ಜಯ ಸಾಯಿರಾಮ! ಸಜ್ಜನರ ಸಂಗ ಸತ್ಸ್ಗಂಗ
ಅನ್ಯ ದೇಶದಲ್ಲಿ ಭಗವಂತನ ಪ್ರೇಷಕರು ಪ್ರವೇಶಿಸುತ್ತಾರೆ. ನಾವೆಲ್ಲರೂ ಬಹಳ ಭಾಗ್ಯವಂತರು, ಏಕೆಂದರೆ ಭಾರತ ದೇಶವು ಪುಣ್ಯ ಭೂಮಿಯಾಗಿದೆ. ಇಲ್ಲಿ ಪ್ರತ್ಯಕ್ಷ ಭಗವಂತನೇಅವತಾರವನ್ನು ತಾಳಿ ಧರೆಗೆ ಇಳಿದು ಬರುತ್ತಾನೆ. ಸಾಕ್ಷಾತ ಭಗವಂತನೇ ಅವತರಿಸುತ್ತಾನೆ. ಅವತಾರವೆಂದರೆ ಮೇಲಿನಿಂದ ಕೆಳಗೆ ಇಳಿಯುವುದು. ಜ್ಞಾನಿಗಳು ವಿವರಿಸುತ್ತಾರೆ, ಅವತಾರ ತಾಳುವುದೆಂದರೆ ಭಗವಂತನಿಗೆ ಅಷ್ಟೊಂದು ಹಿತಕರವಲ್ಲ. ಭಕ್ತೊದ್ಧಾರಕನೆಂಬ ಬಿರುದನ್ನು ಪಡೆದಿದ್ದಾನೆ. ಅದಕ್ಕೋಸ್ಕರ ಕೌರವಾದಿ ರಾವಣಾದಿ ಅಸುರರನ್ನು ವಧಿಸಲೆಂದು ಜನಿಸಬೇಕಾಗುತ್ತದೆ. ಭಗವಂತನ ಅವತಾರದ ಉದ್ದಿಷ್ಟವೆನಾಗಿದೆ ಎಂದರೆ ಮುಮುಕ್ಷುಗಳಾದ ಮಾನವರಿಗೆ ಮೇಲಕ್ಕೆ ಹೋಗುವ ಮಾರ್ಗವನ್ನು ಮಾಡಿಕೊಡುವುದು. ಅದು ಪ್ರಸ್ಥಾನದ ಮಾರ್ಗವಾಗಿದೆ. 'ಪ್ರಸ್ಥಿಯತೆ ಇತಿ ಪ್ರಸ್ಥಾನ' ಪ್ರಸ್ಥಾನವೆಂದರೆ ಪ್ರಕೃತಿಯಿಂದ ಸಂಸ್ಕೃತಿಯ ಕಡೆಗೆ ಪ್ರವೃತ್ತಿಯಿಂದ ನಿವೃತ್ತಿಯ ಕಡೆಗೆ ತೆರಳುವ ಸ್ವಸ್ಥಾನವಾಗಿದೆ.
ಪ್ರಸ್ಥಾನಕ್ಕೆ ತೆರಳುವ ರಾಜಮಾರ್ಗವನ್ನು ಸಾಯಿಬಬಾರವರು ತಮ್ಮ ದಿವ್ಯೊಪನ್ಯಾಸಗಳ ಮೂಲಕ ಸಾಯಿ ಸದ್ಭಕ್ತ ಬಂಧವರಿಗೋಸ್ಕರವೆ ಹಾಕಿಕೊಟ್ಟಿದ್ದಾರೆ. ಪ್ರಸ್ಥಾನದ ಮಾರ್ಗವು ಕೇವಲ ಒಂದೇ ಒಂದು ಜಾತಿ, ಪಂಥ, ಧರ್ಮ ಅಥವಾ ಭಾಷೆಗೆ ಸಂಬಂಧ ಪಟ್ಟಿರುವ ವಿಷಯವಲ್ಲ.ಭಗವಂತನ ಅವತಾರ ಕಾರ್ಯವು ಸರ್ವಧರ್ಮ ಸಮಭಾವನೆಯಿಂದ ಕೂಡಿದ ಸನಾತನ ಮತ್ತು ಪುರಾತನ ಧರ್ಮವಾಗಿದೆ. "ಹರಿಕಥೆ ಪುರಾಣ ಶ್ರವಣ ಭಕ್ತಿಯನ್ನು ಮಾಡಬೇಕು... ಅನೇಕ ಅಧ್ಯಾತ್ಮಿಕ ಗ್ರಂಥಗಳ ವಿವರಣೆಯನ್ನು ಪರಿಶೀಲಿಸಬೇಕು... ಭಗವಂತನ ಭಕ್ತರ ಅನುಭೂತಿಯನ್ನು ಅಲಿಸಬೇಕು. ಭಗವಂತನ ಪ್ರೇಷಕರ ಪ್ರವಚನೆಗಳನ್ನು ಕೇಳಬೇಕು. ಇದೇ ಅಂತರಂಗ ಶುದ್ಧಿಯ ಮಾರ್ಗ... ಇದೇ ಬಹಿರಂಗ ಶುದ್ಧಿಯ ರಾಜಮಾರ್ಗವಾಗಿದೆ.
ಬಹುಶಃ ಎಲ್ಲರಿಗೆ ಗೊತ್ತಿರುವ ವಿಷಯವಾಗಿದೆ ಭಾಗವತದಲ್ಲಿ ನವವಿಧ ಭಕ್ತಿಯನ್ನು ವಿವರಿಸಲಾಗಿದೆ. "ಶ್ರವಣಂಕೀರ್ತನಂವಿಷ್ಣುಸ್ಮರಣಂ ಪಾದಸೇವನಂವಂದನಂಅರ್ಚನಂ ದಾಸ್ಯಮ್ ಸಖ್ಯಂಆತ್ಮನಿವೇದನಂ". ನಿಃಸಂಶಯವಾಗಿ "ಶ್ರವಣವೇ ಮೊದಲಿದು ನವವಿಧ ಭಕುತಿಯು" ಪುರಂದರದಾಸರ ಜನಪ್ರಿಯ ಪದರಚನೆಯಾಗಿದೆ. ದೇವರ ನಾವು ಸಂಕೀರ್ತನೆಯನ್ನು ಜ್ಞಾನಿಗಳ ಪ್ರೇಷಿತರ ಪ್ರವಚನಗಳಲ್ಲಿ ಕೇಳಬೇಕು. ಕೇವಲ ಕೇಳುವುದರಿಂದ ಬಹಳಷ್ಟು ಬದಲಾವಣೆಯಾಗುತ್ತದೆ. ಅದಾವ ವಿಷಯವು ಓದಿ ಅರ್ಥವಾಗುದಿಲ್ಲವೋ ಅದನ್ನು ಕೇಳಿದಮೇಲೆ ನಿಶ್ಚಿತವಾಗಿ ಪರಿವರ್ತನೆಯಾಗುತ್ತದೆ. ನವವಿಧ ಭಜನೆಯು ಶ್ರವಣ ಭಕ್ತಿಯ ಸಾಧನೆಯಾಗಿದೆ. ಭಜನೆಯನ್ನು ಹೇಗೆ ಮಾಡಬೇಕೆಂದರೆ ನಾವು ಮಾಡುವ ಭಜನೆ ನಮ್ಮ ಕಿವಿಗೆ ಕೇಳಿಸಬೇಕು. ಪರಾ ಪಶ್ಯಂತಿ ಮಧ್ಯಮಾ ವೈಖರಿ, ಚತ್ವಾರ ವಾಣಿಯಾಗಿವೆ. ಭಜನೆಯನ್ನು ವೈಖರಿ ವಾಣಿಯಲ್ಲಿ ಹೇಳಬೇಕು. ಈ ತರಹದ ಶ್ರವಣಭಕ್ತಿ ಸಾಧಕನನ್ನು ಆತ್ಮನಿವೇದನೆಯವರೆಗೆ ತಲುಪಿಸುತ್ತದೆ. ಆತ್ಮನಿವೇದನೆಯ ಸ್ವರೂಪದಲ್ಲಿ ಅಹಂಬ್ರಹ್ಮಾಸ್ಮಿ, ತತ್ವಮಸಿ, ಅಯಮಾತ್ಮಾ ಬ್ರಹ್ಮ, ಪ್ರಜ್ಞಾನಮ್ ಬ್ರಹ್ಮ ಅನುಭೂತಿಯಾಗುತ್ತದೆ. ದೇವರನ್ನು ಕಾಣಲು ಹೋದೆ, ದೇವನು ನಾನಾಗಿ ಉಳಿದೆ. ಎನ್ನುವ ಸ್ಥಿತಿಯದು.ಮಹಾರಾಷ್ಟ್ರದಲ್ಲಿ ಸಂತ ತುಕಾರಾಮರ ಪದವಾಗಿದೆ 'ದೇವ ಪಹಾಯಾ ಗೆಲೊ ದೇವಾಚೀಚ ಜಾಹಲೋ' ಅದೆಲ್ಲ ನೂರಾರುಸಹಸ್ರ ಜನ್ಮಗಳ ತಪಸ್ಸಿನ ಫಲವಾಗಿರುತ್ತದೆ. ನಾವೆಲ್ಲ ಸರ್ವ ಸಾಮಾನ್ಯರಾದ ಜನರು ಅದೆಲ್ಲ ಅಸಾಧ್ಯವಾದ ವಿಷಯವಾಗಿದೆ. ಅಲ್ಪಸ್ವಲ್ಪಮಟ್ಟಿಗೆ ಉತ್ತಮ ವಾಚಕರಾಗಲು ಉತ್ತಮ ಶ್ರಾವಕರಾಗಲು ಕಷ್ಟವಾದರೂ ಸರಿ ಪ್ರಯತ್ನಿಸಬಹುದು. ಸಾಯಿಬಬಾರವರ ದಿವ್ಯೊ ಪನ್ಯಾಸ ಗಳು . ಸಂಚಿತ ಸಂಸ್ಕಾರದ ಫಲದಿಂದ ಸಂಗ್ರಹದಲ್ಲಿರುವ ಹೊತ್ತಿಗೆಗಳನ್ನು ಸ್ವಾಧ್ಯಾಯ ಮಾಡುವ ಸುಂದರ ಸುಲಭ ಸುಯೋಗದ ಸಾಧನೆಯಿದು ಈ ಜನ್ಮದಲ್ಲಿ ನನಗೆ ದೊರೆಕಿದೆ. ಅದು ನನಗೋಸ್ಕರ ಮಹದ್ಭಾಗ್ಯವಾಗಿದೆ. 'ಆಡದಲೇ ಮಾಡುವವನು ರೂಢಿಯೊಳಗುತ್ತಮನು' ಎಂದು ಕನ್ನಡ ಸುಭಾಷಿತರು ಹೇಳುತ್ತಾರೆ. ಚಿತ್ತವು ನಿರ್ಮಲವಾದಾಗ ಭಗವಂತನ ಆತ್ಮಸಾಕ್ಷಾತ್ಕಾರವಾಗುತ್ತದೆ. ಸಮಾಜದ ಉನ್ನತಿ ರಾಷ್ಟ್ರದಉನ್ನತಿಯ ವಿಚಾರಗಳು ಪರಿಶುದ್ಧ ಹೃದಯವಾಗಿರುವ ಸಂತ_ಮಹಾಂತರನ್ನು ಸುಮ್ಮನಿರಲು ಬಿಡುವುದಿಲ್ಲ. ಅವರ ದಿನಾಚರ್ಯೆಯನ್ನು ನಿರೀಕ್ಷಿಸಿದಾಗ ಅವರಲ್ಲಾಗುತ್ತಿರುವ ಕಳಕಳಿಯ ಅರಿವಾಗುತ್ತದೆ. ಅದೇ ಸಮಜೋನ್ನತಿಯ ಕಾರ್ಯ ಮತ್ತು ರಾಷ್ಟ್ರೋನ್ನತಿಯ ಕಾರ್ಯ. ಸತ್ಯ ಧರ್ಮ ಶಾಂತಿ ಪ್ರೇಮಗಳೆನ್ನುವ ನಾಲ್ಕು ಆಧಾರಸ್ತಂಭಗಳನ್ನು ಜಗತ್ತಿಗೆ ತೋರಿಸಿಕೊಟ್ಟ ಸಾಯಿಬಬಾರವರು ದೀಪಸ್ಥಂಭವಾಗಿದ್ದಾರೆ. . ಸ್ವಜನ್ಮದಾದ್ಯಂತ ಸಾಯಿ ಸಚ್ಚಾರಿತ್ರೆಯನ್ನು ಶ್ರವಣ ಮಾದುವ ಭಾಗ್ಯವನ್ನು ನೀಡಿ ರಾಮಕಥಾ ರಸವಾಹಿನಿಯ ಮಧುರ ರಸವನ್ನು ಸೇವಿಸಲು ಪ್ರೇರೇಪಿಸಿದ ಮಹಾ ಮಹಿಮರ ಕೃಪೆಯಿಂದ ದೊರೆತ ಸಂಸ್ಕೃತಿಯ ಸ್ವರೂಪ ಕಲ್ಪಾಂತದ ವರೆಗೆ ಜಾಗೃತವಾಗಿರುವ ಸಂಚಿತವಾಗಿದೆ. ರಾಮಕಥಾ ರಸವಾಹಿನಿ, ಗೀತವಾಹಿನಿ ಹಾಗೆಯೇ ಭಾಗವತಾವಾಹಿನಿ ವೇದ ಮತ್ತು ಉಪನಿಷತ್ತುಗಳಿಗೆ ಸಮನಾದ ಗ್ರಂಥಭಂಡಾರ ಸಂಗ್ರಹದಲ್ಲಿದೆ. ಸಾಯಿಬಾಬಾರವರ ಗ್ರಂಥ ಭಂಡಾರವಾಗಿದೆ. ಅವೆಲ್ಲವನ್ನೂ ಓದಿ ಅರ್ಥಮಾಡಿಕೊಂಡರೆ ಶ್ರವಣಭಕ್ತಿಯ ಪುಣ್ಯ ಪ್ರಾಪ್ತಿಯಾಗುತ್ತದೆ.ಸಾಯಿ ಸತ್ಪಾದವನ್ನು ಸೇವಿಸುವ ರಾಜಮಾರ್ಗವಾಗಿದೆ. ನಗರ ಸಂಕೀರ್ತನೆಯಿಂದ ದಿವ್ಯಾನುಭವವಾಗುತ್ತದೆ. ಅಹಂಕಾರ ಕಳಚಿ ಹೋಗುತ್ತದೆ. ಪ್ರಕೃತಿಯು ಸಧೃಢವಾಗುತ್ತದೆ. ಆಯುಷ್ಯ ನಿರೋಗಿಯಾಗುತ್ತದೆ. . 'ಎಲ್ಲವನ್ನು ಬಲ್ಲವನು ನಾನಲ್ಲ' ಆದರೂ ಸಹ ಬಾಬಾರವರು ಸ್ವಯಂ ಉಪದೇಶಿಸಿದ ಉಪನ್ಯಾಸಗಳು ಅವರದೇ ಆದ ಸ್ವ ಸ್ವರೂಪದಲ್ಲಿ ಹೃದಯಸ್ಥ ಅಮರವಾಗಿದ್ದಾರೆ. ಸಾಶ್ರು ನಯನದಿಂದ ಪುನಃ ಪುನಃ ಸ್ಮರಿಸಬೇಕೆಂದೆನಿಸುತ್ತದೆ. ೨೩ ನವೆಂಬರ ಬಾಬಾರವರ ಜನ್ಮ ದಿನಾಂಕದ ಸಂಸ್ಮರಣೆ ಅವರಿಗೋಸ್ಕರವೆ ಸಲ್ಲಿಸಿದ ಪುಷ್ಪಾಂಜಲಿ ಚಿರಸ್ಮರಣೆಯಾಗಿದೆ. ಸತ್ಯ ಯುಗದಲ್ಲಿ ಜನಸಂಖ್ಯೆ ಪ್ರಮಾಣ ಅತಿ ಕಡಿಮೆಯಾಗಿತ್ತು. ತ್ರೇತಾ ಯುಗದಲ್ಲಿ ಜನಸಂಖ್ಯೆಯು ಪ್ರಮಾಣದಲ್ಲಿ ಸ್ವಲ್ಪವೃಧ್ಧಿಯಾಯಿತು . ದ್ವಾಪರಯುಗದಲ್ಲಿ ತುಲನೆಯಿಂದ ಅತಿ ಹೆಚ್ಚಾಯಿತು. ಈಗ ನಾವೆಲ್ಲ ಅನುಭವಿಸುತ್ತಿರುವ ಯುಗ ಕಲಿಯುಗ ಅತುಲ್ಯ ಪ್ರಮಾಣದಲ್ಲಿ ಬೆಳೆಯುತ್ತಲೆ ಇದೆ. ಕಲ್ಪಾಂತ ಪಶ್ಚಾತ ಮನ್ವಂತರ ನಿಶ್ಚಿತ ನೂತನವಾಗುತ್ತದೆ. ಪುನಃ ಸತ್ಯಾಯುಗದ ಆರಂಭವಾಗುತ್ತದೆ. ಸದಾ ಭಗವಂತನ ಸೇವೆಯಲ್ಲಿ ನಿರತರಾದವರಿಗೆ 'ನೂಪೇಕ್ಷಿ ಕದಾ ರಾಮದಾಸಾಭಿಮಾನಿ' ಎಂದು ಸಮರ್ಥ ರಾಮದಾಸರು ಮನೋಬೋಧನೆ ಎಂಬ ಪದಗಳಲ್ಲಿ ಬೋಧಿಸಿದ್ದಾರೆ. ಭಕ್ತರನ್ನು ಮೃತ್ಯುವಿನ ಮುಖದಲ್ಲಿ ತಳ್ಳುವುದಿಲ್ಲ. ಪುನಃ ಪುನಃ 'ದುಸ್ತರ ಭವಸಾಗರ ತರಣಮ' ಪರಮಹಂಸರು ಸಿಧ್ಧಾರೂಢರು ಪ್ರಕಟಿಸುತ್ತಲೆ ಇರುತ್ತಾರೆ. 'ಪುನರಪಿ ಜನನ ಪುನರಪಿ ಮಾರಣ' ಮೃತ್ಯುವಿನ ರೂಪವಾಗಿದೆ. 'ಸೋಮಶೇಖರ ತನ್ನ ಭಾಮೆಗೆ ಹೇಳಿದ ಮಂತ್ರ ರಾಮ ಮಂತ್ರವ ಜಪೀಸೋ' ಸಂತರು ಮಹಂತರು ಮಹಾ ಮಹಿಮರು ಇದಕ್ಕೆ ಸಾಕ್ಷಿಯಾಗಿದ್ದಾರೆ. ಶಶಿವದನನಾಗಿರುವ ಸತ್ಯ ಸಾಯಿಬಾಬಾ ಶ್ರೀಕರನಾಗಿ, ಪ್ರಾಣಪತಿಯಾಗಿ ಪ್ರಾಣ ಪತಿ ಯಾರು 'ಪವಮಾನ ಜಗದಪ್ರಾಣ' ಮಾರುತಿರಾಯನ ರೂಪದಲ್ಲಿ ಮುಮುಕ್ಷುಗಳ ಹೃದಯದಲ್ಲಿ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಆನಂದ ಸಾಗರದಲ್ಲಿ ತೇಲಾಡುತ್ತಾರೆ. ಸದ್ವಿವೇಕ ಜಾಗೃತಿಯಾಗಿದ್ದರೆ ಸದ್ಬುಧ್ಧಿ ವಿಕಾಸವಾಗುತ್ತದೆ. ನಾವು ಒಂದೇ ಒಂದು ಹೆಜ್ಜೆಯನ್ನು ಮುಂದಿಟ್ಟರೆ ಭಗವಂತ ಹತ್ತು ಹೆಜ್ಜೆ ಮುಂದೆ ಬರುತ್ತಾನೆ ಹತ್ತು ಹೆಜ್ಜೆ ಮುಂದೆ ಸರಿದರೆ ನೂರು ಹೆಜ್ಜೆ ಸಮೀಪಕ್ಕೆ ಬರುತ್ತಾನೆ. ನಿಃಸಂಶಯವಾಗಿ ಭೋಗ ಭಾಗ್ಯಗಳ ಲಾಭವಾಗುತ್ತದೆ. ಸ್ವಂತಕ್ಕೆಂದೇ ಬೋಧಿಸಿದ ಒಳ್ಳೆಯ ವಿಷಯಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವ ಒಂದು ವಿಶೇಷ ಪ್ರಯತ್ನವಾಗಿದೆ.. ಓದಿರುವ ವಿಷಯಗಳ ಅನುಭೂತಿ ಅಭಿವ್ಯಕ್ತಿಯಾಗಬೇಕು. ಅಲ್ಲಿ ಭಗವಂತನ ಅಧಿಷ್ಠಾನದ ಅರಿವಾಗುತ್ತದೆ.