ಜನ ಜನ ಬದಲಾಗುತ್ತಿರುವ ಜನ
ಕವನ
ಅರಳು ಮರುಳು ಮಾತುಗಳು
ಕರುಳು ಹಿಂಡುವ ನೋವುಗಳು
ನಂಬಲಾಗದ ಈ ಜನಗಳು
ವಿಷದ ಬೀಜದ ಹಾವುಗಳು
ಕುಕ್ಕಿ ತಿನ್ನುವ ಭಕ್ಷಕರು
ಹರಕೊಂಡು ತಿನ್ನುವ ರಾಕ್ಷಸರು
ಕಷ್ಟ ಕೊಡುವ ವೈರಿಗಳು
ಸಮಾಧಿ ಕಟ್ಟುವ ಮಾಲಿಗಳು
ಕೆಂಡಕಾರುವ ಕೆಂಗಣ್ಣು ಗಳು
ಕೆಟ್ಟದು ಯೋಜಿತ ಯೋಚನೆಗಳು
ಹೊಲಸು ಬೊಗಳುವ ಬಾಯಿಗಳು
ಚುಚ್ಚಿ ನುಡಿವ ಕ್ರೂರ್ರ ಮಾತುಗಳು
ಒಳ್ಳೆಯದನ್ನು ನೆನಸರು ಇವರು
ಕೆಟ್ಟದು ಬಿಡಲಾರರು ಇವರು
ಆಕಳು ಮೊಖ ಇದ್ದರು
ಕತ್ತೆ ಹಾಗೆ ಒದೆಯುವರು
ಜನ ಜನ ಬದ್ಮಾಸ ಜನ
ಜನ ಜನ ಸುಮಾರ ಜನ
ಜನ ಜನ ಬದಲಾಗು ಜನ
ಜನ ಜನ ಬದಲಾಗುತ್ತಿರುವ ಜನ
-ಎಚ್.ವ್ಹಿ.ಈಟಿ, ಸಾ.ನರೇಗಲ್ಲ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್