಟು

ಹೊರ ಬಂದು 

ನೋಡಿದರೆ...

ಕೊರೋನಾ ಬಂದಿದೆಯೇನೋ

ಎಂಬ ಶಂಕೆ...!!!

*****

 

*ಜೋ(ಯೋ)ಗ..!* 

 

ವರ್ಷಂಪ್ರತಿ

ಹೋಗುತ್ತಿದ್ದರಂತೆ

ಅವರು...

ನೋಡಲೆಂದು ಜೋಗ...!

ಈ ಬಾರಿ ಮಾತ್ರ

ಮನೆಯ ಹಿತ್ತಿಲಲ್ಲೆ

ಸಿಕ್ಕಿದೆಯಂತೆ

ನೋಡುವ ಯೋಗ...!!

*******

 *ಮಳೆ..!!* 

 

ಬಿಟ್ಟು ಬಿಡದೆ

ಸುರಿಯುತ್ತಿದೆ

ಭೀಕರ ಮಳೆ...

ಕೊಚ್ಚಿಕೊಂಡು

ಹೋಗುತ್ತಿದೆ

ಒಳ ಹೊರಗಿನ ಕೊಳೆ...!

ಅಲ್ಲಲ್ಲಿ ಮಾಡಿಯೆ ಬಿಟ್ಟೆ

ಭೀಕರ ಕೊಲೆ..!!!

ಅರಿವಾಗುತ್ತಿಲ್ಲ 

ಎನಗೆ ಇದರ

ಹಿಂದಿನ ಹಿನ್ನೆಲೆ...?!!

 

✍️ *ಜನಾರ್ದನ ದುರ್ಗ*

 

ಚಿತ್ರ್