ಜನ ಪರಿಸರ – ಸಂಘಾನುಚರ್ಯೆ, ವರ್ತನೆ

ಜನ ಪರಿಸರ – ಸಂಘಾನುಚರ್ಯೆ, ವರ್ತನೆ

 

 

 

ಈ ಲೇಖನದವು ಒಂದು ಅನುವಾದ ಅಷ್ಟೇ. ಮೂಲ ಇಂಗ್ಲೀಷ್ ಲೇಖನದ ಉದ್ದೇಶ ನಮ್ಮ ಜನ ಪರಿಸರದ ಶೋಧನೆಯೊಂದೇ ಆಗಿದೆ. ಏಕೆ ಮತ್ತು ಹೇಗೆ ನಾವು ಒಂದು ವಿಷಯಕ್ಕೆ ಸಂಬಂಧಪಟ್ಟು ವಿಧವಿಧವಾಗಿ ವರ್ತಿಸುತ್ತೇವೆ ಎಂಬ ಕುತೂಹಲವಿರುವವರಿಗೆ ಇದು ಉಪಯುಕ್ತವಾಗಬಹುದು. ಮತ್ತು ಓದುಗರು ಇದನ್ನು ತಮ್ಮ ಪರಿಸರಕ್ಕೆ ಹೋಲಿಸಿ ತಮ್ಮ ಅನಿಸಿಕೆಗಳನ್ನು ಪ್ರತಿಬಿಂಬಿಸಿಕೊಳ್ಳಬಹುದು.

 

ಪರಿವಿಡಿ :

ಒಂದು ಸಂಘ ಸಂಸ್ಠೆಗಳ ಒಳ ಪರಿಸರದಲ್ಲಿ ನಿತ್ಯ ಅನೇಕ ಕೆಲಸ ಕಾರ್ಯಗಳು ನಡೆಯುತ್ತಿರುತ್ತವೆ. ಅದರಲ್ಲಿ ನಮ್ಮ ವೈಯಕ್ತಿಕ ನಂಬಿಕೆಗಳು, ಒಳನೋಟ, ನಿಷ್ಟೆಗೆ ಅನುಸಾರವಾಗಿ ಈ ಕೆಳಗಿನ ೪ ರೀತಿಯ ವರ್ತನೆ, ಮನೋಸ್ಥಿತಿಗಳು ಸಾಧಾರಣವಾಗಿ ಅನುಭವಕ್ಕೆ ಬರುತ್ತದೆ :

 

೧. Covert & Unconcious  (ತಿಳಿಮೆಯುಳ್ಳ ಸೋಗುಗಾರ) : ಇಂತಹವರು ಪುರೋಗಾಮಿ ಮನೋಸ್ಥಿತಿಯವರಾಗಿದ್ದು ಸಂಘ ವಿರೋಧೀ ಮನಸ್ಸಿನವರು. ಆದರೆ ಇವರು ತಮ್ಮ ಈ ಒಳಉದ್ದೇಶಗಳನ್ನ ಪ್ರಕಟ ಪಡಿಸೋದಿಲ್ಲ. ಇದು ಏಕೆಂದರೆ ತಮ್ಮ ನಡತೆ ಹೇಗೆ ತಮ್ಮ ಸಂಘಸಂಸ್ಥೆಗಳ ದಿನಗೆಲಸಲ್ಲಿ ತೊಂದರೆ ಒಡ್ಡುತ್ತಿದೆ ಎನ್ನುವ ಅರಿವೂ ಇವರಿಗೆ ಇರೋದಿಲ್ಲ. ಇವರು ಒಂದು ಥರಾ ದಾರಿ ತಪ್ಪಿದ ಮಂದಿ (ಆದರೆ ಕೆಟ್ಟವರೆನ್ನುವುದಕ್ಕಾಗುವುದಿಲ್ಲ). ತಮ್ಮ ಚರ್ಯೆ ಸಂಘವಿರೋಧಿಯಾಗಿದ್ದು ಅದರ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದ್ದರೂ ಇದು ತಿಳಿಗೇಡಿತನ ಎಂದು ಗೊತ್ತಿಲ್ಲದೆ ಕಾರ್ಯಪ್ರವೃತ್ತರಾಗಿರುತ್ತಾರೆ.

 

ಇವರಿಗೆ ಅವರು ಮಾಡುತ್ತಿರುವುದರ ಪ್ರಜ್ಞ್ನೆ ಇರುವುದಿಲ್ಲವಾಗಿದ್ದು ಯಾವುದೋ ಹಿನ್ನೋಟದಿಂದ ಪ್ರೇರಿತರಾಗಿದ್ದು ನಿರುಪಾಯರಾಗಿ ಮುಸುಗಳ್ಳತನ ಮಾಡುತ್ತಿರುತ್ತಾರೆ. ಆದರೆ ಇವರು ಹಿತಶತ್ರುಗಳಾಗಿ ಕಾಣಿಸಿದರೂ ಮೆದುಸ್ವಭಾವಿಗಳಾಗಿದ್ದು ಸ್ವಲ್ಪ ಮಾತುಕತೆ, ಮನಒಲಿಕೆಯಿಂದ ನಿಜ ಮನಗಾಣುವರು, ಸಹಕಾರ ನೀಡುವವರಾಗಿದ್ದಾರೆ.

 

 

೨. Overt & Concious (ತಿಳಿಮೆಯಿಲ್ಲದ ಹೊರಬಗೆಗಾರ) : ಇಂತಹ ಜನರು ಮುಕ್ತವಾಗಿ ತಮ್ಮ ವಿರೋಧವನ್ನು ಪ್ರಕಟ ಪಡಿಸುತ್ತಾರೆ. ಹಾಗೂ ಸಂಘದ ನ್ಯೂನ್ಯತೆಗಳ ಬಗ್ಗೆ ಪ್ರಜ್ಞ್ನಾಪೂರ್ವಕವಾಗಿಯೇ ಖಂಡಿಸುತ್ತಾರೆ. ಹೀಗಿದ್ದೂ ದಿನಗೆಲಸಗಳನ್ನು ಚಾಚು ತಪ್ಪದೇ ಮಾಡುತ್ತಾ ಇರುತ್ತಾರೆ.

 

ಇಂತಹವರು ಯಾವುದೋ ಮುನ್ನೋಟದಿಂದ ಪ್ರೇರಿತರಾಗಿ ವರ್ತಿಸುತ್ತಿರುತ್ತಾರೆ. ಮತ್ತು ಮುಕ್ತಮಾತುಕತೆಯಲ್ಲಿ ತೊಡಗುತ್ತಾರೆ. ಅವರ ಮಾತುಗಳಲ್ಲಿ ನೇರ ಸಂದೇಶ, ಹೊಸ ದೃಷ್ಟಿಯೂ ಇರುತ್ತದೆ. ಇವರಿಂದ ಸಂಘದಲ್ಲಿ ಬದಲಾವಣೆ ತರುವುದನ್ನಾದರೂ ಊಹಿಸಬಹುದಾಗಿದೆ. ಏಕೆಂದರೆ ಇಂಥವರ ಮೂಲೋದ್ದೇಶ ವಿಷಯ ಸ್ಪಷ್ಟನೆ ಹಾಗೂ ಸುಧಾರಣೆಯೇ ಆಗಿರುತ್ತದೆ.

 

ಆದ್ದರಿಂದ ಅವರ ಬಹಿರಂಗ ವಿರೋಧದಿಂದ ಪರಿತಾಪಗೊಳ್ಳದೆ ಅವರ ಕರೆಯನ್ನು ಆಲಿಸಬಹುದು. ಮತ್ತು ಪರಸ್ಪರ ಭಿನ್ನಾಭಿಪ್ರಾಯಗಳನ್ನೂ ಪರಿಹರಿಸಿಕೊಳ್ಳಬಹುದು.

 

 

೩. Covert & Concious (ತಿಳಿಮೆಯುಳ್ಳ ಸೋಗುಗಾರ) : ಇವರುಗಳೂ ತಮ್ಮ ಒಳತೋಟಿಗಳನ್ನು ಹೇಳಿಕೊಳ್ಳುವುದಿಲ್ಲ. ಮೇಲಾಗಿ ಸಂಘ ವಿರುದ್ಧ ದಿಕ್ಕಿನಲ್ಲಿ ಮನಸಾರೆ ಕೆಲಸ ಮಾಡುತ್ತಿರುತ್ತಾರೆ. ಇದು  ಅಪಾಯಕಾರಿ. ಏಕೆಂದರೆ ಇವರಿಗೆ ತಾವಿರುವ ಸಂಘ ಸಮಾಜದ ಗುರುಹಿರಿಯರ ಮೇಲೆ ಎಳ್ಳಷ್ಟೂ ಕನಿಕರವಿಲ್ಲದಿದ್ದರೂ ಬಹಿರಂಗವಾಗಿ ಅದನ್ನ ತೊರಿಸಿಕೊಳ್ಳದೇ ಗುಪ್ತವಾಗಿ ಇನ್ನೊಂದನ್ನೇ ಬಗೆಯುತ್ತಿರುತ್ತಾರೆ. ಇವೆಲ್ಲವನ್ನೂ ಉದ್ದೇಶಪೂರ್ವಕವಾಗಿ / ಪ್ರಜ್ಞ್ನಾಪೂರ್ವಕವಾಗಿಯೇ ಮಾಡುತ್ತಿರುತ್ತಾರೆ.

 

ಇಂಥವರು ಮನೆಮುರುಕರು (Saboteurs). ಇಂತಹವರಿಂದ ಹೊರ ಬರದಿದ್ದರೆ ನಮ್ಮ ನಿರ್ನಾಮ ನಿಶ್ಚಿತ.

 

 

೪. Zombie (Overt & Unconcious) (ತಿಳಿಮೆಯಿಲ್ಲದ ಹೊರಬಗೆಗಾರ) : ಇವರುಗಳು ಸಂಘ ಸಮಾಜದ ಧ್ಯೇಯೋದ್ದೇಶ, ಶಿಷ್ಟಾಚಾರ ತಿಳಿದವರೇ ಆಗಿರುತ್ತಾರೆ. ನಿಯಮಾವಳಿಗಳ ಬಗ್ಗೆ ತಮಗೆ ಒಪ್ಪಿಗೆ ಇರುವಂತೆಯೇ ನಂಬಿಕೆ ಬರಿಸುತ್ತಾರೆ. ಆದರೆ ಇವರು ಒಳಬಗೆಗಾರರ ಕುಕರ್ಮವನ್ನು ವ್ಯಕ್ತವಾಗಿಯೇ ಬಗೆಯುತ್ತಾರೆ. ಒಂಥರಾ ತಿಳಿದಿದ್ದೂ ತಿಳಿಗೇಡಿಯಂತೆ ಬಹಿರಂಗವಾಗಿಯೇ ವಿರೋಧೀ ಚಟುವಟಿಕೆ ಮಾಡುವವರು. ಇದು ಆಗುವುದು ಅವರು ಪ್ರಜ್ಞ್ನೆಯಲ್ಲಿಲ್ಲದಿರುವುದರಿಂದ. ಇಂತಹ ಜನರನ್ನು ವಿಕಲಚೇತನರು / ಮನೋರೋಗಿಗಳು ಅನ್ನಬಹುದು.

 

ಯಾರ ಉಸಬಾರಿಯೂ ಬೇಡದಿದ್ದರೂ ತಮ್ಮ ಅಪ್ರಜ್ಞ್ನಾಪೂರ್ವಕ ಒಳತೋಟಿಯಿಂದ ದುಷ್ಟರಾಗಿ ವರ್ತಿಸುವ ಮೂಢರಿವರು. ಇಂತಹವರಿಗೆ ಸೂಕ್ತ ಸಲಹೆ, ಚಿಕಿತ್ಸೆ, ಇತ್ಯಾದಿಗಳನ್ನು ಕೊಟ್ಟು ಒಳಗೆ ತರಬಹುದು.

 

(ಈ ಲೇಖನವನ್ನು ಯಾವ ಸಮಾಜ / ಸಂಘ ಸಂಸ್ಥೆಗೆ ಹೋಲಿಸಿ ಬರೆದಿಲ್ಲ. ಆದ್ದರಿಂದ ಯಾವುದೇ ಹೋಲಿಕೆಗಳು ಕಂಡು ಬಂದರೂ ಅದು ಕಾಕತಾಳೀಯ. ಪ್ರತಿಕ್ರಿಯೆಗಳಿಗೆ ಸ್ವಾಗತ)

ಆಧಾರ : ಕೆಲವು ಎಂ. ಬಿ. ಎ ಹೊತ್ತಗೆಗಳು.

 

Comments

Submitted by Aravind M.S Sat, 07/11/2015 - 15:45

ಈ ಕೆಳಗಿನ ತಿದ್ದುಪಡಿ ಮಾಡಿಕೊಳ್ಳಬೇಕಾಗಿ ವಿನಂತಿ ದಯವಿಟ್ಟು :

೧. Covert & Unconcious (ತಿಳಿಮೆಯುಳ್ಳ ಸೋಗುಗಾರ -->ತಿಳಿಮೆಯಿಲ್ಲದ ಸೋಗುಗಾರ)

೨. Overt & Concious (ತಿಳಿಮೆಯಿಲ್ಲದ ಹೊರಬಗೆಗಾರ --> ತಿಳಿಮೆಯುಳ್ಳ ಹೊರಬಗೆಗಾರ)

ತಪ್ಪಿಗಾಗಿ ಕ್ಷಮೆಯಿರಲಿ, ಅನಂತ ಧನ್ಯವಾದಗಳು