ಜಯ ಜಗದಾಂಬೆ

ಜಯ ಜಗದಾಂಬೆ

ಕವನ

ಶಾಂಭವಿ ಶಂಕರಿ ಶ್ರೀ

ಭುವನೇಶ್ವರಿ

ಅಂಬಿಕೆ ಪಾದಕೆ ಶರಣೆಂಬೆ

ಶುಂಭರ ಮರ್ಧಿನಿ ಮಹಿಷಾ ಮರ್ಧಿನಿ

ಶಂಭೋ‌ ಶಂಕರಿ ದುರ್ಗಾಂಬೆ ||

 

ಪಾಪವ ನಾಷಿನಿ ಐಗಿರಿ ನಂದಿನಿ

ಕೋಪವ ನಿಗ್ರಹ ಮಾಡಮ್ಮ

ತುಪ್ಪದ ದೀಪಾರಾಧನೆ ಗೈಯುವೆ

ತಪ್ಪನು ಮನ್ನಿಸಿ ಪೊರೆಯಮ್ಮ ||

 

ತ್ರಿಶೂಲ ಧಾರಿಣಿ ಪರಶಿವನ ರಮಣಿ

ಕಷ್ಟವ ಕಳೆಯೇ ಜಗದಾಂಬೆ

ದಶಮಿಯ ಪೂಜೆಗೆ ವಶವಾಗೊ ದೇವಿ

ಕೃಶವಾದ ಬಾಳನು ಬೆಳಗೆಂಬೆ ||

 

ಸರಸ್ವತಿ ತೀರ್ಥದಿ ಮೀಯುತ ಭಕ್ತರು

ಪ್ರೀತಿಯ ಹರಕೆಯ ಸಲ್ಲಿಪರು

ಅಂಬೂ ತೀರ್ಥದಿ ತೆಪ್ಪೋತ್ಸವದೊಳು

ತೇಲಲು ಕಂದನ ಅರ್ಪಿಪರು ||

 

ಮೂಜಗ ವಂದಿತೆ ಸೌಭಾಗ್ಯ ನಿಧಿಯೆ

ದೀನರ ಸಂಕಟ ಕಳೆಯಮ್ಮ

ವಾತಾಪಿ ವಾಸಿನಿ ಚಾಲುಕ್ಯ ಮಾತೆಯೆ

ಕಲಿಯುಗ ಕಲ್ಪತರು ನೀನಮ್ಮ ||

-ಈರಪ್ಪ ಬಿಜಲಿ ಕೊಪ್ಪಳ 

 

ಚಿತ್ರ್