ಜಯಂತ ಕಾಯ್ಕಿಣಿ ಅಂದ್ರೆ ಸುಮ್ನೆನಾ ? :)
ಜಯಂತ್ ಕಾಯ್ಕಿಣಿ ಹೆಸರು ಈಗ ಎಲ್ಲರ ಬಾಯಲ್ಲೂ ನಲಿತಾ ಇದೆ. ತಮ್ಮ ಸರಳ ಆದ್ರೆ ಸಕತ್ ಸಾಹಿತ್ಯದಿಂದ ಕನ್ನಡ ಚಿತ್ರ ಗೀತೆಗಳು ಮತ್ತೆ ಜನರ ಬಾಯಲ್ಲಿ ನಲಿಯೋ ಹಾಗೆ ಮಾಡಿದ್ದು ಕಮ್ಮಿ ಸಾಧನೆ ಅಲ್ಲ. ಅವರ ಕಥೆ, ಅವರ ಲೇಖನಗಳನ್ನ ಓದ್ತಾ ಇದ್ದ ನನಗೆ ಅವರ ಮುಂಗಾರು ಮಳೆ ಸಾಹಿತ್ಯ ಕೊಟ್ಟ ಖುಷಿ ಅಷ್ಟಿಷ್ಟಲ್ಲ. ಹಾಗೆ ಮೊನ್ನೆ ಕನ್ನಡ ಆಡಿಯೋ ಲಿ ಮೆರವಣಿಗೆ ಅನ್ನೋ ಚಿತ್ರದ ಹಾಡು ಕೇಳ್ತಾ ಇದ್ದೆ.. ನನ್ನೋಲವೇ ಅನ್ನೋ ಒಂದು ಹಾಡಿನ ಪದಗಳು,, ಆಹಾ ! ಅನ್ನೋವಷ್ಟು ಫ್ರೆಶ್ ಆಗಿದೆ..
ನನ್ನೋಲವೇ ನನ್ನೋಲವೇ ,,
ಹೀಗೊಂದು ಹೃದಯ ನನ್ನಲ್ಲೂ ಇದೆಯಾ ಅನ್ನುವ ಶಂಕೆಯು ಮೂಡುತಿದೆ,, ಅಂದದ ಅಂಜಿಕೆ ಕಾಡುತಿದೆ..
ಕನ್ನಡಿ ಕೊಳದಿ, ನಿನ್ನದೇ ಬಿಂಬ ,, ಚಂದದಿ ನಗುತಿದೆ
ಮುಟ್ಟಲು ಹೋದರೆ , ನಾಚಿಕೆಯಲ್ಲಿ ಅಲೆಯಲಿ ಸರಿಯುತಿದೆ
ಮೆಲ್ಲಗೆ ಇಗ ,, ಬೆಲ್ಲದ ಹಾಗೆ ,,, ಕಲ್ಲೆದೆ ಕರಗುತಿದೆ
ಮುಳ್ಳಿನ ಮನದ ಮಂಟಪದಲ್ಲೂ ಮಲ್ಲಿಗೆ ಅರಳುತಿದೆ
ನನ್ನೋಲವೇ ನನ್ನೋಲವೇ ,,
ಹೀಗೊಂದು ಹೃದಯ ನನ್ನಲ್ಲೂ ಇದೆಯಾ ಅನ್ನುವ ಶಂಕೆಯು ಮೂಡುತಿದೆ,, ಅಂದದ ಅಂಜಿಕೆ ಕಾಡುತಿದೆ..
ಸುಂದರವಾದ ಸುಂಟರಗಾಳಿ ಮನದಿ ಬೀಸುತಿದೆ
ನಿನ್ನದೇ ರೂಪ,, ನಿನ್ನದೇ ಧ್ಯಾನ ,, ನೆನಪಿನ ನಾಡೊಳಗೆ
ಪದಗಳೇ ಇರದ ಕಾಗದವನ್ನು ಮನದಲ್ಲೇ ಬರೆಯುವೆನು
ಕದಗಳೇ ಇರದ ಕನಸಿನ ಊರಿಗೆ ನಿನ್ನನ್ನು ಕರೆಯುವೆನು..
ನನ್ನೋಲವೇ ನನ್ನೋಲವೇ ,,
ಹೀಗೊಂದು ಹೃದಯ ನನ್ನಲ್ಲೂ ಇದೆಯಾ ಅನ್ನುವ ಶಂಕೆಯು ಮೂಡುತಿದೆ,, ಅಂದದ ಅಂಜಿಕೆ ಕಾಡುತಿದೆ..
ನೋಡಿದ್ರೆ ಏನು ಇಲ್ಲ ಅನ್ಸುತ್ತೆ,, ಆದ್ರೆ ಪದಗಳ ಜೊತೆ ಆಟ ಆಡೋದು ಜಯಂತಣ್ಣ USP. ಏನ್ ಅಂತೀರಾ??