ಜನ ಮರುಳೋ..ಜಾತ್ರೆ ಮರುಳೋ...
ಬರಹ
ಇತ್ತೀಚಿಗೆ ಸುಮಾರು ದಿನಗಳಿಂದ ನಾನು ಕೆಲವು ಖಾಸಗಿ ಚಾನೆಲ್ಗಳಲ್ಲಿ ಬರುವ ಜಾಹೀರಾತುಗಳನ್ನು ಗಮನಿಸಿದ್ದೇನೆ.
ಬಹುಷಃ ನೀವು ನೋಡಿರಬಹುದು..ಅದೇನು ಆಶ್ಚರ್ಯದ ಸಂಗತಿ ಎನ್ನುತ್ತೀರಾ...ಯಾವ ಚಾನೆಲ್ ಜಾಹೀರಾತು ಇಲ್ಲದೆ ಇರುವುದು
ಎನ್ನುತ್ತೀರಾ...ಹೌದು ಎಲ್ಲ ಚಾನೆಲ್ಗಳಲ್ಲೂ ಯಾವುದಾದರೂ ವಸ್ತುವಿನ ಬಗ್ಗೆ ಜಾಹೀರಾತು ಬಂದೆ ಬರುತ್ತದೆ..
ಆದರೆ ಇಲ್ಲಿ ಕೆಲವು ಖಾಸಗಿ ಸಿನಿಮಾ ಚಾನೆಲ್ ಗಳು ಇವೆ.ಇದರಲ್ಲಿ ಬ್ರೇಕ್ ಸಮಯದಲ್ಲಿ ಬರುವ ಜಾಹೀರಾತುಗಳು ಕೇವಲ
ಜ್ಯೋತಿಷ್ಯ / ಭವಿಷ್ಯಕ್ಕೆ ಸಂಬಂಧ ಪಟ್ಟದ್ದಾಗಿರುತ್ತದೆ. ಒಂದು ಸಲ ವಿರಾಮ ಬಂದರೆ ಸುಮಾರು ನಾಲ್ಕು ಐದು ಇಂಥಹ
ಜಾಹೀರಾತುಗಳು ಬರುತ್ತವೆ. ಕೆಲವು ಸಲ ಇದರ ಪ್ರಚಾರಕ್ಕಾಗಿ ಸಿನಿಮಾ ಹಾಗೂ ಕಿರುತೆರೆಯ ನಟ ನಟಿಯರು ಬರುವುದೂ ಉಂಟು..
ಅವರ ಪ್ರಚಾರ ಹೇಗಿರುತ್ತದೆ ಎಂಬುದಕ್ಕೆ ಒಂದು ಸಣ್ಣ ಉದಾಹರಣೆ...
ಮೊದಲು ಯಾವುದಾದರೂ ಒಂದು ದೇವರ ಚಿತ್ರ ತೋರಿಸುತ್ತಾರೆ..
ನಂತರ ಹಿನ್ನಲೆಯಲ್ಲಿ...ಓಂಕಾರ ಕೇಳಿ ಬರುತ್ತದೆ..
ಶ್ರೀ ಕಾಳಿಕಾಂಬ ಜ್ಯೋತಿಷ್ಯಾಲಯ..
ಭಾರತದ ಪ್ರಸಿದ್ಧ ಜ್ಯೋತಿಷಿಗಳಾದ ಪಂಡಿತ್ ಶ್ರೀ.XXXXX ಶಾಸ್ತ್ರಿ ಗಳು ಬಹುಜನದ ಒತ್ತಾಯದ ಮೇರೆಗೆ ಈಗ ಬೆಂಗಳೂರಿನಲ್ಲಿ
ಖಾಯಂ ಆಗಿ ನೆಲೆಸಿದ್ದಾರೆ.. ಇವರು ಕೇರಳ, ಬಂಗಾಳಿ,ಅಘೋರಿ ಮುಂತಾದ ಮಂತ್ರಸಿದ್ಧಿಗಳನ್ನು ವಶಪಡಿಸಿಕೊಂಡಿರುತ್ತಾರೆ.
ನಿಮ್ಮ ಯಾವುದೇ ಸಮಸ್ಯೆಯಿರಲಿ ವಿದ್ಯೆ, ಉದ್ಯೋಗ, ವ್ಯಾಪಾರದಲ್ಲಿ ಲಾಭ ನಷ್ಟ, ಸಂತಾನ , ಸತಿ ಪತಿ ಕಲಹ, ಸ್ತ್ರೀ ಪುರುಷ ವಶೀಕರಣ
ಕೋರ್ಟ್ ಕೇಸ್, ಸಾಲ ಭಾಧೆ, ವಿರಹ, ಲೈಂಗಿಕ , ಗೃಹ ಶಾಂತಿ, ಮಾಟ ಮಂತ್ರ, ಶತ್ರು ಪೀಡೆ, ದುಷ್ಟ ಶಕ್ತಿ ಇನ್ನೂ ಮುಂತಾದ
ಗುಪ್ತ ಸಮಸ್ಯೆಗಳಿಗೆ ಕೇವಲ ಮೂವತ್ತು ದಿನದಲ್ಲಿ ಪರಿಹಾರ ಸೂಚಿಸುವರು..ಇವರು ಕೇವಲ ನಿಮ್ಮ ಮುಖ ಹಸ್ತ ರೇಖೆ ನೋಡಿ ಭವಿಷ್ಯ ಹೇಳುವರು
ಇವರಲ್ಲಿ ಅನೇಕ ರಾಜಕೀಯ ವ್ಯಕ್ತಿಗಳು, ಸಿನಿಮಾ ನಟ ನಟಿಯರು ಕೇಳಿ ಪರಿಹಾರ ಕಂಡುಕೊಂಡಿರುತ್ತಾರೆ..ಇವರಲ್ಲಿ ವಿಶೇಷವಾಗಿ ಪೂಜೆ ಮಾಡಿದ
ಶ್ರೀ ಚಕ್ರ ಕೇವಲ ೬೦೦ ರೂಗಳಿಗೆ ಸಿಗುವುದು...ಇವರು ಕೇವಲ ಮೂರು ಪ್ರಶ್ನೆಗಳಿಗೆ ಮಾತ್ರ ಉತ್ತರಿಸುವರು / ಇವರು ಮೂರು ಪ್ರಶ್ನೆಗಳಿಗೆ ಉಚಿತವಾಗಿ
ಹೇಳುವರು...ಇವರ ದೂರವಾಣಿ ಸಂಖ್ಯೆ.೦೦೦೦೦-೦೦೦೦೦, ದೂರವಾಣಿಯ ಮೂಲಕ ನಿಮ್ಮ ಭೇಟಿಯನ್ನು ಖಚಿತ ಪಡಿಸಿಕೊಳ್ಳಿ
ಇವರನ್ನು ಸಂಪರ್ಕಿಸಬೇಕಾದ ವಿಳಾಸ..........
ಹೀಗೆ ಇವರ ಪ್ರವರ ಮುಂದುವರಿಯುವುದು...ಇದೆ ರೀತಿ ಒಂದಾದ ಮೇಲೊಂದರಂತೆ ನಾಲ್ಕು ಐದು ಒಟ್ಟಿಗೆ ಪ್ರಸಾರವಾಗುತ್ತದೆ...
ಇದನ್ನು ನೋಡಿದ ಮೇಲೆ ಒಂದು ವಿಚಾರ ನನ್ನನ್ನು ಕಾಡುತ್ತಿದೆ...ಎಲ್ಲ ಸಮಸ್ಯೆಗಳಿಗೂ ಯಾವರೆ ಪರಿಹಾರ ಸೂಚಿಸುವಂತಿದ್ದರೆ
ಪ್ರಪಂಚದಲ್ಲಿ ಸಮಸ್ಯೆಗಳೇ ಇರುತ್ತಿರಲಿಲ್ಲ...ಇವರಿಗೆ ಕಷ್ಟ ಪಟ್ಟು ದುಡಿಯಲು ಏನು ಭಾಧೆ...ಇವರ ಭವಿಷ್ಯ ಇವರಿಗೆ ಗೊತ್ತಿದ್ದರೆ
ಬೇರೆಯವರ ಭವಿಷ್ಯ ಯಾಕೆ ಹೇಳಲು ಬರುತ್ತಾರೆ...
ಇಂತಹವರ ಮೋಡಿಗೆ ಒಳಗಾಗಿ ಅದೆಷ್ಟು ಜನ ತಮ್ಮ ಹಣ ಕಳೆದುಕೊಂಡಿರುತ್ತಾರೋ..ಒಟ್ಟಿನಲ್ಲಿ ಜನ ಮರುಳೋ ಜಾತ್ರೆ ಮರುಳೋ