ಜಪಾನಿನ ಈ ಪ್ರಸಿದ್ಧ ಚಿತ್ರದ ಬಗ್ಗೆ ಗೊತ್ತಿದೆಯೇ ?

ಜಪಾನಿನ ಈ ಪ್ರಸಿದ್ಧ ಚಿತ್ರದ ಬಗ್ಗೆ ಗೊತ್ತಿದೆಯೇ ?

1945ರಲ್ಲಿ ನಡೆದ ಎರಡನೇ ವಿಶ್ವ ಮಹಾಯುದ್ಧದ ಸಂದರ್ಭದ ಚಿತ್ರವಿದು. ಜಪಾನಿ ಬಾಲಕನೊಬ್ಬ ತನ್ನ ತಮ್ಮನ ಶವವನ್ನು ಬೆನ್ನ ಮೇಲೆ ಹೊತ್ತುಕೊಂಡು ನಿಂತಿರುವ ಚಿತ್ರ. ಇದು ಸುಮ್ಮನೆ ನಿಂತ ಚಿತ್ರವಾಗಿದ್ದರೆ ಅಷ್ಟೊಂದು ಪ್ರಸಿದ್ಧಿ ಪಡೆಯುತ್ತಿತ್ತೋ ಇಲ್ಲವೋ ಗೊತ್ತಿಲ್ಲ. 

ಶವಗಳನ್ನು ಸುಡುವ ಚಿತಾಗಾರದ ಬಳಿ ತನ್ನ ತಮ್ಮನ ಶವದ ಸರದಿಗಾಗಿ ಈ ಬಾಲಕ ಸಾಲಿನಲ್ಲಿ ನಿಂತ ಚಿತ್ರವಿದು. ಈ ಕುರಿತು ಈ ಚಿತ್ರವನ್ನು ಕ್ಲಿಕ್ಕಿಸಿದ ಛಾಯಾಗ್ರಾಹಕನನ್ನು ಸಂದರ್ಶಿಸಿ ಕೇಳಿದಾಗ ಆತ ಹೇಳಿದ್ದು " ಆ ಸಂದರ್ಭದಲ್ಲಿ ಬಾಲಕ ತನ್ನ ಅಳುವನ್ನು ತಡೆಹಿಡಿಯಲು ತನ್ನ ತುಟಿಗಳನ್ನು ಕಚ್ಚಿಕೊಂಡಿದ್ದ, ಅದರಿಂದಾಗಿ ಅವನ ತುಟಿಯಿಂದ ರಕ್ತ ಜಿನುಗುತ್ತಿತ್ತು " ಎಂದಿದ್ದಾನೆ. 

ಇದೇ ಸಂದರ್ಭದಲ್ಲಿ ಅಲ್ಲಿಯ ಕಾವಲುಗಾರ ಬಾಲಕನ್ನು ಕೇಳಿದನಂತೆ " ನಿನ್ನ ಬೆನ್ನ ಮೇಲಿನ ಭಾರವನ್ನು ನನಗೆ ಕೊಡು " ಎಂದು. ಬಾಲಕನ ಉತ್ತರ " ಅವನು ಭಾರವಿಲ್ಲ, ಅವನು ನನ್ನ ತಮ್ಮ " ಎಂದು ಹೇಳಿದನಂತೆ.

ನಂತರ ತನ್ನ ಸರದಿ ಬಂದಾಗ ತಮ್ಮನ ಶವವನ್ನು ಕೊಟ್ಟು ಮರಳಿದನಂತೆ. ಇಂದಿಗೂ ಜಪಾನ್ ನಲ್ಲಿ ಈ ಚಿತ್ರ ಸ್ಥೈರ್ಯದ ಸಂಕೇತವಾಗಿ ಬಳಸಲಾಗುತ್ತಿದೆ. ಎಷ್ಟೊಂದು ನೋವಿನ ಆದರೆ ಸ್ಫೂರ್ತಿಯ ಚಿತ್ರ.

ಅಂದ ಹಾಗೆ ಈ ಚಿತ್ರವನ್ನು ಕ್ಲಿಕ್ಕಿಸಿದವನು ಅಮೆರಿಕನ್ ಛಾಯಾಗ್ರಾಹಕ " ಜೋ ಓ ಡೋನೆಲ್ ".

-ಸಿದ್ಧರಾಮ ಕೂಡ್ಲಿಗಿ

Comments

Submitted by addoor Sat, 01/01/2022 - 11:28

ಈ ಚಿತ್ರವನ್ನು ಇನ್ನೊಮ್ಮೆ, ಮತ್ತೊಮ್ಮೆ, ಮಗುದೊಮ್ಮೆ ದಿಟ್ಟಿಸಿ ನೋಡಿ. ತಕ್ಷಣವೇ ಕಣ್ಣು ಮುಚ್ಚಿಕೊಂದು ಈ ಚಿತ್ರವನ್ನು ನಿಮ್ಮ ಒಳಗಣ್ಣುಗಳಿಂದ ನೋಡಿ. ಆಗ ನಿಮ್ಮೊಳಗೆ ನುಗ್ಗಿ ಬರುವ ಭಾವನೆಗಳನ್ನು ಗುರುತಿಸಿ.
ಈ ಭೂಮಿಯ 791 ಕೋಟಿ ಹುಲು ಮಾನವರಲ್ಲಿ ಪ್ರತಿಯೊಬ್ಬನ ಈಗಿನ ಅವಸ್ಥೆಯನ್ನು ಈ ಚಿತ್ರ ಸಮರ್ಥವಾಗಿ ಕಟ್ಟಿ ಕೊಡುತ್ತಿದೆ, ಅಲ್ಲವೇ?
ಈ ಚಿತ್ರದ ನೋಟವನ್ನು ಅನುಭವಿಸಿದ ಪ್ರತಿಯೊಬ್ಬರೂ 2022ರಲ್ಲಿ ಹೇಗೆ ಬದುಕಬೇಕೆಂದು ಲೋಕಹಿತದ ದೃಷ್ಟಿಯಿಂದ ನಿರ್ಧರಿಸಿದರೆ, ಇದನ್ನು ನೋಡಿದ್ದು ಸಾರ್ಥಕ, ಅಲ್ಲವೇ?